34 lines
5.5 KiB
Markdown
34 lines
5.5 KiB
Markdown
# ಶಕ್ತಿ, ಶಕ್ತಿಯುಳ್ಳ, ಶಕ್ತಿಯುತ ಕೆಲಸ
|
||
|
||
## ಪದದ ಅರ್ಥವಿವರಣೆ:
|
||
|
||
“ಶಕ್ತಿಯುಳ್ಳ” ಮತ್ತು “ಶಕ್ತಿ” ಎನ್ನುವ ಪದಗಳು ಹೆಚ್ಚಿನ ಬಲವನ್ನು ಅಥವಾ ಶಕ್ತಿಯನ್ನು ಹೊಂದಿಕೊಂಡಿರುವುದನ್ನು ಸೂಚಿಸುತ್ತದೆ.
|
||
|
||
* “ಶಕ್ತಿ” ಎನ್ನುವ ಪದವು ಅನೇಕಬಾರಿ “ಬಲ” ಎನ್ನುವ ಇನ್ನೊಂದು ಪದವನ್ನು ಸೂಚಿಸುತ್ತದೆ. ದೇವರ ಕುರಿತಾಗಿ ಮಾತನಾಡುವಾಗ, ಇದು “ಶಕ್ತಿ” ಎಂಬುದಾಗಿ ಸೂಚಿಸಲ್ಪಡುತ್ತದೆ.
|
||
* “ಶಕ್ತಿಯುಳ್ಳ ಮನುಷ್ಯರು” ಎನ್ನುವ ಮಾತು ಅನೇಕಸಲ ಯುದ್ಧದಲ್ಲಿ ಜಯವನ್ನು ಹೊಂದಿದ ಮತ್ತು ಧೈರ್ಯವನ್ನು ಪಡೆದ ಮನುಷ್ಯರನ್ನು ಸೂಚಿಸುತ್ತದೆ. ದಾವೀದನನ್ನು ಸಂರಕ್ಷಿಸಲು ಸಹಾಯ ಮಾಡಿದ ಆತನ ನಂಬಿಗಸ್ತ ಗುಂಪಿನ ಜನರನ್ನು ಅನೇಕಸಲ “ಶಕ್ತಿಯುಳ್ಳ ಮನುಷ್ಯರು” ಎಂದು ಕರೆಯಲ್ಪಟ್ಟಿದ್ದರು.
|
||
* ದೇವರನ್ನು ಕೂಡ “ಶಕ್ತಿಯುಳ್ಳವರೆಂದು” ಸೂಚಿಸಲ್ಪಟ್ಟಿದ್ದಾರೆ.
|
||
* “ಶಕ್ತಿಯುಳ್ಳ ಕಾರ್ಯಗಳು” ಎನ್ನುವ ಮಾತು ಸಹಜವಾಗಿ ದೇವರು ಮಾಡಿದ ಅನೇಕ ಅದ್ಭುತ ಕಾರ್ಯಗಳನ್ನು, ವಿಶೇಷವಾಗಿ ಆಶ್ಚರ್ಯ ಕಾರ್ಯಗಳನ್ನು ಸೂಚಿಸುತ್ತದೆ.
|
||
* ಈ ಪದವು “ಸರ್ವಶಕ್ತಿಯುಳ್ಳ” ಎನ್ನುವ ಪದಕ್ಕೆ ಸಂಬಂಧಪಟ್ಟಿರುತ್ತದೆ, ಇದು ಸಾಧಾರಣವಾಗಿ ದೇವರನ್ನು ಮಾತ್ರವೇ ವಿವರಿಸುವ ಪದವಾಗಿರುತ್ತದೆ, ಈ ಪದಕ್ಕೆ ಆತನಿಗೆ ಸಂಪೂರ್ಣ ಶಕ್ತಿಯಿದೆ ಎಂದರ್ಥ.
|
||
|
||
## ಅನುವಾದ ಸಲಹೆಗಳು:
|
||
|
||
* ಸಂದರ್ಭಾನುಸಾರವಾಗಿ, “ಶಕ್ತಿಯುಳ್ಳ” ಎನ್ನುವ ಪದವನ್ನು “ಬಲವುಳ್ಳ” ಅಥವಾ “ಅದ್ಭುತವಾಗಿ” ಅಥವಾ “ತುಂಬಾ ಹೆಚ್ಚಿನ ಬಲವುಳ್ಳ” ಎಂದೂ ಅನುವಾದ ಮಾಡಬಹುದು.
