kn_tw/bible/other/lute.md

24 lines
2.7 KiB
Markdown

# ಸ್ವರಮಂಡಲ, ಕಿನ್ನರಿ, ಕಿನ್ನರಿಗಳು
## ಪದದ ಅರ್ಥವಿವರಣೆ:
ಸ್ವರಮಂಡಲ ಮತ್ತು ಕಿನ್ನರಿ ಎನ್ನುವವುಗಳು ತಂತಿಗಳಿಂದ ಮಾಡಿದ ಚಿಕ್ಕ ಚಿಕ್ಕ ಸಂಗೀತ ಉಪಕರಣಗಳಾಗಿರುತ್ತವೆ, ಅವು ದೇವರನ್ನು ಆರಾಧನೆ ಮಾಡುವುದಕ್ಕೆ ಇಸ್ರಾಯೇಲ್ಯರಿಂದ ಉಪಯೋಗಿಸಲ್ಪಡುತ್ತಿದ್ದವು.
* ಕಿನ್ನರಿ ಎನ್ನುವುದು ಚಿಕ್ಕ ತಂತಿವಾದ್ಯದಂತಿರುತ್ತದೆ, ಇದಕ್ಕೆ ಚೌಕಟ್ಟಿನ ಸುತ್ತ ತಂತಿಗಳು ಇರುತ್ತವೆ.
* ಸ್ವರಮಂಡಲ ಎನ್ನುವುದು ಆಧುನಿಕ ದಿನಗಳಲ್ಲಿರುವ ಅಕುಸ್ಟಿಕ್ ಗಿಟಾರ್.ಗೆ ತುಂಬಾ ಹೋಲಿಕೆಯಾಗಿರುತ್ತದೆ, ಇದಕ್ಕೆ ಕಟ್ಟಿಗೆಯಿಂದ ಮಾಡಿದ ಶಬ್ದ ಪೆಟ್ಟಿಗೆ ಇರುತ್ತದೆ ಮತ್ತು ಆ ಪೆಟ್ಟಿಗೆ ಉದ್ದವಾದ ಕಟ್ಟಿಗೆ ಇದ್ದು, ಅದರ ಮೇಲೆ ತಂತಿಗಳನ್ನು ಕಟ್ಟಿರುತ್ತಾರೆ.
* ಸ್ವರಮಂಡಲವನ್ನು ಅಥವಾ ಒಂದು ಕಿನ್ನರಿಯನ್ನು ಬಾರಿಸುವುದರಲ್ಲಿ ಕೆಲವೊಂದು ತಂತಿಗಳನ್ನು ಒಂದು ಕೈ ಬೆರಳುಗಳಿಂದ ಹಿಡಿದುಕೊಂಡು, ಮತ್ತೊಂದು ಕೈಯಿಂದ ಇತರ ತಂತಿಗಳನ್ನು ಎಳೆಯುತ್ತಾರೆ ಅಥವಾ ನಾದ ಹೊಡೆಯುತ್ತಾರೆ.
* ಸ್ವರಮಂಡಲ, ಕಿನ್ನರಿ ಮತ್ತು ತಂತಿವಾದ್ಯಗಳನ್ನು ಅವುಗಳ ತಂತಿಗಳನ್ನು ಎಳೆಯುವುದರ ಮೂಲಕ ಬಾರಿಸುತ್ತಾರೆ.
* ತಂತಿಗಳ ಸಂಖ್ಯೆ ಬದಲಾಗುತ್ತದೆ, ಆದರೆ ಹಳೇ ಒಡಂಬಡಿಕೆಯಲ್ಲಿ ವಿಶೇಷವಾಗಿ ಹತ್ತು ತಂತಿಗಳ ಉಪಕರಣಗಳನ್ನೇ ದಾಖಲಿಸಲಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ತಂತಿವಾದ್ಯ](../other/harp.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.10:11-12](rc://*/tn/help/1ki/10/11)
* [1 ಸಮು.10:5-6](rc://*/tn/help/1sa/10/05)
* [2 ಪೂರ್ವ.05:11-12](rc://*/tn/help/2ch/05/11)
## ಪದ ಡೇಟಾ:
* Strong's: H3658, H5035, H5443