kn_tw/bible/other/oath.md

41 lines
6.3 KiB
Markdown

# ಆಣೆ, ಆಣೆಗಳು, ಪ್ರಮಾಣ, ಪ್ರಮಾಣಗಳು, ಆಣೆ ಇಡುವುದು, ಅದರ ಮೂಲಕ ಅಣೆಯನ್ನಿಡು, ಅದರ ಮೂಲಕ ಆಣೆಗಳನ್ನು ಮಾಡುವುದು
## ಪದದ ಅರ್ಥವಿವರಣೆ:
ಸತ್ಯವೇದದಲ್ಲಿ ಪ್ರಮಾಣ ಎನ್ನುವುದು ಏನಾದರೊಂದನ್ನು ಮಾಡುವುದಕ್ಕೆ ಒಂದು ಸಂಪ್ರದಾಯಿಕವಾದ ಭರವಸೆ ಕೊಡುವುದಾಗಿರುತ್ತದೆ. ಪ್ರಮಾಣ ಮಾಡಿದ ಒಬ್ಬ ವ್ಯಕ್ತಿ ಆ ಪ್ರಮಾಣವನ್ನು ತಪ್ಪದೇ ನೆರವೇರಿಸಿಕೊಳ್ಳಬೇಕಾದ ಅವಶ್ಯಕತೆಯುಂಟು. ಪ್ರಮಾಣ ಮಾಡುವುದರಲ್ಲಿ ನಂಬಿಕೆಯು ಮತ್ತು ನಿಜತತ್ವದಿಂದ ಇರುವ ಬಾಧ್ಯತೆಯನ್ನು ಒಳಗೊಂಡಿರುತ್ತದೆ.
* ಕಾನೂನು ನ್ಯಾಯಾಲಯದಲ್ಲಿ ಸಾಕ್ಷಿಗಳು ಅನೇಕಬಾರಿ ಅವರು ಹೇಳುವುದೆಲ್ಲಾ ನಿಜವು ಮತ್ತು ನಡೆದದ್ದೂ ಆಗಿರುತ್ತದೆಯೆಂದು ಪ್ರಮಾಣ ಮಾಡುವುದಕ್ಕೆ ಆಣೆ ಇಡುತ್ತಾರೆ.
* ಸತ್ಯವೇದದಲ್ಲಿ “ಆಣೆ” ಎನ್ನುವ ಪದಕ್ಕೆ ಪ್ರಮಾಣವನ್ನು ಮಾತನಾಡುವುದು ಎಂದರ್ಥ.
* “ಅದರ ಮೂಲಕ ಆಣೆ ಇಡುವುದು” ಎನ್ನುವ ಮಾತಿಗೆ ಯಾರಾದರೊಬ್ಬರ ಅಥವಾ ಯಾವುದಾದರೊಂದರ ಹೆಸರನ್ನು ಉಪಯೋಗಿಸಿಕೊಂಡು ಅದರ ಆಧಾರದ ಮೇಲೆ ಅಥವಾ ಅದರ ಶಕ್ತಿಯ ಮೇಲೆ ಪ್ರಮಾಣವನ್ನು ಮಾಡುವುದು ಎಂದರ್ಥ.
* “ಪ್ರಮಾಣವನ್ನು ಆಣೆಪೂರ್ವಕವಾಗಿ” ಎನ್ನುವ ಮಾತಿನಲ್ಲಿರುವಂತೆ ಕೆಲವೊಂದುಬಾರಿ ಈ ಪದಗಳನ್ನು ಸೇರಿಸಿ ಉಪಯೋಗಿಸುತ್ತಾರೆ.
* ಅಬ್ರಾಹಾಮನು ಮತ್ತು ಅಬೀಮೆಲೆಕನು ಬಾವಿಯನ್ನು ಉಪಯೋಗಿಸುಕೊಳ್ಳುವ ವಿಷಯದಲ್ಲಿ ಇಬ್ಬರು ಸೇರಿ ಒಂದು ಒಪ್ಪಂದವನ್ನು ಮಾಡಿಕೊಂಡಾಗ ಪ್ರಮಾಣ ವಚನವನ್ನು ಹೇಳಿದ್ದರು.
* ಅಬ್ರಾಹಾಮನು ತನ್ನ ದಾಸನಿಗೆ ಅವನು ಇಸಾಕನಿಗಾಗಿ ಅಬ್ರಾಹಾಮನ ಬಂಧುಗಳಲ್ಲಿ ಹೆಂಡತಿಯನ್ನು ಕಂಡುಕೊಳ್ಳಬೇಕೆಂದು ಆಣೆಯನ್ನಿಡಬೇಕೆಂದು (ಸಾಂಪ್ರದಾಯಿಕವಾಗಿ ಮಾಡುವ ಪ್ರಮಾಣ) ಹೇಳಿದನು.
