kn_tw/bible/other/kingdom.md

45 lines
8.7 KiB
Markdown

# ರಾಜ್ಯ, ರಾಜ್ಯಗಳು
## ಪದದ ಅರ್ಥವಿವರಣೆ:
ರಾಜ್ಯ ಎನ್ನುವುದು ಅರಸನಿಂದ ಒಂದು ಜನರ ಗುಂಪನ್ನು ಆಳ್ವಿಕೆ ಮಾಡುವುದು ಎಂದರ್ಥ. ಇದು ಒಬ್ಬ ಅರಸನಾಗಲಿ ಅಥವಾ ಇನ್ನೊಬ್ಬ ಪಾಲಕನಾಗಲಿ ಒಂದು ಕ್ಷೇತ್ರದ ಮೇಲೆ ಅಥವಾ ರಾಜಕೀಯ ಸೀಮೆಗಳ ಮೇಲೆ ನಿಯಂತ್ರಣವನ್ನು ಮತ್ತು ಅಧಿಕಾರವನ್ನು ಹೊಂದಿರುವುದನ್ನು ಕೂಡಾ ಸೂಚಿಸುತ್ತದೆ.
* ರಾಜ್ಯ ಎನ್ನುವುದು ಯಾವುದೇ ಭೌಗೋಳಿಕವಾದ ಗಾತ್ರವನ್ನು ಹೊಂದಿರಬಹುದು. ಅರಸನು ಒಂದು ದೇಶವನ್ನು ಅಥವಾ ಒಂದು ಜನರ ಗುಂಪನ್ನು ಅಥವಾ ಒಂದೇ ಒಂದು ಪಟ್ಟಣವನ್ನು ಪಾಲಿಸುವವನಾಗಿರುತ್ತಾನೆ.
* “ದೇವರ ರಾಜ್ಯ” ಎನ್ನುವ ಮಾತಿನಲ್ಲಿರುವಂತೆ, “ರಾಜ್ಯ” ಎನ್ನುವ ಪದವು ಆಕವಾದ ಆಡಳಿತವನ್ನು ಅಥವಾ ಅಧಿಕಾರವನ್ನು ಸೂಚಿಸುತ್ತದೆ,
* ಎಲ್ಲಾ ಸೃಷ್ಟಿಯನ್ನು ಪಾಲಿಸುವಾತನು ದೇವರೊಬ್ಬರೇ, ಆದರೆ “ದೇವರ ರಾಜ್ಯ” ಎನ್ನುವ ಮಾತು ವಿಶೇಷವಾಗಿ ಯೇಸುವಿನಲ್ಲಿ ನಂಬಿದ ಪ್ರತಿಯೊಬ್ಬರ ಮೇಲೆ ಮತ್ತು ಆತನ ಅಧಿಕಾರಕ್ಕೆ ಒಪ್ಪಿಸಿಕೊಟ್ಟ ಪ್ರತಿಯೊಬ್ಬರ ಮೇಲೆ ಆತನ ಆಳ್ವಿಕೆ ಮತ್ತು ಅಧಿಕಾರವನ್ನು ಸೂಚಿಸುತ್ತದೆ.
* ಸೈತಾನನು ಕೂಡ “ರಾಜ್ಯವನ್ನು” ಹೊಂದಿದ್ದಾನೆನ್ನುವುದರ ಕುರಿತಾಗಿ ಸತ್ಯವೇದವು ಮಾತನಾಡುತ್ತಿದೆ, ಅದರಲ್ಲಿ ಈ ಭೂಮಿಯ ಮೇಲಿರುವ ಅನೇಕ ವಿಷಯಗಳ ಮೇಲೆ ಅವನು ತಾತ್ಕಾಲಿಕವಾಗಿ ಆಳುವವನಾಗಿದ್ದಾನೆ. ಇವನ ರಾಜ್ಯವು ದುಷ್ಟ ರಾಜ್ಯವು ಆಗಿರುತ್ತದೆ ಮತ್ತು ಇದು “ಕತ್ತಲೆಯ ರಾಜ್ಯವನ್ನಾಗಿ” ಸೂಚಿಸುತ್ತದೆ.
