kn_tw/bible/other/oak.md

32 lines
3.3 KiB
Markdown

# ಏಲಾ, ಏಲಾಗಳು
## ಪದದ ಅರ್ಥವಿವರಣೆ:
ಏಲಾ, ಅಥವಾ ಏಲಾ ಮರ ಎನ್ನುವುದು ದೊಡ್ಡ ಕಾಂಡವಿರುವ ಎತ್ತರವುಳ್ಳ ಮರ ಮತ್ತು ಅಗಲವಾಗಿ ವಿಸ್ತರಿಸಿದ ಕೊಂಬೆಗಳನ್ನು ಒಳಗೊಂಡಿರುತ್ತದೆ.
* ಏಲಾ ಮರಗಳು ಬಲವಾದ ಗಟ್ಟಿಯಾದ ಮರವಾಗಿರುತ್ತದೆ, ಇದನ್ನು ದೊಡ್ಡ ದೊಡ್ಡ ಹಡಗುಗಳನ್ನು ನಿರ್ಮಿಸುವುದಕ್ಕೆ, ನೇಗಿಲುಗಳನ್ನು, ಎತ್ತುಗಳನ್ನು ನೊಗಗಳನ್ನು ಮತ್ತು ನಡೆಸುವ ಬಡಿಗೆಗಳನ್ನು ತಯಾರು ಮಾಡುವುದಕ್ಕೆ ಉಪಯೋಗಿಸುತ್ತಾರೆ.
* ಏಲಾ ಮರದ ಬೀಜವನ್ನು ಸಿಂಧೂ ವೃಕ್ಷದ ಹಣ್ಣು ಎಂದೂ ಕರೆಯುತ್ತಾರೆ.
* ನಿರ್ಧಿಷ್ಟವಾದ ಏಲಾ ಮರಗಳ ಕಾಂಡಗಳನ್ನು 6 ಮೀಟರುಗಳ ಉದ್ದದವರೆಗೂ ಅಳತೆ ಮಾಡಿ ಇಟ್ಟಿರುತ್ತಾರೆ.
* ಏಲಾ ಮರಗಳು ಬಹು ಬಾಳಿಕೆ ಬರುವ ಜೀವನಕ್ಕೆ ಗುರುತಾಗಿರುತ್ತದೆ ಮತ್ತು ಇತರ ಆತ್ಮೀಯ ಅರ್ಥಗಳನ್ನು ಹೊಂದಿರುತ್ತದೆ. ಸತ್ಯವೇದದಲ್ಲಿ ಅವುಗಳು ಅನೇಕಬಾರಿ ಪರಿಶುದ್ಧ ಸ್ಥಳಗಳೊಂದಿಗೆ ಹೆಚ್ಚಾಗಿ ಸಂಬಂಧಗಳನ್ನು ಹೊಂದಿರುತ್ತದೆ.
## ಅನುವಾದ ಸಲಹೆಗಳು:
* ಅನೇಕ ಅನುವಾದಗಳಲ್ಲಿ “ಏಲಾ” ಎನ್ನುವ ಪದವನ್ನು ಬಳಸುವುದಕ್ಕೆ ಬದಲಾಗಿ “ಏಲಾ ಮರ” ಎನ್ನುವ ಪದವನ್ನು ಉಪಯೋಗಿಸುವುದು ತುಂಬಾ ಪ್ರಾಮುಖ್ಯವೆಂದು ಕಂಡುಕೊಂಡಿದ್ದಾರೆ.
* ಓದುಗಾರರ ಸ್ಥಳದಲ್ಲಿ ಈ ಏಲಾ ಮರಗಳು ಇಲ್ಲದಿದ್ದರೆ, “ಏಲಾ”ವನ್ನು “ದೊಡ್ಡದಾಗಿಯೂ ಎತ್ತರವಾಗಿಯೂ ಇರುವ ಏಲಾ ಮರ” ಎಂದೂ ಅನುವಾದ ಮಾಡಬಹುದು, ಈ ಮರದ ಗುಣಲಕ್ಷಣಗಳನ್ನು ಹೊಂದಿರುವ ಬೇರೆ ಇತರ ಮರಗಳನ್ನು ಹೋಲಿಸಿ ಆ ಮರದ ಹೆಸರನ್ನು ಹೇಳಬಹುದು.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಪರಿಶುದ್ಧ](../kt/holy.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.10:3-4](rc://*/tn/help/1sa/10/03)
* [ಆದಿ.13:16-18](rc://*/tn/help/gen/13/16)
* [ಆದಿ.14:13-14](rc://*/tn/help/gen/14/13)
* [ಆದಿ.35:4-5](rc://*/tn/help/gen/35/04)
* [ಆದಿ.06:11-12](rc://*/tn/help/jdg/06/11)
## ಪದ ಡೇಟಾ:
* Strong's: H352, H424, H427, H436, H437, H438