kn_tw/bible/other/king.md

45 lines
5.9 KiB
Markdown

# ಅರಸ, ಅರಸರು, ರಾಜ್ಯ, ರಾಜ್ಯಗಳು, ರಾಜ್ಯಾಧಿಕಾರ, ರಾಜಪ್ರಭುತ್ವ
## ಪದದ ಅರ್ಥವಿವರಣೆ:
“ಅರಸ” ಎನ್ನುವ ಪದವು ಒಬ್ಬ ವ್ಯಕ್ತಿ ಒಂದು ಪಟ್ಟಣವನ್ನಾಗಲಿ, ರಾಜ್ಯವನ್ನಾಗಲಿ ಅಥವಾ ದೇಶವನ್ನಾಗಲಿ ಸರ್ವೋಚ್ಚ ಆಡಳಿತಗಾರನನ್ನು ಸೂಚಿಸುತ್ತದೆ.
* ಅರಸನನ್ನು ಸಹಜವಾಗಿ ಆಳುವುದಕ್ಕೆ ಆಯ್ದುಕೊಳ್ಳುತ್ತಾರೆ, ಯಾಕಂದರೆ ತನ್ನ ಕುಟುಂಬವು ಮುಂಚೆ ಇರುವ ಅರಸರಿಗೆ ಸಂಬಂಧಪಟ್ಟಿರುತ್ತದೆ.
* ಅರಸನು ಮರಣಿಸಿದಾಗ, ಆ ಅರಸನ ಹಿರಿಯ ಮಗನು ತದನಂತರ ಅರಸನಾಗುತ್ತಾನೆ.
* ಪುರಾತನ ಕಾಲಗಳಲ್ಲಿ ಅರಸನಿಗೆ ತನ್ನ ರಾಜ್ಯದಲ್ಲಿನ ಎಲ್ಲಾ ಜನರ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದನು.
* ಯಾವಾಗಲೋ ಒಂದುಸಲ “ಅರಸ” ಎನ್ನುವ ಪದವನ್ನು ನಿಜವಾದ ಅರಸನಲ್ಲದ ಒಬ್ಬ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ, ಉದಾಹರಣೆಗೆ, ಹೊಸ ಒಡಂಬಡಿಕೆಯಲ್ಲಿ “ಅರಸ ಹೆರೋದ”.
* ಸತ್ಯವೇದದಲ್ಲಿ ದೇವರನ್ನು ಅನೇಕಸಲ ತನ್ನ ಜನರನ್ನು ಆಳುವ ಅರಸನನ್ನಾಗಿ ಸೂಚಿಸಿದ್ದಾರೆ.
* “ದೇವರ ರಾಜ್ಯ” ಎನ್ನುವ ಮಾತು ದೇವರು ತನ್ನ ಜನರನ್ನು ಆಳುವದನ್ನು ಸೂಚಿಸುತ್ತದೆ.
* ಯೇಸುವನ್ನು “ಯೆಹೂದ್ಯರ ಅರಸ”, “ಇಸ್ರಾಯೇಲ್ ಅರಸ”, ಮತ್ತು “ಅರಸರಿಗೆ ಅರಸ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ,
* ಯೇಸು ಹಿಂದಿರುಗಿ ಬರುವಾಗ, ಅರಸನಾಗಿ ಆತನು ಈ ಲೋಕವನ್ನೆಲ್ಲಾ ಆಳುತ್ತಾನೆ.
* ಈ ಪದವನ್ನು “ಸರ್ವೋಚ್ಚ ಮುಖ್ಯಸ್ಥ” ಅಥವಾ “ಪರಿಪೂರ್ಣವಾದ ನಾಯಕ” ಅಥವಾ “ಸಾರ್ವಭೌಮ ಆಳ್ವಿಕೆ” ಎಂದೂ ಅನುವಾದ ಮಾಡಬಹುದು.
