kn_tw/bible/other/pit.md

25 lines
2.5 KiB
Markdown

# ಗುಂಡಿ, ಗುಂಡಿಗಳು, ಮುಚ್ಚಿದ ಗುಂಡಿ
## ಪದದ ಅರ್ಥವಿವರಣೆ:
ಗುಂಡಿ ಎನ್ನುವುದು ನೆಲದ ಮೇಲೆ ಅಗೆದ ಒಂದು ದೊಡ್ಡ ಆಳವಾದ ರಂಧ್ರವನ್ನು ಸೂಚಿಸುತ್ತದೆ.
* ಪ್ರಾಣಿಗಳನ್ನು ಹಿಡಿಯುವುದಕ್ಕೆ ಅಥವಾ ನೀರನ್ನು ಪಡೆಯುವುದಕ್ಕೆ ಜನರು ಗುಂಡಿಗಳನ್ನು ಅಗಿಯುತ್ತಿದ್ದರು.
* ಖೈದಿಗಳನ್ನು ತಾತ್ಕಾಲಿಕವಾಗಿ ಇರಿಸುವ ಒಂದು ಸ್ಥಳವನ್ನಾಗಿಯೂ ಗುಂಡಿಯನ್ನು ಉಪಯೋಗಿಸುತ್ತಿದ್ದರು.
* “ಗುಂಡಿ” ಎನ್ನುವ ಪದವು ಕೆಲವೊಂದುಬಾರಿ ನರಕವನ್ನು ಅಥವಾ ಸಮಾಧಿಯನ್ನು ಸೂಚಿಸುತ್ತದೆ. ಇನ್ನೂ ಕೆಲವೊಂದು ಸಮಯಗಳಲ್ಲಿ “ಪಾತಾಳವನ್ನು” ಸೂಚಿಸುತ್ತದೆ.
* ತುಂಬಾ ಆಳವಾಗಿರುವ ಗುಂಡಿಯನ್ನು “ನೀರು ತೊಟ್ಟಿ” ಎಂದೂ ಕರೆಯುತ್ತಾರೆ.
* “ಗುಂಡಿ” ಎನ್ನುವ ಪದವನ್ನು ನಾಶನದ ಪರಿಸ್ಥಿತಿಯಲ್ಲಿ ಸಿಕ್ಕಿಬೀಳಿಸುವುದನ್ನು ವಿವರಿಸುವುದಕ್ಕೆ ಅಥವಾ ನಾಶವನ್ನುಂಟು ಮಾಡುವ ಅಭ್ಯಾಸಗಳಲ್ಲಿ, ಪಾಪದಲ್ಲಿ ಆಳವಾಗಿ ತೊಡಗಿರುವ ಪರಿಸ್ಥಿತಿಯನ್ನು ವಿವರಿಸುವುದಕ್ಕೆ “ನಾಶನದ ಗುಂಡಿ” ಎಂದು ಬಳಸುವ ಮಾತುಗಳಲ್ಲಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಪಾತಾಳ](../other/abyss.md), [ನರಕ](../kt/hell.md), [ಸೆರೆ](../other/prison.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.37:21-22](rc://*/tn/help/gen/37/21)
* [ಯೋಬ.33:16-18](rc://*/tn/help/job/33/16)
* [ಲೂಕ.06:39-40](rc://*/tn/help/luk/06/39)
* [ಜ್ಞಾನೋ.01:12-14](rc://*/tn/help/pro/01/12)
## ಪದ ಡೇಟಾ:
* Strong's: H875, H953, H1356, H1360, H1475, H2352, H4087, H4113, H4379, H6354, H7585, H7745, H7816, H7825, H7845, H7882, G12, G999, G5421