kn_tw/bible/other/letter.md

3.1 KiB

ಪತ್ರಿಕೆ, ಪತ್ರ

ಪದದ ಅರ್ಥವಿವರಣೆ:

ಪತ್ರ ಎನ್ನುವುದು ಪತ್ರ ಬರೆಯುತ್ತಿರುವ ರಚನಾಕಾರರಿಂದ ತುಂಬಾ ದೂರದಲ್ಲಿರುವ ಒಂದು ಜನರ ಗುಂಪಿಗೆ ಅಥವಾ ಒಬ್ಬ ವ್ಯಕ್ತಿಗೆ ಬರೆದಿರುವ ಸಂದೇಶವನ್ನು ಕಳುಹಿಸುವುದನ್ನು ಸೂಚಿಸುತ್ತದೆ. ಪತ್ರಿಕೆ ಎನ್ನುವುದು ಒಂದು ವಿಶೇಷವಾದ ಪತ್ರವಾಗಿರುತ್ತದೆ, ಅನೇಕಸಲ ಒಂದು ವಿಶೇಷವಾದ ಉದ್ದೇಶಕ್ಕಾಗಿ ಬೋಧನೆಯನ್ನು ಮಾಡಲು ಒಂದು ಔಪಚಾರಿಕ ಶೈಲಿಯಲ್ಲಿ ಬರೆದಿರುವ ಪತ್ರವಾಗಿರುತ್ತದೆ.

  • ಹೊಸ ಒಡಂಬಡಿಕೆ ಕಾಲಗಳಲ್ಲಿ, ಪತ್ರಿಕೆಗಳು ಮತ್ತು ಇತರ ವಿಧವಾದ ಪತ್ರಗಳು ಪ್ರಾಣಿಗಳ ಚರ್ಮಗಳಿಂದ ಮಾಡಿದ ಚರ್ಮ ಕಾಗದದ ಮೇಲೆ ಬರೆಯುತ್ತಿದ್ದರು ಅಥವಾ ಮರದ ತೊಗಟೆಯಿಂದ ತೆಗೆದ ಒಂದು ತರಹದ ತೆಳುವಾದ ತೊಗಟೆಯಾಗಿರುವ ಪ್ಯಾಪಿರಸ್ ಎನ್ನುವವುಗಳ ಮೇಲೆ ಬರೆಯುತ್ತಿದ್ದರು.
  • ಪೌಲ, ಯೋಹಾನ, ಯಾಕೋಬ, ಯೂದಾ ಮತ್ತು ಪೇತ್ರರಿಂದ ಬರೆಯಲ್ಪಟ್ಟ ಹೊಸ ಒಡಂಬಡಿಕೆಯ ಪತ್ರಿಕೆಗಳೆಲ್ಲವು ಎಚ್ಚರಿಸುವ ಪತ್ರಿಕೆಗಳಾಗಿರುತ್ತವೆ, ಅವರು ಈ ಪತ್ರಿಕೆಗಳನ್ನು ರೋಮಾ ಸಾಮ್ರಾಜ್ಯದಲ್ಲೆಲ್ಲಾ ಇರುವ ಅನೇಕ ಪಟ್ಟಣಗಳಲ್ಲಿ ಆದಿ ಕ್ರೈಸ್ತರೆಲ್ಲರನ್ನು ಪ್ರೋತ್ಸಾಹ ಮಾಡುವುದಕ್ಕೆ, ಎಚ್ಚರಿಸುವುದಕ್ಕೆ ಮತ್ತು ಬೋಧನೆ ಮಾಡುವದಕ್ಕೆ ಬರೆದಿರುತ್ತಾರೆ.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಬರೆದಿರುವ ಸಂದೇಶ” ಅಥವಾ “ಬರೆದಿರುವ ಮಾತುಗಳು” ಅಥವಾ “ಬರವಣಿಗೆ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಪ್ರೋತ್ಸಾಹ, ಎಚ್ಚರಿಕೆ, ಬೋಧನೆ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H0104, H0107, H3791, H4385, H5406, H5407, H5612, G11210, G19920