kn_tw/bible/other/meditate.md

25 lines
2.6 KiB
Markdown

# ಧ್ಯಾನಿಸು, ಧ್ಯಾನಮಾಡು, ಧ್ಯಾನ
## ಪದದ ಅರ್ಥವಿವರಣೆ:
“ಧ್ಯಾನಿಸು” ಎನ್ನುವ ಪದಕ್ಕೆ ಯಾವುದಾದರೊಂದರ ಕುರಿತಾಗಿ ತುಂಬಾ ಜಾಗೃತಿಯಾಗಿ ಮತ್ತು ಆಳವಾಗಿ ಆಲೋಚನೆ ಮಾಡುವುದಕ್ಕೆ ಸಮಯವನ್ನು ಕಳೆಯುವುದು ಎಂದರ್ಥ.
* ಈ ಪದವನ್ನು ದೇವರ ಕುರಿತಾಗಿ ಮತ್ತು ಆತನ ಬೋಧನೆಗಳ ಕುರಿತಾಗಿ ಆಲೋಚನೆ ಮಾಡುವುದನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಉಪಯೋಗಿಸಲಾಗಿರುತ್ತದೆ.
* “ಹಗಲು ರಾತ್ರಿ” ಕರ್ತನ ಧರ್ಮಶಾಸ್ತ್ರವನ್ನು ಧ್ಯಾನ ಮಾಡುವ ವ್ಯಕ್ತಿ ಹೆಚ್ಚಾಗಿ ಆಶೀರ್ವಾದ ಹೊಂದಿರುತ್ತಾನೆಂದು ಕೀರ್ತನೆ 1 ಹೇಳುತ್ತಿದೆ.
## ಅನುವಾದ ಸಲಹೆಗಳು:
* “ಧ್ಯಾನಿಸು” ಎನ್ನುವ ಪದವನ್ನು “ಜಾಗೃತಿಯಾಗಿ ಮತ್ತು ಆಳವಾಗಿ ಮಾಡುವುದು” ಅಥವಾ “ಆಲೋಚನಾತ್ಮಕವಾಗಿ ಪರಿಗಣಿಸುವುದು” ಅಥವಾ “ಅನೇಕಬಾರಿ ಆಲೋಚನೆ ಮಾಡುವುದು” ಎಂದೂ ಅನುವಾದ ಮಾಡಬಹುದು.
* “ಧ್ಯಾನ” ಎನ್ನುವ ನಾಮಪದ ರೂಪವನ್ನು “ಆಳವಾದ ಆಲೋಚನೆಗಳು” ಎಂದೂ ಅನುವಾದ ಮಾಡಬಹುದು. * “ನನ್ನ ಹೃದಯ ಧ್ಯಾನ” ಎನ್ನುವಂಥಹ ಮಾತನ್ನು “ಯಾವುದಾದರೊಂದರ ಕುರಿತಾಗಿ ನಾನು ಆಳವಾಗಿ ಆಲೋಚನೆ ಮಾಡುವುದು” ಅಥವಾ “ಯಾವುದಾದರೊಂದರ ಕುರಿತಾಗಿ ನಾನು ಹೆಚ್ಚಾಗಿ ಆಲೋಚನೆ ಮಾಡುವುದು” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.24:63-65](rc://*/tn/help/gen/24/63)
* [ಯೆಹೋ.01:8-9](rc://*/tn/help/jos/01/08)
* [ಕೀರ್ತನೆ.001:1-2](rc://*/tn/help/psa/001/001)
* [ಕೀರ್ತನೆ.119:15-16](rc://*/tn/help/psa/119/015)
## ಪದ ಡೇಟಾ:
* Strong's: H1897, H1900, H1901, H1902, H7742, H7878, H7879, H7881, G3191, G4304