|
||
* “ಆತನ ಶಕ್ತಿ” ಎನ್ನುವ ಮಾತು “ಆತನ ಬಲ” ಅಥವಾ “ಆತನ ಅಧಿಕಾರ” ಎಂದೂ ಅನುವಾದ ಮಾಡಬಹುದು.
|
||
* ಅಪೊಸ್ತಲರ ಕೃತ್ಯ 7ನೇ ಅಧ್ಯಾಯದಲ್ಲಿ ಮೋಶೆಯನ್ನು “ಮಾತಿನಲ್ಲಿಯು ಮತ್ತು ಕ್ರಿಯೆಗಳಲ್ಲಿಯೂ ಶಕ್ತಿಯನ್ನು” ಹೊಂದಿದ ಮನುಷ್ಯನೆಂದು ವಿವರಿಸಲ್ಪಟ್ಟಿದೆ. ಈ ಮಾತನ್ನು “ಮೋಶೆ ದೇವರಿಂದ ಬಂದಿರುವ ಶಕ್ತಿಯುಳ್ಳ ಮಾತುಗಳನ್ನು ಮಾತನಾಡಿದ್ದಾನೆ ಮತ್ತು ಅನೇಕವಾದ ಅದ್ಭುತ ಕಾರ್ಯಗಳನ್ನು ಮಾಡಿದ್ದಾನೆ” ಅಥವಾ “ಮೋಶೆ ದೇವರ ವಾಕ್ಯವನ್ನು ಶಕ್ತಿಯುತವಾಗಿ ಮಾತನಾಡಿದನು ಮತ್ತು ಅನೇಕ ಅದ್ಭುತ ಕಾರ್ಯಗಳನ್ನು ಮಾಡಿದನು” ಎಂದೂ ಅನುವಾದ ಮಾಡಬಹುದು.
|
||
* ಸಂದರ್ಭಾನುಗುಣವಾಗಿ, “ಶಕ್ತಿಯುಳ್ಳ ಕಾರ್ಯಗಳು” ಎನ್ನುವ ಮಾತನ್ನು “ದೇವರು ಮಾಡಿದ ಅದ್ಭುತ ಕಾರ್ಯಗಳು” ಅಥವಾ “ಆಶ್ಚರ್ಯ ಕಾರ್ಯಗಳು” ಅಥವಾ “ದೇವರು ಶಕ್ತಿಯುತವಾಗಿ ಮಾಡುವ ಕಾರ್ಯಗಳು” ಎಂದೂ ಅನುವಾದ ಮಾಡಬಹುದು.
|
||
* “ಶಕ್ತಿ” ಎನ್ನುವ ಪದವನ್ನು “ಬಲ” ಅಥವಾ “ಅಧಿಕ ಬಲ” ಎಂದೂ ಅನುವಾದ ಮಾಡಬಹುದು.
|
||
* ಆಂಗ್ಲ ಭಾಷೆಯಲ್ಲಿ " ಮಳೆ ಬರಬಹುದು" ಎಂದು ಹೇಳುವ ಮಾತಿನಲ್ಲಿರುವ ಒಂದು ವೇಳೆ ಎನ್ನುವ ಪದದೊಂದಿಗೆ ಈ ಪದವು ಗೊಂದಲಪಡಿಸಬಾರದು.
|
||
|
||
(ಈ ಪದಗಳನ್ನು ಸಹ ನೋಡಿರಿ : [ಸರ್ವಶಕ್ತಿಯುಳ್ಳ](../kt/almighty.md), [ಆಶ್ಚರ್ಯ](../kt/miracle.md), [ಶಕ್ತಿ](../kt/power.md), [ಬಲ](../other/strength.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [ಅಪೊ.ಕೃತ್ಯ.07:22](rc://*/tn/help/act/07/22)
|
||
* [ಆದಿ.06:4](rc://*/tn/help/gen/06/04)
|
||
* [ಮಾರ್ಕ.09:38-39](rc://*/tn/help/mrk/09/38)
|
||
* [ಮತ್ತಾಯ.11:23](rc://*/tn/help/mat/11/23)
|
||
|
||
## ಪದ ಡೇಟಾ:
|
||
|
||
* Strong’s: H46, H47, H117, H202, H386, H410, H430, H533, H650, H1219, H1368, H1369, H1396, H1397, H1419, H2220, H2389, H2428, H3201, H3524, H3581, H3966, H4101, H5794, H5797, H6099, H6105, H6108, H6184, H7227, H7580, H8623, H8624, G1411, G1415, G1498, G2478, G2479, G2900, G2904, G3167, G3173
|