kn_tw/bible/other/inquire.md

25 lines
3.1 KiB
Markdown

# ವಿಚಾರಣೆ, ವಿಚಾರಿಸು, ವಿಚಾರಿಸಲಾಗಿದೆ, ವಿಚಾರಣೆಗಳು
## ಸತ್ಯಾಂಶಗಳು:
“ವಿಚಾರಣೆ” ಎನ್ನುವಪದಕ್ಕೆ ಮಾಹಿತಿಗಾಗಿ ಯಾರಾದರೊಬ್ಬರನ್ನು ಕೇಳು ಎಂದರ್ಥ. “ಯಾವುದಾದರೊಂದರ ಕುರಿತಾಗಿ ವಿಚಾರಿಸು” ಎನ್ನುವ ಮಾತು ಅನೇಕಸಲ ಸಹಾಯಕ್ಕಾಗಿ ಅಥವಾ ಜ್ಞಾನಕ್ಕಾಗಿ ದೇವರನ್ನು ಬೇಡಿಕೊಳ್ಳುವುದನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ ದೇವರ ಕುರಿತಾಗಿ ವಿಚಾರಿಸಿದ ಅನೇಕರ ಸಂಘಟನೆಗಳನ್ನು ದಾಖಲಿಸಲಾಗಿರುತ್ತದೆ.
* ಅಧಿಕಾರಿಕ ಬರವಣಿಗೆಯ ದಾಖಲಾತಿಗಳ ಮೂಲಕ ಪರಿಶೋಧನೆ ಮಾಡುವ ಅಧಿಕಾರಿಕ ಪ್ರಭುತ್ವದಿಂದ ಅಥವಾ ಅರಸನಿಂದ ಈ ಪದವು ಉಪಯೋಗಿಸಲ್ಪಡುತ್ತದೆ.
* ಸಂದರ್ಭಾನುಸಾರವಾಗಿ “ವಿಚಾರಣೆ” ಎನ್ನುವ ಪದವನ್ನು “ಕೇಳು” ಅಥವಾ “ಮಾಹಿತಿಗಾಗಿ ಕೇಳು” ಎಂದೂ ಅನುವಾದ ಮಾಡಬಹುದು.
* “ಯೆಹೋವನ ವಿಚಾರಣೆ” ಎನ್ನುವ ಮಾತನ್ನು “ಮಾರ್ಗದರ್ಶನಕ್ಕಾಗಿ ಯೆಹೋವನನ್ನು ಕೇಳು” ಅಥವಾ “ಏನು ಮಾಡಬೇಕೆಂದು ಯೆಹೋವನನ್ನು ಕೇಳು” ಎಂದೂ ಅನುವಾದ ಮಾಡಬಹುದು.
* ಒಂದು ವಿಷಯದ “ನಂತರ ವಿಚಾರಿಸಿ” ಎನ್ನುವ ಮಾತನ್ನು “ಅದರ ಕುರಿತಾಗಿ ಪ್ರಶ್ನೆಗಳನ್ನು ಕೇಳು” ಅಥವಾ “ಅದರ ಕುರಿತಾಗಿ ಮಾಹಿತಿಯನ್ನು ಪಡೆಯಲು ಕೇಳು” ಎಂದೂ ಅನುವಾದ ಮಾಡಬಹುದು.
* “ನಿನ್ನಿಂದ ನಾನು ವಿಚಾರಿಸಲ್ಪಡುವುದಿಲ್ಲ” ಎಂದು ಯೆಹೋವನು ಹೇಳಿದಾಗ, ಇದನ್ನು “ಮಾಹಿತಿಗಾಗಿ ನನ್ನನ್ನು ಕೇಳುವುದಕ್ಕೆ ನಿನಗೆ ಅನುಮತಿ ನೀಡುವುದಿಲ್ಲ” ಅಥವಾ “ನನ್ನಿಂದ ಸಹಾಯ ಪಡೆದುಕೊಳ್ಳುವುದಕ್ಕೆ ನಿನಗೆ ಅನುಮತಿ ಕೊಡುವುದಿಲ್ಲ” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಧರ್ಮೋ.19:17-19](rc://*/tn/help/deu/19/17)
* [ಯೆಹೆ.20:1](rc://*/tn/help/ezk/20/01)
* [ಯೆಹೆ.20:30-32](rc://*/tn/help/ezk/20/30)
* [ಎಜ್ರಾ.07:14-16](rc://*/tn/help/ezr/07/14)
* [ಯೋಬ.10:4-7](rc://*/tn/help/job/10/04)
## ಪದ ಡೇಟಾ:
* Strong's: H1240, H1245, H1875, G1830