kn_tw/bible/other/locust.md

3.0 KiB

ಮಿಡತೆ

ಸತ್ಯಾಂಶಗಳು:

“ಮಿಡತೆ” ಎನ್ನುವ ಪದವು ಹಾರುವ ದೊಟ್ಟ ಕೀಟವನ್ನು ಸೂಚಿಸುತ್ತದೆ, ಇದು ಕೆಲವೊಂದು ಬಾರಿ ಹೊಲಗಳಲ್ಲಿ ಹಾಕಿರುವ ತರಕಾರಿಯನ್ನು ನಾಶಮಾಡುವುದಕ್ಕೆ ಒಂದೇ ಜಾತಿಯ ಇತರ ಎಲ್ಲಾ ಮಿಡತೆಗಳೊಂದಿಗೆ ಹಾರಿ ಹೋಗುತ್ತಾ ಇರುತ್ತವೆ.

  • ಮಿಡತೆಗಳು ಮತ್ತು ಇತರ ಒಂದೇ ಜಾತಿಯ ಮಿಡತೆಗಳು ದೊಡ್ಡದಾಗಿದ್ದು ನೇರವಾದ ಉದ್ದಕ್ಕಿರುವ ರೆಕ್ಕೆಗಳನ್ನು ಒಳಗೊಂಡಿರುವ ಕೀಟಗಳಾಗಿರುತ್ತವೆ, ತುಂಬಾ ದೂರಕ್ಕೆ ಹಾರುವುದಕ್ಕೆ ಅಥವಾ ಜಿಗಿಯುವುದಕ್ಕೆ ಬೇಕಾದ ಸಾಮರ್ಥ್ಯವನ್ನು ಹೊಂದಿರುವ ಎರಡು ಕಾಲುಗಳನ್ನು ಹೊಂದಿರುತ್ತವೆ.
  • ಹಳೇ ಒಡಂಬಡಿಕೆಯಲ್ಲಿ ಹಾನಿಮಾಡುವ ಮಿಡತೆಗಳನ್ನು ಇಸ್ರಾಯೇಲ್ಯರ ಅವಿಧೇಯತೆಗೆ ಫಲಿತಾಂಶವಾಗಿ ಬರುವ ವಿನಾಶದ ಚಿತ್ರಣವನ್ನಾಗಿ ಅಥವಾ ಒಂದು ಗುರುತನ್ನಾಗಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • ಐಗುಪ್ತರಿಗೆ ವಿರುದ್ಧವಾಗಿ ದೇವರು ಕಳುಹಿಸಿದ ಹತ್ತು ಉಪದ್ರವಗಳಲ್ಲಿ ಮಿಡತೆಗಳು ಒಂದಾಗಿತ್ತು.
  • ಸ್ನಾನಿಕನಾದ ಯೋಹಾನನು ಅರಣ್ಯದಲ್ಲಿದ್ದಾಗ, ಈತನು ಆಹಾರವನ್ನಾಗಿ ಮಿಡತೆಗಳನ್ನೇ ತೆಗೆದುಕೊಳ್ಳುತ್ತಿದ್ದನೆಂದು ಹೊಸ ಒಡಂಬಡಿಕೆ ಹೇಳುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಸೆರೆ, ಐಗುಪ್ತ, ಇಸ್ರಾಯೇಲ್, [ಯೋಹಾನ (ಸ್ನಾನಿಕನು), ಮಾರಿರೋಗ](../other/plague.md))

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ದತ್ತಾಂಶ:

  • Strong's: H697, H1357, H1462, H1501, H2284, H3218, H5556, H6767, G200