* “ಅರಸರಿಗೆ ಅರಸ” ಎನ್ನುವ ಮಾತನ್ನು “ಇತರ ಎಲ್ಲಾ ಅರಸರನ್ನು ಆಳುವ ಅರಸ” ಅಥವಾ “ಇತರ ಪಾಲಕರ ಮೇಲೆ ಅಧಿಕಾರವನ್ನು ಹೊಂದಿದ ಸರ್ವೋಚ್ಚ ಆಡಳಿತಗಾರ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅರಬಿಯ](../kt/authority.md), [ಮೇಕೆ](../names/herodantipas.md), [ಇಷ್ಮಾಯೇಲ್](../other/kingdom.md), [ತ್ಯಾಗ](../kt/kingdomofgod.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ತಿಮೊಥೆ.06:15-16](rc://*/tn/help/1ti/06/15)
* [2 ಅರಸ.05:17-19](rc://*/tn/help/2ki/05/17)
* [2 ಸಮು.05:3-5](rc://*/tn/help/2sa/05/03)
* [ಅಪೊ.ಕೃತ್ಯ.07:9-10](rc://*/tn/help/act/07/09)
* [ಅಪೊ.ಕೃತ್ಯ.13:21-22](rc://*/tn/help/act/13/21)
* [ಯೋಹಾನ.01:49-51](rc://*/tn/help/jhn/01/49)
* [ಲೂಕ.01:5-7](rc://*/tn/help/luk/01/05)
* [ಲೂಕ.22:24-25](rc://*/tn/help/luk/22/24)
* [ಮತ್ತಾಯ.05:33-35](rc://*/tn/help/mat/05/33)
* [ಮತ್ತಾಯ.14:8-9](rc://*/tn/help/mat/14/08)
## ಸತ್ಯವೇದದಿಂದ ಉದಾಹರಣೆಗಳು:
* ___[08:06](rc://*/tn/help/obs/08/06)___ ಐಗುಪ್ತರು ತಮ್ಮ ಅರಸರನ್ನು ಕರೆಯುವ ಫರೋಹನು ಒಂದು ರಾತ್ರಿ ತನ್ನನ್ನು ತುಂಬಾ ಹೆಚ್ಚಾಗಿ ಕಳವಳಗೊಳಿಸುವ ಎರಡು ಕನಸುಗಳನ್ನು ಕಂಡಿದ್ದನು.
* ___[16:01](rc://*/tn/help/obs/16/01)___ ಇಸ್ರಾಯೇಲ್ಯರಿಗೆ ___ಅರಸನಿಲ್ಲ ___, ಆದ್ದರಿಂದ ಪ್ರತಿಯೊಬ್ಬರು ತಮಗಾಗಿ ಆಲೋಚನೆ ಮಾಡಿಕೊಂಡಿದ್ದನ್ನು ಮಾಡಿದರು.
* ___[16:18](rc://*/tn/help/obs/16/18)___ ಕೊನೆಗೆ, ಇತರ ಎಲ್ಲಾ ದೇಶದ ಜನರಿಗೆ ಅರಸನು ಇದ್ದಂತೆಯೇ, ಜನರು ತಮಗಾಗಿ ___ ಅರಸ __ ಬೇಕೆಂದು ದೇವರನ್ನು ಕೇಳಿಕೊಂಡರು.
* ___[17:05](rc://*/tn/help/obs/17/05)___ ಕೊನೆಗೆ, ಸೌಲನು ಯುದ್ಧದಲ್ಲಿ ಮರಣ ಹೊಂದಿದನು, ಮತ್ತು ದಾವೀದನು ಇಸ್ರಾಯೇಲ್ಯರಿಗೆ ___ ಅರಸನಾದನು ___. ಇವನು ಒಳ್ಳೇಯ ___ ಅರಸನಾಗಿದ್ದನು ___ , ಮತ್ತು ಜನರು ಅವನನ್ನು ತುಂಬಾ ಹೆಚ್ಚಾಗಿ ಪ್ರೀತಿಸುತ್ತಿದ್ದರು.
* ___[21:06](rc://*/tn/help/obs/21/06)___ ಮೆಸ್ಸೀಯ ಪ್ರವಾದಿಯಾಗಿ, ಯಾಜಕನಾಗಿ ಮತ್ತು ___ ಅರಸನಾಗಿ ___ ಇರುತ್ತಾನೆಂದು ದೇವರ ಪ್ರವಾದಿಗಳು ಕೂಡ ಹೇಳಿದ್ದರು.
* __[48:14](rc://*/tn/help/obs/48/14)___ ದಾವೀದನು ಇಸ್ರಾಯೇಲಿಯರಿಗೆ ___ ಅರಸನಾಗಿದ್ದನು ___, ಆದರೆ ಯೇಸು ಸರ್ವ ವಿಶ್ವಕ್ಕೆ (ಅಥವಾ ಸರ್ವ ಸೃಷ್ಟಿಗೆ)__ ಅರಸನಾಗಿದ್ದಾನೆ __!
## ಪದ ಡೇಟಾ:
* Strong's: H4427, H4428, H4430, G935, G936