kn_tw/bible/other/possess.md

7.0 KiB

ಸ್ವಾಧೀನಪಡಿಸಿಕೊ, ಸ್ವಾಧೀನ ಮಾಡಿಕೊಳ್ಳಲಾಗಿದೆ, ಸ್ವಾಸ್ಥ್ಯ, ಸ್ವಾಸ್ಥ್ಯಗಳು ಹೊರದೂಡು

ಸತ್ಯಾಂಶಗಳು:

“ಸ್ವಾಧೀನಪಡಿಸಿಕೊ” ಮತ್ತು “ಸ್ವಾಧೀನ ಮಾಡಿಕೊಳ್ಳುವುದು” ಎನ್ನುವ ಪದಗಳು ಸಾಧಾರಣವಾಗಿ ಯಾವುದಾದರೊಂದನ್ನು ಸ್ವಂತ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ. ಒಂದು ಭೂಭಾಗವನ್ನು ವಶಪಡಿಸಿಕೊಳ್ಳುವುದನ್ನು ಅಥವಾ ಯಾವುದಾದರೊಂದರ ಮೇಲೆ ನಿಯಂತ್ರಣ ಪಡೆದುಕೊಳ್ಳುವುದನ್ನು ಆ ಪದಗಳು ವಿವರಿಸುತ್ತವೆ.

  • ಹಳೇ ಒಡಂಬಡಿಕೆಯಲ್ಲಿ ಈ ಪದವು ಅನೇಕಬಾರಿ ಒಂದು ಭೂಮಿಯನ್ನು “ಸ್ವಾಧೀನಪಡಿಸಿಕೊಳ್ಳುವುದು” ಅಥವಾ “ ಸ್ವಾಸ್ಟ್ಯವನ್ನು ಹೊಂದಿಕೊಳ್ಳುವುದು” ಎನ್ನುವ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
  • ಕಾನಾನ್ ಭೂಮಿಯನ್ನು “ಸ್ವಾಧೀನಮಾಡಿಕೊಳ್ಳಬೇಕೆಂದು” ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದಾಗ, ಇದಕ್ಕೆ ಅವರು ಆ ಭೂಮಿಯೊಳಗೆ ಪ್ರವೇಶಿಸಿ, ಅಲ್ಲಿ ನಿವಾಸವಾಗಿರಬೇಕೆಂದು ಅದರ ಅರ್ಥವಾಗಿರುತ್ತದೆ. ಇದರಲ್ಲಿ ಮೊಟ್ಟ ಮೊದಲು ಆ ಭೂಮಿಯಲ್ಲಿ ಜೀವಿಸುತ್ತಿರುವ ಕಾನಾನ್ ಜನರನ್ನು ಜಯಿಸುವ ಕಾರ್ಯವು ಒಳಗೊಂಡಿರುತ್ತದೆ.
  • “ಇಸ್ರಾಯೇಲ್ಯರ ಸ್ವಾಸ್ಥ್ಯವಾಗಿ” ಕಾನಾನ್ ಭೂಮಿಯನ್ನು ನಾನು ಅವರಿಗೆ ಕೊಡುತ್ತೇನೆ ಎಂದು ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದನು. ಈ ಮಾತನ್ನು “ಜೀವಿಸುವುದಕ್ಕೆ ಅವರಿಗೆ ಹಕ್ಕಿರುವ ಸ್ಥಳ” ಎಂಬುದಾಗಿಯೂ ಅನುವಾದ ಮಾಡಬಹುದು.
  • ಇಸ್ರಾಯೇಲ್ ಜನರು ಯೆಹೋವನ “ವಿಶೇಷವಾದ ಸ್ವತ್ತು ಅಥವಾ ಸ್ವಾಸ್ಥ್ಯ” ಎಂದು ಕರೆಯಲ್ಪಟ್ಟಿದ್ದರು. ಆತನನ್ನು ಆರಾಧನೆ ಮಾಡುವುದಕ್ಕೆ ಮತ್ತು ಆತನನ್ನು ಸೇವಿಸುವುದಕ್ಕೆ ವಿಶೇಷವಾಗಿ ಕರೆಯಲ್ಪಟ್ಟ ತನ್ನ ಜನರಾಗಿ ಅವರು ಆತನಿಗೆ ಸಂಬಂಧಪಟ್ಟವರು ಎಂದು ಇದಕ್ಕೆ ಅರ್ಥವಿರುತ್ತದೆ.