* ದೇವರು ಕೂಡ ಅಣೆಗಳನ್ನು ಇಟ್ಟುಕೊಂಡಿದ್ದಾನೆ, ಅವುಗಳಲ್ಲಿ ಆತನು ತನ್ನ ಜನರೊಂದಿಗೆ ಪ್ರಮಾಣಗಳನ್ನು ಮಾಡಿದ್ದನು.
* ಈ ಆಧುನಿಕ ದಿನಗಳಲ್ಲಿ “ಆಣೆ” ಎನ್ನುವ ಪದಕ್ಕೆ “ಹೊಲಸು ಭಾಷೆಯನ್ನು ಉಪಯೋಗಿಸು” ಎಂದರ್ಥ. ಸತ್ಯವೇದದಲ್ಲಿ ಈ ಪದಕ್ಕೆ ಅರ್ಥ ಇದಾಗಿರುವುದಿಲ್ಲ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಆಣೆ” ಎನ್ನುವ ಪದವನ್ನು “ಪ್ರತಿಜ್ಞೆ” ಅಥವಾ “ಒಂದು ಗಂಭೀರ ಪ್ರಮಾಣ” ಎಂದೂ ಅನುವಾದ ಮಾಡಬಹುದು.
* “ಆಣೆ” ಎನ್ನುವ ಪದವನ್ನು “ಸಾಂಪ್ರದಾಯಿಕವಾದ ಪ್ರಮಾಣ” ಅಥವಾ “ಪ್ರತಿಜ್ಞೆ” ಅಥವಾ “ಏನಾದರೊಂದನ್ನು ಮಾಡುವುದಕ್ಕೆ ಬಾಧ್ಯತೆ ವಹಿಸುವುದು” ಎಂದೂ ಅನುವಾದ ಮಾಡಬಹುದು.
* “ನನ್ನ ಹೆಸರಿನಿಂದ ಆಣೆ ಇಡುವುದು” ಎನ್ನುವ ಮಾತನ್ನು ಅನುವಾದ ಮಾಡುವ ಅನೇಕ ವಿಧಾನಗಳಲ್ಲಿ, “ಅದನ್ನು ನಿಶ್ಚಯಪಡಿಸುವುದಕ್ಕೆ ನನ್ನ ಹೆಸರನ್ನು ಉಪಯೋಗಿಸಿ ಪ್ರಮಾಣ ಮಾಡುವುದು” ಎನ್ನುವ ಮಾತೂ ಒಳಗೊಂಡಿರುತ್ತದೆ.
* “ಪರಲೋಕ ಮತ್ತು ಭೂಮಿ ಹೆಸರುಗಳ ಮೇಲೆ ಆಣೆ ಇಡುವುದು” ಎನ್ನುವ ಮಾತನ್ನು “ಏನಾದರೊಂದು ಮಾಡುವುದಕ್ಕೆ ಪ್ರಮಾಣ ಮಾಡುವುದು, ಭೂಮಿ ಮತ್ತು ಆಕಾಶಗಳೇ ಅದನ್ನು ನಿಶ್ಚಯಗೊಳಿಸುತ್ತವೆ ಎಂದು ಹೇಳುವುದು” ಎಂದೂ ಅನುವಾದ ಮಾಡಬಹುದು.
* “ಆಣೆ” ಅಥವಾ “ಪ್ರಮಾಣ” ಎನ್ನುವ ಪದಗಳ ಬಳಕೆಯು ಶಾಪವನ್ನು ಕೊಡುವ ಅರ್ಥದಲ್ಲಿ ಬಾರದಂತೆ ನೋಡಿಕೊಳ್ಳಿರಿ. ಯಾಕಂದರೆ ಸತ್ಯವೇದದಲ್ಲಿ ಆ ಅರ್ಥವು ಬರುವುದಿಲ್ಲ.
(ಈ ಪದಗಳನ್ನು ಸಹ ನೋಡಿರಿ : [ಯಾಕೋಬ](../names/abimelech.md), [ನಾಹೋರ](../kt/covenant.md), [ಲೇಯಾ](../kt/vow.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.21:22-24](rc://*/tn/help/gen/21/22)
* [ಆದಿ.24:1-4](rc://*/tn/help/gen/24/01)
* [ಆದಿ.31:51-53](rc://*/tn/help/gen/31/51)
* [ಆದಿ.47:29-31](rc://*/tn/help/gen/47/29)
* [ಲೂಕ.01:72-75](rc://*/tn/help/luk/01/72)
* [ಮಾರ್ಕ.06:26-29](rc://*/tn/help/mrk/06/26)
* [ಮತ್ತಾಯ.05:36-37](rc://*/tn/help/mat/05/36)
* [ಮತ್ತಾಯ.14:6-7](rc://*/tn/help/mat/14/06)
* [ಮತ್ತಾಯ.26:71-72](rc://*/tn/help/mat/26/71)
## ಪದ ಡೇಟಾ:
* Strong's: H422, H423, H3027, H5375, H7621, H7650, G332, G3660, G3727, G3728