## ಅನುವಾದ ಸಲಹೆಗಳು:
* ಒಬ್ಬ ಅರಸನಿಂದ ಆಳ್ವಿಕೆ ಮಾಡಲ್ಪಡುವ ಭೌತಿಕ ಪಾಲನೆಯನ್ನು ಸೂಚಿಸಿದಾಗ, “ರಾಜ್ಯ” ಎನ್ನುವ ಪದವನ್ನು “ದೇಶ (ಅರಸನಿಂದ ಆಡಳಿತವಾಗುವ)” ಅಥವಾ “ಅರಸನ ಕ್ಷೇತ್ರ” ಅಥವಾ “ಅರಸನಿಂದ ಆಳ್ವಿಕೆ ಮಾಡಲ್ಪಡುತ್ತಿರುವ ಸೀಮೆ” ಎಂದೂ ಅನುವಾದ ಮಾಡಬಹುದು.
* ಆತ್ಮೀಕವಾದ ಅರ್ಥದಲ್ಲಿ, “ರಾಜ್ಯ” ಎನ್ನುವ ಪದವನ್ನು “ಪಾಲನೆ” ಅಥವಾ “ಆಳ್ವಿಕೆ” ಅಥವಾ “ನಿಯಂತ್ರಿಸುವುದು” ಅಥವಾ “ಪ್ರಭುತ್ವ ಮಾಡುವುದು” ಎಂದು ಅನುವಾದ ಮಾಡಬಹುದು.
* “ಯಾಜಕರ ರಾಜ್ಯ” ಎನ್ನುವ ಮಾತನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ “ದೇವರಿಂದ ಆಳ್ವಿಕೆ ಮಾಡಲ್ಪಡುವ ಆತ್ಮಿಕವಾದ ಯಾಜಕರು” ಎಂದೂ ಅನುವಾದ ಮಾಡಬಹುದು.
* “ಬೆಳಕಿನ ರಾಜ್ಯ” ಎನ್ನುವ ಮಾತನ್ನು “ಬೆಳಕಿನಂತೆ ದೇವರ ಆಳ್ವಿಕೆಯು ಒಳ್ಳೇಯದಾಗಿದೆ” ಅಥವಾ “ಬೆಳಕಾಗಿರುವ ದೇವರು ಜನರನ್ನು ಪಾಲಿಸುತ್ತಿದ್ದಾನೆ” ಅಥವಾ “ದೇವರ ರಾಜ್ಯದ ಒಳ್ಳೆತನ ಮತ್ತು ಬೆಳಕು” ಎಂದೂ ಅನುವಾದ ಮಾಡಬಹುದು. ಈ ಮಾತಿನಲ್ಲಿ “ಬೆಳಕು” ಎನ್ನುವ ಪದವನ್ನು ಇಟ್ಟಿರುವುದು ಒಳ್ಳೇಯದು, ಯಾಕಂದರೆ ಆ ಪದವು ಸತ್ಯವೇದದಲ್ಲಿ ತುಂಬಾ ಪ್ರಾಮುಖ್ಯವಾದ ಪದವಾಗಿರುತ್ತದೆ.
* “ರಾಜ್ಯ” ಎನ್ನುವ ಪದವು ಮತ್ತು ಸಾಮ್ರಾಜ್ಯ ಎನ್ನುವ ಪದವು ಬೇರೆ ಬೇರೆಯಾಗಿರುತ್ತದೆ, ಯಾಕಂದರೆ ಸಾಮ್ರಾಜ್ಯದಲ್ಲಿ ಚಕ್ರವರ್ತಿ ಅನೇಕ ದೇಶಗಳನ್ನು ಆಳುವವನಾಗಿರುತ್ತಾನೆ.
