kn_tw/bible/other/refuge.md

34 lines
5.7 KiB
Markdown

# ಆಶ್ರಯ, ನಿರಾಶ್ರಿತ, ನಿರಾಶ್ರಿತರು, ತಂಗುದಾಣ, ತಂಗುದಾಣಗಳು, ಆಶ್ರಯ ಕೊಟ್ಟಿದೆ, ಆಶ್ರಯ ಕೊಡುವುದು
## ಪದದ ಅರ್ಥವಿವರಣೆ:
“ಆಶ್ರಯ” ಎನ್ನುವ ಪದವು ಸಂರಕ್ಷಣೆ ಮತ್ತು ಭದ್ರತೆ ಇರುವ ಸ್ಥಿತಿ ಅಥವಾ ಸ್ಥಳವನ್ನು ಸೂಚಿಸುತ್ತದೆ. “ನಿರಾಶ್ರಿತ” ಎಂದರೆ ಸಂರಕ್ಷಣೆಯ ಸ್ಥಳವನ್ನು ಹುಡುಕುತ್ತಿರುವ ವ್ಯಕ್ತಿ ಎಂದರ್ಥ. “ತಂಗುದಾಣ” ಎನ್ನುವುದು ಅಪಾಯಕರವಾದ ಸ್ಥಿತಿಯಿಂದ ಸಂರಕ್ಷಿಸುವ ಸ್ಥಳವನ್ನು ಸೂಚಿಸುತ್ತದೆ.
* ಸತ್ಯವೇದದಲ್ಲಿ ದೇವರ ಜನರು ಸಂರಕ್ಷಣೆಯಿಂದ ಇರುವ ಸ್ಥಳವನ್ನಾಗಿ ದೇವರು ಒಂದು ಆಶ್ರಯ ಸ್ಥಾನವನ್ನಾಗಿ ಸೂಚಿಸಲ್ಪಟ್ಟಿರುತ್ತದೆ.
* ಹಳೇ ಒಡಂಬಡಿಕೆಯಲ್ಲಿ “ಆಶ್ರಯ ಪಟ್ಟಣ” ಎನ್ನುವ ಪದವು ಅನೇಕ ಪಟ್ಟಣಗಳಲ್ಲಿ ಒಂದು ಪಟ್ಟಣವನ್ನು ಸೂಚಿಸುತ್ತದೆ, ಇದು ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಒಬ್ಬ ವ್ಯಕ್ತಿಯನ್ನು ಸಾಯಿಸಿದಾಗ, ಸತ್ತಂತ ವ್ಯಕ್ತಿಯ ಜನರ ಸೇಡಿನಿಂದ ತಪ್ಪಿಸಿಕೊಂಡು ಸಂರಕ್ಷಣೆಗಾಗಿ ಹೋಗುವ ಪಟ್ಟಣವನ್ನು ಸೂಚಿಸುತ್ತದೆ.
* “ತಂಗುದಾಣ” ಎನ್ನುವ ಪದವು ಅನೇಕಬಾರಿ ಜನರಿಗೆ ಅಥವಾ ಪ್ರಾಣಿಗಳಿಗೆ ಸಂರಕ್ಷಣೆಯನ್ನು ಕೊಡುವ ಭವನವನ್ನಾಗಿ ಅಥವಾ ಮೇಲ್ಛಾವಣಿಯನ್ನಾಗಿ ನಿರ್ಮಿಸಿರುವ ಭೌತಿಕ ಕಟ್ಟಡವನ್ನು ಸೂಚಿಸುತ್ತದೆ.
* ಕೆಲವೊಂದುಬಾರಿ “ತಂಗುದಾಣ” ಎನ್ನುವ ಪದಕ್ಕೆ “ಸಂರಕ್ಷಣೆ” ಎಂದರ್ಥ, ಲೋಟನು ತನ್ನ ಅತಿಥಿಗಳಿಗೆ ತನ್ನ ಮನೆಯಲ್ಲಿ “ತಂಗುದಾಣವಾಗಬೇಕೆಂದು” ಹೇಳಿದ ಮಾತಿನಂತಿರುತ್ತದೆ. ಅವರು ಸುರಕ್ಷಿತವಾಗಿರುತ್ತಾರೆಂದು ಅವನು ಹೇಳುತ್ತಿದ್ದಾನೆ, ಯಾಕಂದರೆ ತನ್ನ ಕುಟುಂಬದವರಂತೆ ಅವರನ್ನು ಸಂರಕ್ಷಿಸಲು ಅವನು ಬಾಧ್ಯತೆಯನ್ನು ತೆಗೆದುಕೊಳ್ಳುತ್ತಿದ್ದಾನೆ.
