kn_tw/bible/other/rest.md

34 lines
6.5 KiB
Markdown

# ವಿಶ್ರಾಂತಿ, ವಿಶ್ರಾಂತಿ ಕೊಡುವುದು, ವಿಶ್ರಾಂತಿ ತೆಗೆದುಕೊಳ್ಳಲಾಗಿದೆ, ವಿಶ್ರಮಿಸುವುದು, ವಿಶ್ರಾಂತಿ ಇಲ್ಲದ
## ಪದದ ಅರ್ಥವಿವರಣೆ:
“ವಿಶ್ರಾಂತಿ” ಎನ್ನುವ ಪದಕ್ಕೆ ಅಕ್ಷರಾರ್ಥವಾಗಿ ಬಲವನ್ನು ತಿರುಗಿ ಹೊಂದಿಕೊಳ್ಳುವುದಕ್ಕೆ ಅಥವಾ ವಿರಾಮ ತೆಗೆದುಕೊಳ್ಳುವ ಕ್ರಮದಲ್ಲಿ ಕೆಲಸವನ್ನು ನಿಲ್ಲಿಸುವುದು ಎಂದರ್ಥ. “ಇನ್ನೊಂದರಿಂದ ವಿಶ್ರಾಂತಿ” ಎನ್ನುವ ಮಾತು ಯಾವುದಾದರೊಂದರ ಉಳಿಕೆಯನ್ನು ಸೂಚಿಸುತ್ತದೆ. “ವಿಶ್ರಾಂತಿ” ಎನ್ನುವ ಪದಕ್ಕೆ ಕೆಲಸವನ್ನು ನಿಲ್ಲಿಸು ಎಂದರ್ಥ.
* ಯಾವುದಾದರೊಂದರ ಸ್ಥಳದಲ್ಲಿ “ವಿಶ್ರಾಂತಿ” ತೆಗೆದುಕೊಳ್ಳುವುದು ಎಂದರೆ ಒಂದು ಸ್ಥಳದಲ್ಲಿ “ನಿಂತಿರುವುದು” ಅಥವಾ “ಕುಳಿತಿರುವುದು” ಎಂದರ್ಥವಾಗಿರುತ್ತದೆ.
* ಒಂದು ಹಡಗು ಯಾವುದಾದರೊಂದರ ಸ್ಥಳಕ್ಕೆ “ಬಂದು ವಿಶ್ರಮಿಸಿದೆ” ಎಂದರೆ ಅದನ್ನು ಆ ಸ್ಥಳದಲ್ಲಿ “ನಿಲ್ಲಿಸಿದೆ” ಅಥವಾ “ತಲುಪಿದೆ” ಎಂದರ್ಥವಾಗಿರುತ್ತದೆ.
* ಒಬ್ಬ ವ್ಯಕ್ತಿ ಅಥವಾ ಒಂದು ಪ್ರಾಣಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ, ತಮ್ಮನ್ನು ತಾವು ತಂಪುಗೊಳಿಸಿಕೊಳ್ಳುವ ಕ್ರಮದಲ್ಲಿ ಅವರು ಕುಳಿತಿದ್ದಾರೆ, ಮಲಗಿದ್ದಾರೆ ಅಥವಾ ಅವು ಕುಳಿತಿವೆ ಅಥವಾ ಮಲಗಿವೆ ಎಂದರ್ಥವಾಗಿರುತ್ತದೆ.
* ಇಸ್ರಾಯೇಲ್ಯರು ವಾರದ ಏಳನೇಯ ದಿನದಂದು ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ದೇವರು ಆಜ್ಞಾಪಿಸಿದ್ದಾರೆ. ಕೆಲಸ ಮಾಡದ ಈ ದಿನವನ್ನು “ಸಬ್ಬತ್” ದಿನ ಎಂದು ಕರೆಯುತ್ತಾರೆ.
* ಯಾವುದಾದರೊಂದರ ಮೇಲೆ ಒಂದು ವಸ್ತುವನ್ನು ವಿಶ್ರಾಂತಿಗೊಳಿಸುವುದು ಎಂದರೆ ಆ ಸ್ಥಳದಲ್ಲಿ ಅದನ್ನು “ಇಡುವುದು” ಅಥವಾ “ನಿಲ್ಲಿಸುವುದು” ಎಂದರ್ಥವಾಗಿರುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “(ತನ್ನನ್ನು ತಾನು) ವಿಶ್ರಾಂತಿಗೊಳಿಸಿಕೊಳ್ಳುವುದು” ಎನ್ನುವ ಮಾತನ್ನು “ಕೆಲಸವನ್ನು ನಿಲ್ಲಿಸುವುದು” ಅಥವಾ “ತನ್ನನ್ನು ತಾನು ತಂಪು ಮಾಡಿಕೊಳ್ಳುವುದು” ಅಥವಾ “ಭಾರಗಳನ್ನು ಒಯ್ಯುವುದನ್ನು ನಿಲ್ಲಿಸುವುದು” ಎಂದೂ ಅನುವಾದ ಮಾಡಬಹುದು.
