kn_tw/bible/other/silver.md

26 lines
3.0 KiB
Markdown

# ಬೆಳ್ಳಿ
## ಪದದ ಅರ್ಥವಿವರಣೆ:
ಬೆಳ್ಳಿ ಎನ್ನುವುದು ನಾಣ್ಯಗಳನ್ನು, ರತ್ನಾಭರಣಗಳನ್ನು, ಪಾತ್ರೆಗಳನ್ನು ಮತ್ತು ಆಭರಣಗಳನ್ನು ಮಾಡುವುದಕ್ಕೆ ಹೊಳೆಯುತ್ತಿರುವ, ಬೂದು ಬಣ್ಣದಲ್ಲಿರುವ ಅಮೂಲ್ಯವಾದ ಲೋಹವಾಗಿರುತ್ತದೆ.
* ಅನೇಕ ವಿಧವಾದ ಪಾತ್ರೆಗಳಲ್ಲಿ ಬೆಳ್ಳಿ ಬಟ್ಟಲುಗಳು ಒಳಗೊಂಡಿರುತ್ತವೆ, ಮತ್ತು ಅಡುಗೆ ಮಾಡುವುದಕ್ಕೆ, ತಿನ್ನುವುದಕ್ಕೆ ಮತ್ತು ಬಡಿಸುವುದಕ್ಕೆ ಈ ವಸ್ತುಗಳನ್ನು ಉಪಯೋಗಿಸುತ್ತಾರೆ.
* ಬೆಳ್ಳಿ ಮತ್ತು ಬಂಗಾರಗಳನ್ನು ದೇವಾಲಯವನ್ನು ಮತ್ತು ಗುಡಾರವನ್ನು ನಿರ್ಮಿಸುವುದರಲ್ಲಿ ಉಪಯೋಗಿಸಿದ್ದಾರೆ. ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿ ಬೆಳ್ಳಿಯಿಂದ ಮಾಡಲ್ಪಟ್ಟ ಪಾತ್ರೆಗಳು ಇರುತ್ತವೆ.
* ಸತ್ಯವೇದದಲ್ಲಿ ಶೆಕೆಲ್ ಎನ್ನುವುದು ತೂಕದ ಒಂದು ಘಟಕವಾಗಿರುತ್ತದೆ, ಮತ್ತು ಕೊಂಡುಕೊಳ್ಳುವುದೆನ್ನುವುದು ಅನೇಕಬಾರಿ ಖರೀದಿಸಬೇಕಾದಾಗ ಬೆಳ್ಳಿಯಿಂದ ಮಾಡಲ್ಪಟ್ಟಿರುವ ಶೆಕೆಲುಗಳ ಸಂಖ್ಯೆಯು ಇರುತ್ತಿತ್ತು. ಹೊಸ ಒಡಂಬಡಿಕೆಯ ಕಾಲದ ಪ್ರಕಾರ ಶೆಕೆಲುಗಳಲ್ಲಿ ಅಳತೆ ಮಾಡುವ ಅನೇಕ ವಿಧವಾದ ತೂಕಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ತಯಾರು ಮಾಡುತ್ತಿದ್ದರು.
* ಯೋಸೇಫನ ಸಹೋದರರು ಆತನನ್ನು ಬೆಳ್ಳಿಯ ಇಪ್ಪತ್ತು ಶೆಕೆಲುಗಳಿಗೆ ಗುಲಾಮನನ್ನಾಗಿ ಮಾರಿದರು.
* ಯೇಸುವಿಗೆ ದ್ರೋಹ ಬಗೆದಿದ್ದಕ್ಕಾಗಿ ಯೂದನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನೀಡಲಾಯಿತು.
(ಈ ಪದಗಳನ್ನು ಸಹ ನೋಡಿರಿ : [ಗುಡಾರ](../kt/tabernacle.md), [ದೇವಾಲಯ](../kt/temple.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.18:9-11](rc://*/tn/help/1ch/18/09)
* [1 ಸಮು.02:36](rc://*/tn/help/1sa/02/36)
* [2 ಅರಸ.25:13-15](rc://*/tn/help/2ki/25/13)
* [ಅಪೊ.ಕೃತ್ಯ.03:4-6](rc://*/tn/help/act/03/04)
* [ಮತ್ತಾಯ.26:14-16](rc://*/tn/help/mat/26/14)
## ಪದ ಡೇಟಾ:
* Strong's: H3701, H3702, H7192, G693, G694, G695, G696, G1406