## ಅನುವಾದ ಸಲಹೆಗಳು:
* “ಆಶ್ರಯ” ಎನ್ನುವ ಪದವನ್ನು “ಸುರಕ್ಷಿತವಾದ ಸ್ಥಳ” ಅಥವಾ “ಸಂರಕ್ಷಣೆಯ ಸ್ಥಳ” ಎಂದೂ ಅನುವಾದ ಮಾಡಬಹುದು.
* “ನಿರಾಶ್ರಿತರು” ಆಗಿರುವ ಜನರು ಅಪಾಯಕರವಾದ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳುವುದಕ್ಕೆ ತಮ್ಮ ಮನೆಗಳನ್ನು ಬಿಟ್ಟು ಬರುತ್ತಾರೆ, ಈ ಮಾತನ್ನು “ಅನ್ಯರು,” “ಮನೆಗಳಿಲ್ಲದ ಜನರು”, ಅಥವಾ “ದೇಶಭ್ರಷ್ಟರು” ಎಂದೂ ಅನುವಾದ ಮಾಡಬಹುದು.
* ಸಂದರ್ಭಾನುಸಾರವಾಗಿ, “ತಂಗುದಾಣ” ಎನ್ನುವ ಪದವನ್ನು “ಸಂರಕ್ಷಿಸುವುದು” ಅಥವಾ “ಸಂರಕ್ಷಣೆ” ಅಥವಾ “ಸಂರಕ್ಷಿತವಾದ ಸ್ಥಳ” ಎಂದೂ ಅನುವಾದ ಮಾಡಬಹುದು.
* ಇದು ಭೌತಿಕವಾದ ನಿರ್ಮಾಣವನ್ನು ಸೂಚಿಸಿದರೆ, “ತಂಗುದಾಣ” ಎನ್ನುವ ಪದವನ್ನು “ಸಂರಕ್ಷಿಸುವ ಭವನ” ಅಥವಾ “ಸುರಕ್ಷಿತವಾದ ಮನೆ” ಎಂದೂ ಅನುವಾದ ಮಾಡಬಹುದು.
* “ಸುರಕ್ಷಿತವಾದ ತಂಗುದಾಣದೊಳಗೆ” ಎನ್ನುವ ಮಾತನ್ನು “ಸುರಕ್ಷಿತವಾದ ಸ್ಥಳದೊಳಗೆ” ಅಥವಾ “ಸಂರಕ್ಷಿಸುವ ಸ್ಥಳದೊಳಗೆ” ಎಂದೂ ಅನುವಾದ ಮಾಡಬಹುದು.
* “ತಂಗುದಾಣವನ್ನು ಹುಡುಕು” ಅಥವಾ “ಆಶ್ರಯವನ್ನು ಪಡೆದುಕೋ” ಅಥವಾ “ಆಶ್ರಯವನ್ನು ಹೊಂದು” ಎನ್ನುವ ಪದಗಳನ್ನೂ “ಸುರಕ್ಷಿತವಾದ ಸ್ಥಳವನ್ನು ಪಡೆದುಕೋ” ಅಥವಾ “ಸುರಕ್ಷಿತವಾದ ಸ್ಥಳದೊಳಗೆ ಒಬ್ಬರನ್ನು ಸೇರಿಸು” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಸಮು.22:3-4](rc://*/tn/help/2sa/22/03)
* [ಧರ್ಮೋ.32:37-38](rc://*/tn/help/deu/32/37)
* [ಯೆಶಯಾ.23:13-14](rc://*/tn/help/isa/23/13)
* [ಯೆರೆ.16:19-21](rc://*/tn/help/jer/16/19)
* [ಅರಣ್ಯ.35:24-25](rc://*/tn/help/num/35/24)
* [ಕೀರ್ತನೆ.046:1-3](rc://*/tn/help/psa/046/001)
* [ಕೀರ್ತನೆ.028:6-8](rc://*/tn/help/psa/028/006)
## ಪದ ಡೇಟಾ:
* Strong's: H2620, H4268, H4498, H4585, H4733, H4869