kn_tw/bible/other/mock.md

5.8 KiB

ಪರಿಹಾಸ್ಯ, ಗೇಲಿ, ಗೇಲಿ ಮಾಡಿದರು, ಪರಿಹಾಸ್ಯ ಮಾಡುತ್ತಿರುವುದು, ಅಪಹಾಸ್ಯ ಮಾಡುವವನು, ಅಪಹಾಸ್ಯ ಮಾಡುವವರು, ಹಾಸ್ಯಾಸ್ಪದ, ಹೀಯಾಳಿಸುವುದು, ಹೀಯಾಳಿಸಲಾಗಿರುತ್ತದೆ

ಪದದ ಅರ್ಥವಿವರಣೆ:

“ಪರಿಹಾಸ್ಯ”, ಹಾಸ್ಯಾಸ್ಪದ”, ಮತ್ತು “ಹೀಯಾಳಿಸುವುದು” ಎನ್ನುವ ಪದಗಳೆಲ್ಲವೂ ಒಬ್ಬರ ವಿಷಯದಲ್ಲಿ ತಮಾಷೆ ಮಾಡುವುದನ್ನು ಸೂಚಿಸುತ್ತದೆ ಆದರೆ ಇದನ್ನು ಕ್ರೂರವಾದ ವಿಧಾನದಲ್ಲಿ ಮಾಡುವುದನ್ನು ಮಾತ್ರ ಸೂಚಿಸುತ್ತದೆ.

  • ಪರಿಹಾಸ್ಯ ಮಾಡುವುದೆನ್ನುವುದು ಅನೇಕಬಾರಿ ಜನರಿಗೆ ತಿರಸ್ಕಾರ ತೋರಿಸುವುದಕ್ಕೆ ಅಥವಾ ಅವರನ್ನು ಮುಜುಗರ ಮಾಡುವ ಉದ್ದೇಶದಿಂದ ಜನರ ಮಾತುಗಳನ್ನು ಅಥವಾ ಕ್ರಿಯೆಗಳನ್ನು ಅನುಸರಿಸುವುದಾಗಿರುತ್ತದೆ.
  • ರೋಮಾ ಸೈನಿಕರು ಯೇಸುವಿನ ಮೇಲೆ ನಿಲುವಂಗಿಯನ್ನು ಹಾಕಿದಾಗ, ಅರಸನಾಗಿ ಆತನನ್ನು ಗೌರವಿಸಲು ನಟಿಸುತ್ತಿರುವಾಗ ಆತನನ್ನು ಹೀಯಾಳಿಸಿದರು ಅಥವಾ ಅಪಹಾಸ್ಯ ಮಾಡಿದರು.
  • ಯೌವನಸ್ಥರಾದ ಒಂದು ಗುಂಪಿನ ಜನರು ಎಲೀಷನ ಬೋಳು ತಲೆಯನ್ನು ನೋಡಿ, ಬೋಳು ತಲೆಯವನು ಎಂದು ಎಲೀಷನನ್ನು ಹೀಯಾಳಿಸದರು ಅಥವಾ ಅಪಹಾಸ್ಯ ಮಾಡಿದರು.
  • “ಹೀಯಾಳಿಸುವುದು” ಎನ್ನುವ ಮಾತು ಪ್ರಾಮುಖ್ಯವಲ್ಲದ ಅಥವಾ ನಂಬುವುದಕ್ಕೆ ಪರಿಗಣಿಸಲಾಗದ ಅಪಹಾಸ್ಯದ ಆಲೋಚನೆಯನ್ನು ಸೂಚಿಸುತ್ತದೆ.
  • “ಅಪಹಾಸ್ಯ ಮಾಡುವವನು” ಎನ್ನುವುದು ಯಾವಾಗಲೂ ಗೇಲಿ ಮಾಡುವ ಮತ್ತು ಹೀಯಾಳಿಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 21:12 ಜನರು ಮೆಸ್ಸೀಯನನ್ನು ಉಗುಳುತ್ತಾರೆ, __ ಹೀಯಾಳಿಸುತ್ತಾರೆ __ ಮತ್ತು ಹೊಡೆಯುತ್ತಾರೆ ಎಂದು ಯೆಶಯಾ ಪ್ರವಾದಿಸಿದನು.
  • 39:05 “ಇವನು ಸಾಯುವುದಕ್ಕೆ ಅರ್ಹನಾಗಿದ್ದಾನೆ” ಎಂದು ಯೆಹೂದ್ಯ ನಾಯಕರೆಲ್ಲರೂ ಮಹಾ ಯಾಜಕನಿಗೆ ಉತ್ತರ ಕೊಟ್ಟರು. ಆದನಂತರ ಅವರು ಯೇಸುವಿನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿ, ಆತನ ಮೇಲೆ ಉಗುಳಿ, ಆತನನ್ನು ಬಡಿದು, __ ಹೀಯಾಳಿಸಿದರು __ .
  • 39:12 ಸೈನಿಕರು ಯೇಸುವನ್ನು ಕೋಲಿನಿಂದ ಹೊಡೆದರು ಮತ್ತು ಆತನ ಮೇಲೆ ರಾಜ ವಸ್ತ್ರ ನಿಲುವಂಗಿಯನ್ನು ಹಾಕಿ, ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಧರಿಸಿದರು. ಆದನಂತರ, ಅವರು “ನೋಡು, ಯೆಹೂದ್ಯರ ಅರಸನೇ” ಎಂದು ಹೇಳುವುದರ ಮೂಲಕ ಆತನನ್ನು __ ಹೀಯಾಳಿಸಿದರು __ .
  • 40:04 ಯೇಸುವನ್ನು ಇಬ್ಬರ ಕಳ್ಳರ ಮಧ್ಯೆದಲ್ಲಿ ಶಿಲುಬೆಗೆ ಹಾಕಿದರು. ಅವರಲ್ಲಿ ಒಬ್ಬನು ಯೇಸುವನ್ನು __ ಹೀಯಾಳಿಸಿದನು __, ಇನ್ನೊಬ್ಬನು “ನಿಮಗೆ ದೇವರ ಭಯವಿದೆಯಾ?” ಎಂದು ಹೇಳಿದನು.
  • 40:05 ಯೆಹೂದ್ಯ ನಾಯಕರು ಮತ್ತು ಜನಸಮೂಹದಲ್ಲಿರುವ ಅನೇಕ ಜನರು ಯೇಸುವನ್ನು __ ಹೀಯಾಳಿಸಿದರು __ . “ನೀನು ದೇವರ ಮಗನಾಗಿದ್ದರೆ, ಶಿಲುಬೆ ಮೇಲಿಂದ ಕೆಳಗೆ ಇಳಿದು ಬಾ ಮತ್ತು ನಿನ್ನನ್ನು ರಕ್ಷಿಸಿಕೋ, ಅವಾಗ ನಾವು ನಿನ್ನನ್ನು ನಂಬುತ್ತೇವೆ” ಎಂದು ಹೇಳಿದರು.

ಪದ ಡೇಟಾ:

  • Strong's: H1422, H2048, H2049, H2778, H2781, H3213, H3887, H3931, H3932, H3933, H3934, H3944, H3945, H4167, H4485, H4912, H5058, H5607, H5953, H6026, H6711, H7046, H7048, H7814, H7832, H8103, H8148, H8437, H8595, G1592, G1701, G1702, G1703, G2301, G2606, G3456, G5512