kn_tw/bible/other/ordain.md

25 lines
3.1 KiB
Markdown

# ಅಭಿಷೆಕಿಸು, ಅಭಿಷೇಕಿಸಿದೆ, ಪಟ್ಟಾಭಿಷೇಕ, ಹಿಂದೆಯೇ ಯೋಜಿಸಲಾಗಿದೆ, ಸ್ಥಾಪಿಸಲಾಗಿದೆ, ಸಿದ್ಧಪಡಿಸಲಾಗಿದೆ
## ಪದದ ಅರ್ಥವಿವರಣೆ:
ಅಭಿಷೇಕಿಸು ಎನ್ನುವ ಪದಕ್ಕೆ ಒಂದು ವಿಶೇಷವಾದ ಕೆಲಸಕ್ಕೆ ಅಥವಾ ಪಾತ್ರೆಗೆ ಒಬ್ಬ ವ್ಯಕ್ತಿಯನ್ನು ಸಾಂಪ್ರದಾಯಿಕವಾಗಿ ಆಯ್ಕೆಮಾಡಿಕೊಳ್ಳುವುದು ಎಂದರ್ಥ. ಸಾಂಪ್ರದಾಯಿಕವಾಗಿ ನಿಯಮವನ್ನುಂಟುಮಾಡು ಅಥವಾ ಆಜ್ಞೆಯನ್ನುಂಟು ಮಾಡು ಎಂದೆನ್ನುವ ಅರ್ಥವೂ ಇದರಿಂದ ಬರುತ್ತದೆ.
* “ಅಭಿಷೇಕಿಸು” ಎನ್ನುವ ಪದಕ್ಕೆ ಅನೇಕಬಾರಿ ಯಾಜಕನಾಗಿ, ಸೇವಕನಾಗಿ ಅಥವಾ ಬೋಧಕನಾಗಿ (ರಬ್ಬೀ) ಇರುವುದಕ್ಕೆ ಯಾರಾದರೊಬ್ಬರನ್ನು ಸಾಂಪ್ರದಾಯಿಕವಾಗಿ ಆಯ್ಕೆ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ.
* ಉದಾಹರಣೆಗೆ, ದೇವರು ಆರೋನನನ್ನು ಮತ್ತು ತನ್ನ ಸಂತಾನದವರನ್ನೂ ಯಾಜಕರಾಗಿರಲು ಅಭಿಷೇಕಿಸಿದನು.
* ಇದಕ್ಕೆ ಯಾವುದಾದರೊಂದನ್ನು ಸ್ಥಾಪನೆ ಮಾಡುವುದು ಅಥವಾ ವ್ಯವಸ್ಥಾಪಿಸುವುದು ಎನ್ನುವ ಅರ್ಥವನ್ನೂ ಕೊಡುತ್ತದೆ, ಉದಾಹರಣೆಗೆ ಭಕ್ತಿ ಸಂಬಂಧವಾದ ಹಬ್ಬ ಅಥವಾ ಒಡಂಬಡಿಕೆಯನ್ನು ಸ್ಥಾಪಿಸುವುದು.
* ಸಂದರ್ಭಾನುಸಾರವಾಗಿ, “ಅಭಿಷೇಕ” ಎನ್ನುವ ಪದಕ್ಕೆ “ನಿಯೋಜಿಸು” ಅಥವಾ “ನೇಮಿಸು” ಅಥವಾ “ಆದೇಶಿಸು” ಅಥವಾ “ನಿಯಮವನ್ನುಂಟು ಮಾಡು” ಅಥವಾ “ಸ್ಥಾಪಿಸು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆಜ್ಞೆ](../kt/command.md), [ಒಡಂಬಡಿಕೆ](../kt/covenant.md), [ಶಾಸನ](../other/decree.md), [ಕಾನೂನು](../other/law.md), [ಧರ್ಮಶಾಸ್ತ್ರ](../kt/lawofmoses.md), [ಯಾಜಕನು](../kt/priest.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.12:31-32](rc://*/tn/help/1ki/12/31)
* [2 ಸಮು.17:13-14](rc://*/tn/help/2sa/17/13)
* [ವಿಮೋ.28:40-41](rc://*/tn/help/exo/28/40)
* [ಅರಣ್ಯ.03:3](rc://*/tn/help/num/03/03)
* [ಕೀರ್ತನೆ.111:7-9](rc://*/tn/help/psa/111/007)
## ಪದ ಡೇಟಾ:
* Strong's: H3245, H4390, H6186, H6213, H6680, H7760, H8239, G1299, G2525, G4270, G4282,