kn_tw/bible/other/lover.md

24 lines
3.6 KiB
Markdown

# ಪ್ರಿಯ, ಪ್ರಿಯರು
## ಪದದ ಅರ್ಥವಿವರಣೆ:
“ಪ್ರಿಯ” ಎನ್ನುವ ಪದವು ಅಕ್ಷರಾರ್ಥವಾಗಿ “ಪ್ರೀತಿಸುವ ಒಬ್ಬ ವ್ಯಕ್ತಿ” ಎಂದು ವಿವರಿಸಲ್ಪಡುತ್ತದೆ. ಸಾಧಾರಣವಾಗಿ ಈ ಪದವು ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಲೈಂಗಿಕವಾದ ಸಂಬಂಧದಲ್ಲಿರುವುದನ್ನು ಸೂಚಿಸುತ್ತದೆ.
* ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟಿರುವ “ಪ್ರಿಯ” ಎನ್ನುವ ಪದವು ಸಾಧಾರಣವಾಗಿ ವಿವಾಹ ಮಾಡಿಕೊಳ್ಳದ ಒಬ್ಬ ಪುರುಷನು ಅಥವಾ ಒಬ್ಬ ಸ್ತ್ರೀಯಳೊಂದಿಗೆ ಲೈಂಗಿಕವಾದ ಸಂಬಂಧದಲ್ಲಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
* ಇಸ್ರಾಯೇಲ್ಯರು ವಿಗ್ರಹಗಳನ್ನು ಆರಾಧಿಸಿ, ದೇವರಿಗೆ ಅವಿಧೇಯರಾಗಿರುವ ಸ್ಥಿತಿಯನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅನೇಕಬಾರಿ ಈ ತಪ್ಪು ಲೈಂಗಿಕ ಸಂಬಂಧವು ಉಪಯೋಗಿಸಲ್ಪಟ್ಟಿರುತ್ತದೆ. ಇಸ್ರಾಯೇಲ್ ಜನರು ಆರಾಧನೆ ಮಾಡಿದ ವಿಗ್ರಹಗಳನ್ನು ಸೂಚಿಸುವುದಕ್ಕೆ ಅಲಂಕಾರಿಕ ವಿಧಾನದಲ್ಲಿ “ಪ್ರಿಯರು” ಎನ್ನುವ ಬಹುವಚನ ಪದವು ಕೂಡ ಉಪಯೋಗಿಸಲ್ಪಟ್ಟಿರುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಈ ಪದವನ್ನು “ಅನೈತಿಕವಾದ ಪಾಲುದಾರರು” ಅಥವಾ “ವ್ಯಭಿಚಾರದಲ್ಲಿ ಪಾಲುದಾರರು” ಅಥವಾ “ವಿಗ್ರಹಗಳು” ಎನ್ನುವ ಮಾತುಗಳ ಮೂಲಕ ಅನುವಾದ ಮಾಡಬಹುದು. (ನೋಡಿರಿ ಅಲಂಕಾರಿಕ ಮಾತುಗಳು).
* ಹಣದ “ಪ್ರಿಯ” ಎನ್ನುವ ಮಾತು ಹಣವನ್ನು ಸಂಪಾದನೆ ಮಾಡುವುದಕ್ಕೆ ಹೆಚ್ಚಾದ ಪ್ರಾಮುಖ್ಯತೆಯನ್ನು ಕೊಟ್ಟು, ಶ್ರೀಮಂತನಾಗುವುದಕ್ಕೆ ಬಯಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಪರಮಗೀತೆಯಲ್ಲಿ ಉಪಯೋಗಿಸಲ್ಪಟ್ಟಿರುವ “ಪ್ರಿಯ” ಎನ್ನುವ ಪದವು ಒಳ್ಳೇಯ ಅರ್ಥ ಬರುವ ವಿಧಾನದಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ವ್ಯಭಿಚಾರ](../kt/adultery.md), [ಸುಳ್ಳು ದೇವರು](../kt/falsegod.md), [ಸುಳ್ಳು ದೇವರು](../kt/falsegod.md), [ಪ್ರೀತಿ](../kt/love.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಹೋಶೆಯ.02:4-5](rc://*/tn/help/hos/02/04)
* [ಯೆರೆ.03:1-2](rc://*/tn/help/jer/03/01)
* [ವಿಲಾಪ.01:1-2](rc://*/tn/help/lam/01/01)
* [ಲೂಕ.16:14-15](rc://*/tn/help/luk/16/14)
## ಪದ ಡೇಟಾ:
* Strong's: H157, H158, H868, H5689, H7453, H8566, G865, G866, G5358, G5366, G5367, G5369, G5377, G5381, G5382