ಅನುವಾದ ಸಲಹೆಗಳು:

  • “ಸ್ವಾಧೀನಪಡಿಸಿಕೋ” ಎನ್ನುವ ಪದವನ್ನು “ಸ್ವಂತಮಾಡಿಕೊ” ಅಥವಾ “ಹೊಂದಿಕೊ” ಅಥವಾ “ಎಲ್ಲಾವುದರ ಮೇಲೆ ಅಧಿಕಾರ ಹೊಂದಿರು” ಎಂದೂ ಅನುವಾದ ಮಾಡಬಹುದು.
  • “ಸ್ವಾಸ್ತ್ಯವನ್ನು ತೆಗೆದುಕೋ” ಎನ್ನುವ ಮಾತನ್ನು “ನಿಯಂತ್ರಣ ತೆಗೆದುಕೋ” ಅಥವಾ “ವಶಪಡಿಸಿಕೋ” ಅಥವಾ “ಆ ಸ್ಥಳದಲ್ಲಿ ಜೀವಿಸು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • ಜನರು ಸ್ವಂತ ಮಾಡಿಕೊಂಡಿರುವ ವಸ್ತುಗಳನ್ನು ಸೂಚಿಸಿದಾಗ, “ಸ್ವಾಸ್ಥ್ಯಗಳು” ಎನ್ನುವ ಪದವನ್ನು “ಸಂಬಂಧಪಟ್ಟವುಗಳು” ಅಥವಾ “ಆಸ್ತಿ” ಅಥವಾ “ಸ್ವಂತಮಾಡಿಕೊಂಡಿರುವ ವಿಷಯಗಳು” ಅಥವಾ “ಸ್ವಾಧೀನ ಮಾಡಿಕೊಂಡಿರುವ ವಿಷಯಗಳು” ಎಂದೂ ಅನುವಾದ ಮಾಡಬಹುದು.
  • ಯೆಹೋವನು ಇಸ್ರಾಯೇಲ್ಯರನ್ನು ಕರೆದಾಗ, “ನನ್ನ ವಿಶೇಷವಾದ ಸ್ವಾಸ್ಥ್ಯ” ಎನ್ನುವ ಈ ಮಾತನ್ನು “ನನ್ನ ವಿಶೇಷವಾದ ಜನರು” ಅಥವಾ “ನನಗೆ ಸಂಬಂಧಪಟ್ಟ ಜನರು” ಅಥವಾ “ನಾನು ಪ್ರೀತಿಸಿದ ಮತ್ತು ಪಾಲಿಸಿದ ನನ್ನ ಜನರು” ಎಂದೂ ಅನುವಾದ ಮಾಡಬಹುದು.
  • “ಅವರು ಅವರ ಸ್ವಾಸ್ಥ್ಯವಾಗಿ ಮಾರ್ಪಟ್ಟಿದ್ದರು” ಎಂದು ಭೂಮಿಯನ್ನು ಸೂಚಿಸಿದಾಗ, ಈ ಮಾತಿಗೆ “ಅವರು ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ” ಅಥವಾ “ಭೂಮಿ ಅವರಿಗೆ ಸಂಬಂಧಪಟ್ಟಿದ್ದಾಗಿರುತ್ತದೆ” ಎಂದರ್ಥ.
  • “ಆತನ ಸ್ವಾಸ್ಥ್ಯದಲ್ಲಿ ಕಂಡುಬಂದಿದೆ” ಎನ್ನುವ ಮಾತನ್ನು “ಆತನು ಹಿಡಿದುಕೊಂಡಿರುವ” ಅಥವಾ “ಆತನೊಂದಿಗೆ ಅವನಿದ್ದಾನೆ” ಎಂದೂ ಅನುವಾದ ಮಾಡಬಹುದು.
  • “ನಿಮ್ಮ ಸ್ವಾಸ್ಥ್ಯವಾಗಿ” ಎನ್ನುವ ಮಾತನ್ನು “ನಿನಗೆ ಸಂಬಂಧಪಟ್ಟ ವಿಷಯವನ್ನಾಗಿ” ಅಥವಾ “ನಿಮ್ಮ ಜನರು ಜೀವಿಸುವ ಸ್ಥಳವನ್ನಾಗಿ” ಎಂದೂ ಅನುವಾದ ಮಾಡಬಹುದು.
  • “ಆತನ ಸ್ವಾಸ್ಥ್ಯದಲ್ಲಿ” ಎನ್ನುವ ಮಾತನ್ನು “ಆತನು ಸ್ವಂತ ಮಾಡಿಕೊಂಡಿರುವ” ಅಥವಾ “ಆತನಿಗೆ ಸಂಬಂಧಪಟ್ಟಿರುವ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಆರಾಧನೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H270, H272, H834, H2505, H2631, H3027, H3423, H3424, H3425, H3426, H4180, H4181, H4672, H4735, H4736, H5157, H5159, H5459, H7069, G1139, G2192, G2697, G2722, G2932, G2933, G2935, G4047, G5224, G5564