* ಯಾವುದಾದರೊಂದರ ಮೇಲೆ ಒಂದು ವಸ್ತುವನ್ನು “ವಿಶ್ರಾಂತಿಗೊಳಿಸುವುದು” ಎನ್ನುವ ಮಾತನ್ನು ಯಾವುದಾದರೊಂದರ ಆ ವಸ್ತುವನ್ನು “ಇಡುವುದು” ಅಥವಾ “ನಿಲ್ಲಿಸುವುದು” ಅಥವಾ “ಜೋಡಿಸುವುದು” ಎಂದೂ ಅನುವಾದ ಮಾಡಬಹುದು.
* “ನಾನು ನಿನಗೆ ವಿಶ್ರಾಂತಿಯನ್ನು ಕೊಡುತ್ತೇನೆ” ಎಂದು ಯೇಸು ಹೇಳಿದಾಗ, ಇದಕ್ಕೆ “ನೀನು ಹೊತ್ತಿಕೊಂಡು ಹೋಗುವ ಭಾರವನ್ನು ನಾನು ನಿಲ್ಲಿಸುತ್ತೇನೆ” ಅಥವಾ “ಸಮಾಧಾನವಿರುವಂತೆ ನಾನು ನಿನಗೆ ಸಹಾಯ ಮಾಡುತ್ತೇನೆ” ಅಥವಾ “ನನ್ನಲ್ಲಿ ಭರವಸೆವಿಡುವುದಕ್ಕೆ ಮತ್ತು ನನ್ನಲ್ಲಿ ವಿಶ್ರಮಿಸುವುದಕ್ಕೆ ನಾನು ನಿನ್ನನ್ನು ಬಲಗೊಳಿಸುತ್ತೇನೆ” ಎಂದೂ ಅನುವಾದ ಮಾಡಬಹುದು.
* “ಅವರು ನನ್ನ ವಿಶ್ರಾಂತಿಯಲ್ಲಿ ಪ್ರವೇಶಿಸುವುದಿಲ್ಲ” ಎಂದು ದೇವರು ಹೇಳಿದಾಗ, ಈ ಮಾತನ್ನು “ಅವರು ವಿಶ್ರಾಂತಿಯ ನನ್ನ ಆಶೀರ್ವಾದಗಳನ್ನು ಅನುಭವಿಸುವುದಿಲ್ಲ” ಅಥವಾ “ನನ್ನಲ್ಲಿ ಭರವಸೆವಿಡುವುದರ ಮೂಲಕ ಬರುವಂತಹ ಸಂತೋಷ, ಸಮಾಧಾನಗಳನ್ನು ಅವರು ಅನುಭವಿಸುವುದಿಲ್ಲ” ಎಂದೂ ಅನುವಾದ ಮಾಡಬಹುದು.
* “ಶೇಷ” ಎನ್ನುವ ಪದವನ್ನು “ಉಳಿದಿರುವವುಗಳು” ಅಥವಾ “ಇತರ ಎಲ್ಲಾ ಜನರು” ಅಥವಾ “ಬಿಡಲ್ಪಟ್ಟಿರುವ ಪ್ರತಿಯೊಂದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಶೇಷ](../kt/remnant.md), [ಸಬ್ಬತ್](../kt/sabbath.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೂರ್ವ.06:40-42](rc://*/tn/help/2ch/06/40)
* [ಆದಿ.02:1-3](rc://*/tn/help/gen/02/01)
* [ಯೆರೆ.06:16-19](rc://*/tn/help/jer/06/16)
* [ಮತ್ತಾಯ.11:28-30](rc://*/tn/help/mat/11/28)
* [ಪ್ರಕ.14:11-12](rc://*/tn/help/rev/14/11)
## ಪದ ಡೇಟಾ:
* Strong's: H14, H1824, H1826, H2308, H3498, H3499, H4494, H4496, H4771, H5117, H5118, H5183, H5564, H6314, H7258, H7280, H7599, H7604, H7605, H7606, H7611, H7673, H7677, H7901, H7931, H7954, H8058, H8172, H8252, H8300, G372, G373, G425, G1515, G1879, G1954, G1981, G2270, G2663, G2664, G2681, G2838, G3062, G4520