kn_tw/bible/other/seize.md

3.9 KiB

ಬಂಧಿಸು, ಬಂಧಿಸುವುದು, ಬಂಧಿಸಲಾಗಿದೆ, ಸ್ವಾಧೀನ

ಪದದ ಅರ್ಥವಿವರಣೆ:

“ಬಂಧಿಸು” ಎನ್ನುವ ಪದಕ್ಕೆ ಬಲಾತ್ಕಾರದಿಂದ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಹಿಡಿದುಕೊಳ್ಳುವುದು ಅಥವಾ ತೆಗೆದುಕೊಳ್ಳುವುದು. ಯಾರಾದರೊಬ್ಬರ ಮೇಲೆ ನಿಯಂತ್ರಣ ಹೊಂದಿರುವುದು ಮತ್ತು ಅವರನ್ನು ಮೀರುವುದು ಎಂದರ್ಥವೂ ಬರುತ್ತದೆ.

  • ಒಂದು ಪಟ್ಟಣವು ಸೈನಿಕರ ಬಲತ್ಕಾರದಿಂದ ವಶಪಡಿಸಿಕೊಂಡಿದ್ದರೆ, ಸೈನಿಕರು ಜಯಿಸಿದ ಜನರ ಬೆಲೆಯುಳ್ಳ ಅಸ್ತಿಪಾಸ್ತಿಗಳನ್ನು ಬಂಧಿಸುತ್ತಾರೆ.
  • ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದಾಗ, ಒಬ್ಬ ವ್ಯಕ್ತಿ “ಭಯದಿಂದ ಬಂಧಿಸಲ್ಪಟ್ಟವನಾಗಿ” ವಿವರಿಸಲ್ಪಡುತ್ತಾನೆ. ಈ ಮಾತಿಗೆ ಆ ವ್ಯಕ್ತಿ ಆಕಸ್ಮಿಕವಾಗಿ “ಭಯದಿಂದ ಜಯಿಸಲ್ಪಟ್ಟಿರುತ್ತಾನೆ” ಎಂದರ್ಥವಾಗಿರುತ್ತದೆ. ಒಬ್ಬ ವ್ಯಕ್ತಿ “ಭಯದಿಂದ ಬಂಧಿಸಲ್ಪಟ್ಟಿದ್ದರೆ”, ಆ ವ್ಯಕ್ತಿ “ಆಕಸ್ಮಿಕವಾಗಿ ತುಂಬಾ ಹೆಚ್ಚಾಗಿ ಹೆದರಿಕೆ ಹೊಂದಿದ್ದಾನೆ” ಎಂದೂ ಹೇಳಲಾಗುತ್ತದೆ.
  • ಒಬ್ಬ ಸ್ತ್ರೀಯನ್ನು “ಬಂಧಿಸುವ” ಹೆರಿಗೆ ನೋವುಗಳ ಸಂದರ್ಭದಲ್ಲಿ, ನೋವುಗಳು ಆಕಸ್ಮಿಕವಾಗಿ ಬಂದಿವೆ ಮತ್ತು ಮೀರಿವೆ ಎನ್ನುವ ಅರ್ಥವನ್ನು ಕೊಡುತ್ತದೆ. ಆ ಸ್ತ್ರೀಯಳ ಮೇಲೆ ನೋವುಗಳು “ಮೀರಿ ಬಂದಿವೆ” ಅಥವಾ “ಇದ್ದಕ್ಕಿದ್ದಂತೆ ಆಕೆಗೆ ಬಂದಿವೆ” ಎಂದೂ ಹೇಳುವುದರ ಮೂಲಕ ಈ ಪದವನ್ನು ಅನುವಾದ ಮಾಡಬಹುದು.
  • ಈ ಪದವನ್ನು “ನಿಯಂತ್ರಿಸು” ಅಥವಾ “ಆಕಸ್ಮಿಕವಾಗಿ ಹೊಂದು” ಅಥವಾ “ಹಿಡಿ” ಎಂದೂ ಅನುವಾದ ಮಾಡಬಹುದು.
  • “ಆಕೆಯೊಂದಿಗೆ ಮಲಗಿದನು ಮತ್ತು ಬಂಧಿಸಲ್ಪಟ್ಟನು” ಎನ್ನುವ ಮಾತನ್ನು “ಆಕೆಯ ಮೇಲೆ ತನ್ನನ್ನು ತಾನು ಬಲವಂತಿಕೆ ಮಾಡಿಕೊಂಡನು” ಅಥವಾ “ಆಕೆಯನ್ನು ಭಂಗಪಡಿಸಿದನು” ಅಥವಾ “ಆಕೆಯನ್ನು ಮಾನಭಂಗ ಮಾಡಿದನು” ಎಂದೂ ಅನುವಾದ ಮಾಡಬಹುದು. ಈ ಉದ್ದೇಶದ ಅನುವಾದವು ಅಂಗೀಕರವಾಗಿರುವಂತೆ ನೋಡಿಕೊಳ್ಳಿರಿ.

(ನೋಡಿರಿ : ಸೌಮ್ಯೋಕ್ತಿಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H270, H1497, H2388, H3027, H3920, H3947, H4672, H5377, H5860, H6031, H7760, H8610, G724, G1949, G2638, G2902, G2983, G4815, G4884