kn_tw/bible/other/shadow.md

26 lines
3.4 KiB
Markdown

# ನೆರಳು, ನೆರಳು ಕೊಡುವುದು, ಮಬ್ಬುಗವಿಸು, ಮಬ್ಬುಗವಿಸಿದೆ
## ಪದದ ಅರ್ಥವಿವರಣೆ:
“ನೆರಳು” ಎನ್ನುವ ಪದವು ಅಕ್ಷರಾರ್ಥವಾಗಿ ಒಂದು ವಸ್ತುವನ್ನು ಅಡ್ಡಿ ಇಟ್ಟು ಬೆಳಕು ಬರದಂತೆ ಮಾಡುವ ಕತ್ತಲನ್ನು ಸೂಚಿಸುತ್ತದೆ. ಇದಕ್ಕೆ ಅನೇಕ ಅಲಂಕಾರಿಕ ಅರ್ಥಗಳಿರುತ್ತವೆ.
* “ಮರಣದ ನೆರಳು” ಎನ್ನುವ ಮಾತಿಗೆ ಮರಣವು ಪ್ರಸ್ತುತವಾಗಿದೆ ಅಥವಾ ತುಂಬಾ ಹತ್ತಿರವಾಗಿದೆ ಎಂದರ್ಥ, ನೆರಳು ಬರುವುದಕ್ಕೆ ತನ್ನ ವಸ್ತುವನ್ನು ಸೂಚಿಸುವಂತೆಯೇ ಇದು ಮರಣವನ್ನು ಸೂಚಿಸುತ್ತದೆ.
* ಸತ್ಯವೇದದಲ್ಲಿ ಅನೇಕಬಾರಿ ಮನುಷ್ಯರ ಜೀವನವು ನೆರಳಿಗೆ ಹೋಲಿಸಲಾಗಿರುತ್ತದೆ, ಯಾಕಂದರೆ ಇದು ತುಂಬಾ ಹೆಚ್ಚಿನ ಸಮಯದವರೆಗೂ ಇರುವುದಿಲ್ಲ ಮತ್ತು ಇದು ಯಾವ ಪದಾರ್ಥವೂ ಆಗಿರುವುದಿಲ್ಲ.
* ಕೆಲವೊಂದುಬಾರಿ “ನೆರಳು” ಎನ್ನುವ ಪದವನ್ನು “ಕತ್ತಲು” ಎನ್ನುವ ಪದಕ್ಕೆ ಪರ್ಯಾಯ ಪದವನ್ನಾಗಿ ಉಪಯೋಗಿಸಲಾಗಿರುತ್ತದೆ.
* ದೇವರ ರೆಕ್ಕೆಗಳ ಅಥವಾ ಕೈಗಳ ನೆರಳಿನಲ್ಲಿ ಸಂರಕ್ಷಿಸಲ್ಪಡುವುದರ ಕುರಿತಾಗಿ ಅಥವಾ ಮರೆಯಾಗಿರುವುದರ ಕುರಿತಾಗಿ ಸತ್ಯವೇದವು ಮಾತನಾಡುತ್ತದೆ. ಇದು ಅಪಾಯಕರವಾದ ಸ್ಥಿತಿಯಿಂದ ಸಂರಕ್ಷಿಸಲ್ಪಡುವ ಮತ್ತು ಮರೆಯಾಗಿರುವ ಚಿತ್ರಣವಾಗಿರುತ್ತದೆ. ಈ ಸಂದರ್ಭಗಳಲ್ಲಿ “ನೆರಳು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಛಾಯೆ” ಅಥವಾ “ಸಂರಕ್ಷಣೆ” ಅಥವಾ “ಸಂರಕ್ಷಣೆ” ಎನ್ನುವ ಪದಗಳು ಒಳಗೊಂಡಿರುತ್ತವೆ.
* “ನೆರಳು” ಎನ್ನುವ ಪದವನ್ನು ನಿಜವಾದ ನೆರಳನ್ನು ಸೂಚಿಸುವುದಕ್ಕೆ ಉಪಯೋಗಿಸುವ ಸ್ಥಳೀಯ ಪದವನ್ನು ಉಪಯೋಗಿಸಿ ಅನುವಾದ ಮಾಡುವ ಉತ್ತಮವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಕತ್ತಲು](../other/darkness.md), [ಬೆಳಕು](../other/light.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಅರಸ.20:8-9](rc://*/tn/help/2ki/20/08)
* [ಆದಿ.19:6-8](rc://*/tn/help/gen/19/06)
* [ಯೆಶಯ.30:1-2](rc://*/tn/help/isa/30/01)
* [ಯೆರೆ.06:4-5](rc://*/tn/help/jer/06/04)
* [ಕೀರ್ತನೆ.017:8-10](rc://*/tn/help/psa/017/008)
## ಪದ ಡೇಟಾ:
* Strong's: H2927, H6738, H6751, H6752, H6754, H6757, H6767, G644, G1982, G2683, G4639