kn_tw/bible/other/mind.md

33 lines
5.0 KiB
Markdown

# ಮನಸ್ಸು, ಮನಪೂರ್ವಕ, ಜ್ಞಾಪಿಸು, ಜ್ಞಾಪಕ ಮಾಡಲಾಗಿದೆ, ಒಂದೇ ಮನಸ್ಸುಳ್ಳವರು
## ಪದದ ಅರ್ಥವಿವರಣೆ:
“ಮನಸ್ಸು” ಎನ್ನುವ ಪದವು ಆಲೋಚಿಸುವ ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವ ವ್ಯಕ್ತಿಯ ಭಾಗವನ್ನು ಸೂಚಿಸುತ್ತದೆ.
* ಪ್ರತಿಯೊಬ್ಬರ ಮನಸ್ಸು ಎನ್ನುವುದು ಅವನ ಅಥವಾ ಆಕೆಯ ಸಂಪೂರ್ಣವಾದ ಆಲೋಚನೆಗಳು ಮತ್ತು ತಾರ್ಕಿಕವನ್ನು ಒಳಗೊಂಡಿರುತ್ತದೆ.
* “ಕ್ರಿಸ್ತನ ಮನಸ್ಸನ್ನು ಹೊಂದಿರುವುದು” ಎಂದರೆ ಯೇಸುಕ್ರಿಸ್ತ ಯಾವ ರೀತಿ ಆಲೋಚನೆ ಮಾಡುತ್ತಾನೋ ಮತ್ತು ಯಾವ ರೀತಿ ನಡೆದುಕೊಳ್ಳುತ್ತಾನೋ ಅದೇ ರೀತಿ ಆಲೋಚನೆ ಮಾಡಿ, ನಡೆದುಕೊಳ್ಳುವುದು ಎಂದರ್ಥ. ಈ ಮಾತಿಗೆ ಪವಿತ್ರಾತ್ಮನ ಶಕ್ತಿಯ ಮೂಲಕ ಈ ರೀತಿ ಜೀವನ ಮಾಡುವುದಕ್ಕೆ ಬಲವನ್ನು ಹೊಂದಿರಲು ಕ್ರಿಸ್ತನ ಬೋಧನೆಗಳಿಗೆ ವಿಧೇಯತೆ ತೋರಿಸುವುದು, ತಂದೆಯಾದ ದೇವರಿಗೆ ವಿಧೇಯತೆ ತೋರಿಸುವುದು ಎಂದರ್ಥ.
* “ತನ್ನ ಮನಸ್ಸನ್ನು ಮಾರ್ಪಾಟು ಮಾಡಿಕೊಳ್ಳುವುದು” ಎಂದರೆ ಒಬ್ಬ ವ್ಯಕ್ತಿ ವಿಭಿನ್ನವಾದ ನಿರ್ಣಯವನ್ನು ಮಾಡುವುದು ಅಥವಾ ಆ ವ್ಯಕ್ತಿ ಮುಂದಿನ ನಿರ್ಣಯಗಿಂತಲೂ ಈಗ ಬೇರೊಂದು ನಿರ್ಣಯವನ್ನು ಮಾಡಿಕೊಳ್ಳುವುದು ಎಂದರ್ಥ.
## ಅನುವಾದ ಸಲಹೆಗಳು:
* “ಮನಸ್ಸು” ಎನ್ನುವ ಪದವನ್ನು “ಆಲೋಚನೆಗಳು” ಅಥವಾ “ಕಾರಣ ಹೇಳುವುದು” ಅಥವಾ “ಚಿಂತನೆ” ಅಥವಾ “ಅರ್ಥಮಾಡಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
* “ಮನಸ್ಸಿನಲ್ಲಿಡು” ಎನ್ನುವ ಮಾತನ್ನು “ನೆನಪಿಡು” ಅಥವಾ “ಇದಕ್ಕೆ ಆಸಕ್ತಿಯನ್ನು ತೋರಿಸು” ಅಥವಾ “ಇದನ್ನು ಖಚಿತವಾಗಿ ತಿಳಿದುಕೋ” ಎಂದೂ ಅನುವಾದ ಮಾಡಬಹುದು.
* “ಹೃದಯ, ಪ್ರಾಣ ಮತ್ತು ಮನಸ್ಸು” ಎನ್ನುವ ಮಾತನ್ನು “ನೀನು ಏನು ಭಾವಿಸುತ್ತಿದ್ದೀಯ, ಏನು ನಂಬುತ್ತಿದ್ದೀಯ ಮತ್ತು ನೀನು ಏನು ಆಲೋಚನೆ ಮಾಡುತ್ತಿದ್ದೀಯ” ಎಂದು ಅನುವಾದ ಮಾಡಬಹುದು.
* “ಮನಸ್ಸಿನಲ್ಲಿಡಲು ಕರೆ” ಎನ್ನುವ ಮಾತನ್ನು “ಜ್ಞಾಪಿಸಿಕೋ” ಅಥವಾ “ಅದರ ಕುರಿತಾಗಿ ಆಲೋಚನೆ ಮಾಡು” ಎಂದೂ ಅನುವಾದ ಮಾಡಬಹುದು.
* “ತನ್ನ ಮನಸ್ಸು ಮಾರ್ಪಾಟು ಮಾಡಿಕೊಂಡು, ಹೋದನು” ಎನ್ನುವ ಮಾತನ್ನು “ವಿಭಿನ್ನವಾಗಿ ನಿರ್ಣಯಿಸಿಕೊಂಡು, ಹೋದನು” ಅಥವಾ “ಎಲ್ಲಾ ಆದನಂತರ ಹೋಗುವುದಕ್ಕೆ ನಿರ್ಣಯಿಸಿಕೊಂಡನು” ಅಥವಾ “ತನ್ನ ಅಭಿಪ್ರಾಯವನ್ನು ಮಾರ್ಪಡಿಸಿಕೊಂಡು, ಹೋದನು” ಎಂದು ಅನುವಾದ ಮಾಡಬಹುದು.
* “ದ್ವಂದ್ವ-ಮನಸ್ಸು” ಎನ್ನುವ ಮಾತನ್ನು “ಅನುಮಾನಪಡುವುದು” ಅಥವಾ “ನಿರ್ಣಯ ತೆಗೆದುಕೊಳ್ಳದಿರುವುದು” ಅಥವಾ “ಸಂಘರ್ಷದ ಆಲೋಚನೆಗಳೊಂದಿಗೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಂಬು](../kt/believe.md), [ಹೃದಯ](../kt/heart.md), [ಪ್ರಾಣ](../kt/soul.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಲೂಕ.10:27](rc://*/tn/help/luk/10/27)
* [ಮಾರ್ಕ.06:51-52](rc://*/tn/help/mrk/06/51)
* [ಮತ್ತಾಯ.21:29](rc://*/tn/help/mat/21/29)
* [ಮತ್ತಾಯ.22:37](rc://*/tn/help/mat/22/37)
* [ಯಾಕೋಬ.04:08](rc://*/tn/help/jas/04/08)
## ಪದ ಡೇಟಾ:
* Strong's: H3629, H3820, H3824, H5162, H7725, G1271, G1374, G3328, G3525, G3540, G3563, G4993, G5590