kn_tw/bible/other/partial.md

26 lines
2.8 KiB
Markdown

# ಪಾಕ್ಷಿಕವಾಗಿ , ಪಕ್ಷಪಾತ
## ಪದದ ಅರ್ಥವಿವರಣೆ:
“ಪಾಕ್ಷಿಕವಾಗಿ” ಮತ್ತು “ಪಕ್ಷಪಾತ ತೋರಿಸುವುದು” ಎನ್ನುವ ಪದಗಳು ಇತರ ಜನರಿಗಿಂತಲೂ ನಿರ್ದಿಷ್ಟವಾದ ಜನರಿಗೆ ಹೆಚ್ಚಾದ ಪ್ರಾಮುಖ್ಯತೆಯನ್ನು ತೋರಿಸುವುದಕ್ಕೆ ಮಾಡುವ ಆಯ್ಕೆಯನ್ನು ಸೂಚಿಸುತ್ತದೆ.
* ಇದು ಅಭಿಮಾನ ತೋರಿಸುವುದಕ್ಕೆ ಸಮಾನವಾಗಿರುತ್ತದೆ, ಇದಕ್ಕೆ ಕೆಲವೊಂದು ಜನರನ್ನು ಇತರರಿಗಿಂತ ಹೆಚ್ಚಾದ ಪ್ರೀತಿಯನ್ನು ತೋರಿಸುವುದು ಎಂದರ್ಥ.
* ಪಕ್ಷಪಾತ ಅಥವಾ ಅಭಿಮಾನ ಎನ್ನುವುದು ಸಹಜವಾಗಿ ಜನರಿಗೆ ತೋರಿಸುವುದಾಗಿರುತ್ತದೆ, ಯಾಕಂದರೆ ಅವರು ಇತರ ಜನರಿಗಿಂತ ಹೆಚ್ಚಾದ ಖ್ಯಾತಿಯನ್ನು ಹೊಂದಿರುತ್ತಾರೆ ಅಥವಾ ದೊಡ್ಡ ಶ್ರೀಮಂತರಾಗಿರುತ್ತಾರೆ.
* ಉನ್ನತ ಸ್ಥಾನವನ್ನು ಪಡೆದಿರುವ ಅಥವಾ ಶ್ರೀಮಂತರಾಗಿರುವ ಜನರಿಗೆ ಪಕ್ಷಪಾತವನ್ನು ಅಥವಾ ಅಭಿಮಾನವನ್ನು ತೋರಿಸಬಾರದೆಂದು ಸತ್ಯವೇದವು ತನ್ನ ಜನರಿಗೆ ಸೂಚನೆ ನೀಡಿದೆ.
* ಪೌಲನು ರೋಮಾಪುರದವರಿಗೆ ಬರೆದ ತನ್ನ ಪತ್ರಿಕೆಯಲ್ಲಿ ದೇವರು ಜನರಿಗೆ ಯಾವ ಪಕ್ಷಪಾತವಿಲ್ಲದೆ ತೀರ್ಪು ಮಾಡುತ್ತಾರೆಂದು ಆತನು ಬೋಧಿಸಿದ್ದಾನೆ.
* ಜನರು ಶ್ರೀಮಂತರಾಗಿರುವುದರಿಂದ ಅವರಿಗೆ ಮರ್ಯಾದೆ ಕೊಡುವುದು ಅಥವಾ ಅವರಿಗೆ ಆಸನಗಳನ್ನು ಕೊಡುವುದು ತಪ್ಪು ಎಂದು ಯಾಕೋಬನ ಪುಸ್ತಕವು ಬೋಧನೆ ಮಾಡುತ್ತಿದೆ.
(ಈ ಪದಗಳನ್ನು ಸಹ ನೋಡಿರಿ : [ದಯೆ](../kt/favor.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಧರ್ಮೋ.01:17](rc://*/tn/help/deu/01/17)
* [ಮಲಾಕಿ.02:09](rc://*/tn/help/mal/02/09)
* [ಮಾರ್ಕ.12:13-15](rc://*/tn/help/mrk/12/13)
* [ಮತ್ತಾಯ.22:16](rc://*/tn/help/mat/22/16)
* [ರೋಮಾ.02:10-12](rc://*/tn/help/rom/02/10)
## ಪದ ಡೇಟಾ:
* Strong's: H5234, H6440, G991, G1519, G2983, G4299, G4383