kn_tw/bible/other/sleep.md

29 lines
3.9 KiB
Markdown

# ನಿದ್ರಿಸು, ನಿದ್ರೆಯಲ್ಲಿ ಬೀಳುವುದು, ನಿದ್ದೆ ಮಾಡಿತು, ನಿದ್ದೆ ಮಾಡುವವನು, ನಿದ್ದೆಯಿಲ್ಲದಿರುವುದು
## ಪದದ ಅರ್ಥವಿವರಣೆ:
ಈ ಎಲ್ಲಾ ಪದಗಳು ಮರಣಕ್ಕೆ ಸಂಬಂಧಿತವಾಗಿ ಅಲಂಕಾರಿಕ ಅರ್ಥಗಳನ್ನು ಹೊಂದಿರುತ್ತದೆ.
* “ನಿದ್ದೆ” ಅಥವಾ “ನಿದ್ದೆಯಲ್ಲಿರುವುದು” ಎನ್ನುವ ಪದಗಳಿಗೆ ರೂಪಕಾಲಂಕಾರ ಅರ್ಥವು “ಮರಣ ಹೊಂದಿರುವ” ಎಂದಾಗಿರುತ್ತದೆ. (ನೋಡಿರಿ: ರೂಪಕಾಲಂಕಾರ)
* “ನಿದ್ರೆಯಲ್ಲಿ ಬೀಳುವುದು” ಎನ್ನುವ ಮಾತಿಗೆ ನಿದ್ದೆ ಮಾಡುವುದಕ್ಕೆ ಆರಂಭಿಸುವುದು ಎಂದರ್ಥ, ಅಥವಾ ಅಲಂಕಾರಿಕವಾಗಿ ಸಾಯುವದು ಎಂದರ್ಥ.
* “ಒಬ್ಬರ ಪಿತೃಗಳೊಂದಿಗೆ ನಿದ್ರಿಸು” ಎನ್ನುವ ಮಾತಿಗೆ ಒಬ್ಬರ ಪೂರ್ವಜರು ಸತ್ತಿರುವ ರೀತಿಯಲ್ಲಿ ಸಾಯುವುದು ಎಂದರ್ಥ, ಅಥವಾ ಒಬ್ಬರ ಪಿತೃಗಳು ಮರಣಿಸಿದ ಹಾಗೆಯೇ ಮರಣಿಸುವುದು ಎಂದರ್ಥ.
## ಅನುವಾದ ಸಲಹೆಗಳು:
* “ನಿದ್ರೆಯಲ್ಲಿ ಬೀಳುವುದು” ಎನ್ನುವ ಮಾತನ್ನು “ಆಕಸ್ಮಿಕವಾಗಿ ನಿದ್ದೆಯಲ್ಲಿ ಜಾರಿಹೋಗುವುದು” ಅಥವಾ “ನಿದ್ದೆಯನ್ನು ಆರಂಭಿಸುವುದು” ಅಥವಾ “ಸಾಯುವುದು” ಎಂದು ಸಂದರ್ಭಾನುಸಾರವಾಗಿ ಈ ಮಾತುಗಳನ್ನು ಅನುವಾದ ಮಾಡಬಹುದು.
* ಸೂಚನೆ: ಓದುಗಾರರು ಇದರ ಅರ್ಥವನ್ನು ಮಾಡಿಕೊಳ್ಳದ ಕೆಲವು ಸಂದರ್ಭದಲ್ಲಿ ರೂಪಕಾಲಂಕಾರವಾದ ಮಾತನ್ನು ಇಟ್ಟಿರುವುದೇ ತುಂಬಾ ಪ್ರಾಮುಖ್ಯ. ಉದಾಹರಣೆಗೆ, ಲಾಜರನು “ನಿದ್ದೆ ಮಾಡುತ್ತಿದ್ದಾನೆ” ಎಂದು ಯೇಸುವು ತನ್ನ ಶಿಷ್ಯರಿಗೆ ಹೇಳಿದಾಗ, ಅವರೆಲ್ಲರು ಲಾಜರನು ಸ್ವಾಭಾವಿಕವಾಗಿ ನಿದ್ದೆ ಮಾಡುತ್ತಿದ್ದಾನೆಂದು ಆಲೋಚನೆ ಮಾಡಿದ್ದರು. ಈ ಸಂದರ್ಭದಲ್ಲಿ ಈ ಮಾತನ್ನು “ಅವನು ಸತ್ತಿದ್ದಾನೆ” ಎಂದು ಅನುವಾದ ಮಾಡಿದರೆ ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ.
* ಕೆಲವೊಂದುಬಾರಿ “ನಿದ್ರಿಸು” ಮತ್ತು “ನಿದ್ದೆಯಲ್ಲಿರುವುದು” ಎನ್ನುವ ಪದಗಳು ಮರಣ ಅಥವಾ ಸಾಯುವುದು ಎನ್ನುವ ಅರ್ಥಗಳನ್ನು ಕೊಡದಿರುವಾಗ ಕೆಲವೊಂದು ಭಾಷೆಗಳಲ್ಲಿ ವಿಭಿನ್ನವಾದ ಪದಗಳನ್ನು ಉಪಯೋಗಿಸುತ್ತಾರೆ.
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಅರಸ.18:27-29](rc://*/tn/help/1ki/18/27)
* [1 ಥೆಸ್ಸ.04:14](rc://*/tn/help/1th/04/14)
* [ಅಪೊ.ಕೃತ್ಯ.07:60](rc://*/tn/help/act/07/60)
* [ದಾನಿ.12:02](rc://*/tn/help/dan/12/02)
* [ಕೀರ್ತನೆ.044:23](rc://*/tn/help/psa/044/023)
* [ರೋಮಾ.13:11](rc://*/tn/help/rom/13/11)
## ಪದ ಡೇಟಾ:
* Strong's: H1957, H3462, H3463, H7290, H7901, H8139, H8142, H8153, H8639, G879, G1852, G1853, G2518, G2837, G5258