2.4 KiB
2.4 KiB
ಅನುಕರಿಸು, ಅನುಕರಿಸುವವನು
ಪದದ ಅರ್ಥವಿವರಣೆ
ಬೇರೆಯವರ ಹಾಗೆ ಮಾಡುವುದು ಅಥವಾ ಅವರಂತೆ ನಡೆಯುವದನ್ನು “ಅನುಕರಿಸು” ಅಥವಾ “ಅನುಕರಿಸುವವನು” ಎನ್ನುವ ಪದಗಳು ಸೂಚಿಸುತ್ತದೆ.
- ಕ್ರಿಸ್ತನಂತೆ ಯೆಹೋವನಿಗೆ ವಿಧೇಯರಾಗಿದ್ದು ಮತ್ತು ಬೇರೆಯವರನ್ನು ಪ್ರೀತಿಸುವದರ ಮೂಲಕ ಯೇಸು ಕ್ರಿಸ್ತನನ್ನು ಅನುಕರಿಸಬೇಕೆಂದು ಕ್ರೈಸ್ತರಿಗೆ ಬೋಧಿಸಲಾಗಿದೆ.
- ಅವನು ಕ್ರಿಸ್ತನನ್ನು ಅನುಕರಿಸಿದಂತೆ, ಆದಿಮ ಸಭೆಯಲ್ಲಿದ್ದವರು ಸಹ ಪೌಲನನ್ನು ಅನುಕರಿಸಬೇಕೆಂದು ಹೇಳಿದನು.
ಅನುವಾದ ಸಲಹೆಗಳು:
- “ಅನುಕರಿಸು” ಎನ್ನುವ ಪದವನ್ನು “ಒಂದೇ ಕೆಲಸವನ್ನು ಮಾಡುವುದು” ಅಥವಾ “ಒಬ್ಬರ ಆದರ್ಶಗಳನ್ನು ಹಿಂಬಾಲಿಸುವುದು” ಎಂದು ಅನುವಾದ ಮಾಡಬಹುದು.
- “ದೇವರನ್ನು ಅನುಕರಿಸುವವರು” ಎನ್ನುವ ಮಾತನ್ನು “ದೇವರಂತೆ ವರ್ತಿಸುವ ಜನರು” ಅಥವಾ “ದೇವರು ಮಾಡುವ ಕಾರ್ಯಗಳನ್ನೇ ಮಾಡುವ ಜನರು” ಎಂದು ಅನುವಾದ ಮಾಡಬಹುದು.
- “ನೀವು ನಮ್ಮನ್ನು ಅನುಕರಿಸುವವರಾಗಿದ್ದೀರಿ” ಎನ್ನುವ ಮಾತನ್ನು “ನಮ್ಮ ಆದರ್ಶಗಳನ್ನು ನೀವು ಹಿಂಬಾಲಿಸಿದ್ದೀರಿ” ಅಥವಾ “ದೇವರಿಗೆ ಮೆಚ್ಚಿಗೆಯಾದ ಕಾರ್ಯಗಳನ್ನು ನಾವು ಮಾಡಿದಂತೆ ನೀವು ಮಾಡಿದ್ದೀರಿ” ಎಂದು ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H310, H6213, G1096, G2596, G3401, G3402, G4160