kn_tw/bible/other/pig.md

2.9 KiB

ಹಂದಿ, ಹಂದಿಗಳು, ಹಂದಿಮಾಂಸ, ಹಂದಿಗಳ ಗುಂಪು

ಪದದ ಅರ್ಥವಿವರಣೆ:

ಹಂದಿ ಎನ್ನುವುದು ಮಾಂಸಕ್ಕಾಗಿ ಬೆಳೆಸುವ ನಾಲ್ಕು ಕಾಲುಗಳುಳ್ಳ ಗೊರಸು ಪ್ರಾಣಿಯಾಗಿರುತ್ತದೆ. ಇದರ ಮಾಂಸವನ್ನು “ಹಂದಿಮಾಂಸ (ಪೋರ್ಕ್)” ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಹಂದಿಗಳಿಗೆ ಮತ್ತು ಸಂಬಂಧಪಟ್ಟ ಪ್ರಾಣಿಗಳನ್ನು “ಸ್ವೈನ್” ಎಂದು ಕರೆಯುತ್ತಾರೆ.

  • ಹಂದಿಮಾಂಸವನ್ನು ತಿನ್ನಬಾರದೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು ಮತ್ತು ಅದನ್ನು ಅಶುದ್ಧವೆಂದು ಪರಿಗಣಿಸಲು ಹೇಳಿದ್ದಾರೆ. ಇವತ್ತಿನ ಯೆಹೂದ್ಯರು ಕೂಡ ಹಂದಿಗಳನ್ನು ಅಶುದ್ಧವೆಂದು ಮತ್ತು ಅವುಗಳನ್ನು ತಿನ್ನಬಾರದೆಂದು ಪರಿಗಣಿಸುತ್ತಾರೆ.
  • ಹಂದಿಮಾಂಸವನ್ನು ಜನರಿಗೆ ಮಾರುವುದಕ್ಕೆ ಕೃಷಿ ಕ್ಷೇತ್ರಗಳಲ್ಲಿ ಹಂದಿಗಳನ್ನು ಬೆಳೆಸುತ್ತಾರೆ.
  • ಕೃಷಿ ಕ್ಷೇತ್ರಗಳಲ್ಲಿ ಬೆಳೆಸದ ಹಂದಿಗಳ ಗುಂಪು ಒಂದಿರುತ್ತದೆ, ಆದರೆ ಇವು ಅರಣ್ಯಗಳಲ್ಲಿ ಜೀವಿಸುತ್ತವೆ; ಇವುಗಳನ್ನು “ಕಾಡು ಹಂದಿಗಳು” ಎಂದು ಕರೆಯುತ್ತಾರೆ. ಕಾಡು ಹಂದಿಗಳು ಕೋರೆ ಹಲ್ಲುಗಳನ್ನು ಹೊಂದಿರುತ್ತವೆ ಮತ್ತು ಇವುಗಳನ್ನು ಅಪಾಯಕರವಾದ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ.
  • ಕೆಲವೊಂದುಬಾರಿ ದೊಡ್ಡ ಹಂದಿಗಳನ್ನು “ಹೊಟ್ಟೆ ಬಾಕ ಹಂದಿಗಳು” ಎಂದು ಸೂಚಿಸುತ್ತಾರೆ.

(ಅನುವಾದ ಸಲಹೆಗಳು: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಶುದ್ಧ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2386, G5519