kn_tw/bible/other/lots.md

29 lines
5.0 KiB
Markdown

# ಚೀಟು, ಚೀಟುಗಳು ಹಾಕುವುದು
## ಪದದ ಅರ್ಥವಿವರಣೆ:
“ಚೀಟು” ಎನ್ನುವುದು ಒಂದು ವಿಷಯವನ್ನು ನಿರ್ಣಯಿಸುವುದಕ್ಕಾಗಿ ಒಂದೇ ರೀತಿಯ ವಸ್ತುಗಳ ಮಧ್ಯೆದಲ್ಲಿ ಆಯ್ಕೆ ಮಾಡುವ ಗುರುತಿಸಲಾಗಿದ ಚೀಟು ಆಗಿರುತ್ತದೆ. * ಚೀಟು ಹಾಕುವುದು” ಎನ್ನುವುದು ಗುರುತುಗಳಿರುವ ವಸ್ತುಗಳನ್ನು ಮೇಲಕ್ಕೆ ಎಸೆದು ನೆಲದ ಮೇಲೆ ಹಾಕುವದನ್ನು ಅಥವಾ ಬೇರೊಂದು ಸ್ಥಳದ ಮೇಲೆ ಹಾಕುವುದನ್ನು ಸೂಚಿಸುತ್ತದೆ.
* ಕೆಲವೊಂದು ಸಂಸ್ಕೃತಿಗಳಲ್ಲಿ ಚಿಕ್ಕ ಚಿಕ್ಕ ಕೊಳವೆಗಳನ್ನು ಉಪಯೋಗಿಸಿ ಚೀಟುಗಳನ್ನು ಹಾಕುವುದಕ್ಕೆ “ಎಳೆಯುತ್ತಾರೆ” ಅಥವಾ “ಹೊರಗೆಳೆಯುತ್ತಾರೆ”. ಒಬ್ಬ ವ್ಯಕ್ತಿ ಚಿಕ್ಕ ಚಿಕ್ಕ ಕೊಳವೆಗಳನ್ನು ಹಿಡಿದುಕೊಳ್ಳುತ್ತಾನೆ, ಇದರಿಂದ ಎಷ್ಟೊತ್ತು ಅವು ಇರುತ್ತವೆಯೆಂದು ಯಾರೂ ನೋಡುವುದಿಲ್ಲ. ಪ್ರತಿಯೊಬ್ಬರೂ ಒಂದೊಂದು ಕೊಳವೆಯನ್ನು ಹೊರ ತೆಗೆಯುತ್ತಾರೆ ಮತ್ತು ದೊಡ್ಡದಾದ (ಅಥವಾ ಚಿಕ್ಕದಾದ) ಕೊಳವೆಯನ್ನು ಹೊರ ತೆಗೆಯುವರೇ ಆಯ್ಕೆ ಮಾಡುತ್ತಾರೆ.
* ಚೀಟುಗಳನ್ನು ಹಾಕುವ ಅಭ್ಯಾಸವು ಇಸ್ರಾಯೇಲ್ಯರು ಮಾಡುತ್ತಿದ್ದರು, ಇದನ್ನು ಹಾಕುವುದರ ಮೂಲಕ ದೇವರು ಅವರನ್ನು ಏನು ಮಾಡಬೇಕೆಂದು ತಿಳಿದುಕೊಳ್ಳುತ್ತಿದ್ದರು.
* ಜೆಕರ್ಯ ಮತ್ತು ಎಲಿಸಬೇತಳ ಕಾಲದಲ್ಲಿಯೂ ವಿಶೇಷವಾದ ಸಮಯ ಬಂದಾಗ ದೇವಾಲಯದಲ್ಲಿ ವಿಶೇಷವಾದ ಕರ್ತವ್ಯವನ್ನು ಯಾವ ಯಾಜಕನು ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಿದ್ದರು.
* ಯೇಸುವನ್ನು ಶಿಲುಬೆಗೆ ಏರಿಸಿದ ಸೈನಿಕರು ಯೇಸುವಿನ ವಸ್ತ್ರಗಳನ್ನು ಯಾರ್ಯಾರು ತೆಗೆದುಕೊಳ್ಳಬೇಕೆಂದು ನಿರ್ಣಯ ಮಾಡುವುದಕ್ಕೆ ಚೀಟುಗಳನ್ನು ಹಾಕಿದರು.
* “ಚೀಟುಗಳನ್ನು ಹಾಕುವುದು” ಎನ್ನುವ ಮಾತನ್ನು “ಚೀಟುಗಳನ್ನು ಮೇಲಕ್ಕೆ ಎಸೆಯುವುದು” ಅಥವಾ “ಚೀಟುಗಳನ್ನು ಹೊರ ತೆಗೆಯುವುದು” ಅಥವಾ “ಚೀಟುಗಳನ್ನು ನೆಲದ ಮೇಲೆ ಉರುಳಿಸುವುದು ಎಂದೂ ಅನುವಾದ ಮಾಡಬಹುದು. “ಹಾಕುವುದು” ಎನ್ನುವ ಪದಕ್ಕೆ ಚೀಟುಗಳನ್ನು ತುಂಬಾ ದೂರದಲ್ಲಿ ಬೀಳುವಂತೆ ಎಸೆಯುವುದು ಎಂದರ್ಥವು ಬರದಂತೆ ನೋಡಿಕೊಳ್ಳಿರಿ.
* ಸಂದರ್ಭಾನುಸಾರವಾಗಿ, “ಚೀಟು” ಎನ್ನುವ ಪದವನ್ನು “ಗುರುತು ಹಾಕಿರುವ ಕಲ್ಲು” ಅಥವಾ “ಕುಂಬಾರಿಕೆಯ ತುಣುಕು” ಅಥವಾ “ಕೋಲು” ಅಥವಾ “ಕೊಳವೆಯ ತುಂಡು” ಎಂದೂ ಅನುವಾದ ಮಾಡಬಹುದು.
* “ಚೀಟಿನ” ಮೂಲಕ ನಿರ್ಣಯ ತೆಗೆದುಕೊಳ್ಳುವುದಾದರೆ, ಅದನ್ನು “ಚೀಟುಗಳನ್ನು ಹೊರ ತೆಗೆಯುವುದರ ಮೂಲಕ (ಅಥವಾ ಮೇಲಕ್ಕೆ ಎಸೆಯುವುದರ ಮೂಲಕ)” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಎಲಿಸಬೇತಳು](../names/elizabeth.md), [ಯಾಜಕ](../kt/priest.md), [ಜೆಕರ್ಯ](../names/zechariahot.md), [ಜೆಕರ್ಯ](../names/zechariahnt.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೋನಾ.01:6-7](rc://*/tn/help/jon/01/06)
* [ಲೂಕ.01:8-10](rc://*/tn/help/luk/01/08)
* [ಲೂಕ.23:33-34](rc://*/tn/help/luk/23/33)
* [ಮಾರ್ಕ.15:22-24](rc://*/tn/help/mrk/15/22)
* [ಮತ್ತಾಯ.27:35-37](rc://*/tn/help/mat/27/35)
* [ಕೀರ್ತನೆ.022:18-19](rc://*/tn/help/psa/022/018)
## ಪದ ಡೇಟಾ:
* Strong's: H1486, H2256, H5307, G2624, G2819, G2975, G3091