(ಈ ಪದಗಳನ್ನು ಸಹ ನೋಡಿರಿ : [ಅಧಿಕಾರ](../kt/authority.md), [ಅರಸ](../other/king.md), [ದೇವರ ರಾಜ್ಯ](../kt/kingdomofgod.md), [ಇಸ್ರಾಯೇಲ್ ರಾಜ್ಯ](../names/kingdomofisrael.md), [ಯೂದಾ](../names/judah.md), [ಯಾಜಕ](../names/kingdomofjudah.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಥೆಸ್ಸ.02:10-12](../kt/priest.md)
* [2 ತಿಮೊಥೆ.04:17-18](rc://*/tn/help/1th/02/10)
* [ಕೊಲೊಸ್ಸ.01:13-14](rc://*/tn/help/2ti/04/17)
* [ಯೋಹಾನ.18:36-37](rc://*/tn/help/col/01/13)
* [ಮಾರ್ಕ.03:23-25](rc://*/tn/help/jhn/18/36)
* [ಮತ್ತಾಯ.04:7-9](rc://*/tn/help/mrk/03/23)
* [ಮತ್ತಾಯ.13:18-19](rc://*/tn/help/mat/04/07)
* [ಮತ್ತಾಯ.16:27-28](rc://*/tn/help/mat/13/18)
* [ಪ್ರಕ.01:9-11](rc://*/tn/help/mat/16/27)
## ಸತ್ಯವೇದದಿಂದ ಉದಾಹರಣೆಗಳು:
* ___[13:02](rc://*/tn/help/rev/01/09)___ “ ನೀವು ನನ್ನ ಮಾತುಗಳನ್ನು ಶ್ರದ್ಧೆಯಿಂದ ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿಕೊಂಡರೆ, ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗಿರುವಿರಿ, ನೀವು ನನಗೆ ಶ್ರೇಷ್ಠಯಾಜಕರ ___ ರಾಜ್ಯವಾಗಿರುವಿರಿ ___ ಮತ್ತು ಪರಿಶುದ್ಧ ಜನರೂ ಆಗಿರುವಿರಿ” ಎಂದು ದೇವರು ಮೋಶೆಗೆ ಮತ್ತು ಇಸ್ರಾಯೇಲ್ ಜನರಿಗೆ ಹೇಳಿದನು.
* ___[18:04](rc://*/tn/help/obs/13/02)___ ದೇವರು ಸೊಲೊಮೋನನ ವಿಷಯದಲ್ಲಿ ಕೋಪಗೊಂಡಿದ್ದಾನೆ, ಸೊಲೊಮೋನನ ಅಪನಂಬಿಕೆಗೆ ಶಿಕ್ಷೆಯನ್ನಾಗಿ, ಸೊಲೊಮೋನನ ಮರಣದನಂತರ ಆತನು ಇಸ್ರಾಯೇಲ್ ದೇಶವನ್ನು ಎರಡು ___ ರಾಜ್ಯಗಳಾಗಿ ___ ವಿಂಗಡಿಸುತ್ತೇನೆಂದು ವಾಗ್ಧಾನ ಮಾಡಿದನು.
* ___[18:07](rc://*/tn/help/obs/18/04)___ ಇಸ್ರಾಯೇಲ್ ದೇಶದ ಹತ್ತು ಕುಲಗಳು ರೆಹಬ್ಬಾಮನಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿದರು. ಕೇವಲ ಎರಡು ಕುಲಗಳು ಮಾತ್ರ ಆತನಿಗೆ ನಂಬಿಗಸ್ಥರಾಗಿದ್ದರು. ಈ ಎರಡು ಕುಲಗಳು ಯೂದಾ ___ ರಾಜ್ಯವಾಗಿ __ ಮಾರ್ಪಟ್ಟಿತು.
* ___[18:08](rc://*/tn/help/obs/18/07)___ ಇತರ ಇಸ್ರಾಯೇಲ್ ದೇಶದ ಹತ್ತು ಕುಲಗಳು ರೆಹಬ್ಬಾಮನಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿ, ತಮಗೆ ಅರಸನನ್ನಾಗಿ ಯಾರೊಬ್ಬಾಮನನ್ನು ನೇಮಿಸಿಕೊಂಡರು. ಅವರು ವಾಗ್ಧಾನ ದೇಶದ ಉತ್ತರ ಭಾಗದಲ್ಲಿ ತಮ್ಮ ___ ರಾಜ್ಯವನ್ನು ___ ಮಾಡಿಕೊಂಡರು ಮತ್ತು ಅದನ್ನು ಇಸ್ರಾಯೇಲ್ ___ ರಾಜ್ಯ ___ ಎಂಬುದಾಗಿ ಕರೆಯಲ್ಪಟ್ಟರು.
* ___[21:08](rc://*/tn/help/obs/18/08)___ ಅರಸ ಎಂದರೆ ___ ರಾಜ್ಯವನ್ನು __ ಆಳುವ ವ್ಯಕ್ತಿ ಮತ್ತು ಜನರಿಗೆ ತೀರ್ಪು ಮಾಡುವ ವ್ಯಕ್ತಿಯಾಗಿರುತ್ತಾನೆ.
## ಪದ ಡೇಟಾ:
* Strong's: H4410, H4437, H4438, H4467, H4468, H4474, H4475, G932