kn_tw/bible/other/honey.md

3.8 KiB

ಜೇನುತುಪ್ಪ, ಜೇನುಗೂಡು

ಪದದ ಅರ್ಥವಿವರಣೆ:

“ಜೇನುತುಪ್ಪ” ಎನ್ನುವುದು ಜೇನು ಹುಳಗಳು ಹೂವಿನ ಮಕರಂದದಿಂದ ತೆಗೆಯುವ ಜಿಗುಟಾದ ತಿನ್ನಲು ಯೋಗ್ಯವಾದ ಸಿಹಿ ಪದಾರ್ಥವಾಗಿರುತ್ತದೆ. ಜೇನುಗೂಡು ಎನ್ನುವುದು ಜೇನು ಹುಳಗಳು ಜೇನನ್ನು ಸಂಗ್ರಹಿಸುವ ಮೇಣದಂಥಹ ಗುಡಾಗಿರುತ್ತದೆ.

  • ಜೇನುತುಪ್ಪ ಅನೇಕ ವಿಧಗಳಲ್ಲಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ಹಳದಿ ಅಥವಾ ಕಂದು ಬಣ್ಣದಲ್ಲಿರುತ್ತದೆ.
  • ಜೇನುತುಪ್ಪ ಅಡವಿಯಲ್ಲಿ ಹೆಚ್ಚಾಗಿ ಸಿಗುತ್ತದೆ, ಜೇನು ನೊಣಗಳು ಗೂಡು ಕಟ್ಟಿರುವ ಸ್ಥಳಗಳಲ್ಲಿ ಅಥವಾ ಮರದ ಟೊಳ್ಳುಗಳಲ್ಲಿ ಸಿಗುತ್ತದೆ. ಜೇನುತುಪ್ಪವನ್ನು ತಿನ್ನುವುದಕ್ಕೆ ಅಥವಾ ಮಾರುವುದಕ್ಕೆ ಜನರು ಜೇನು ಗೂಡುಗಳಲ್ಲಿ ಜೇನು ನೊಣಗಳನ್ನು ಸಾಕುತ್ತಾರೆ, ಆದರೆ ಸತ್ಯವೇದದಲ್ಲಿ ದಾಖಲಿಸಿದ ಜೇನುತುಪ್ಪ ಬಹುಶಃ ಅಡವಿ ಜೇನಾಗಿರಬಹುದು.
  • ಅಡವಿ ಜೇನುತುಪ್ಪವನ್ನು ತಿನ್ನುವ ವಾಕ್ಯಭಾಗಗಳನ್ನು ಸತ್ಯವೇದದಲ್ಲಿ ವಿಶೇಷವಾಗಿ ಮೂವರ ಕುರಿತಾಗಿ ಹೇಳಲ್ಪಟ್ಟಿದೆ, ಅವರು ಯಾರೆಂದರೆ ಯೋನಾತಾನ, ಸಂಸೋನ ಮತ್ತು ಸ್ನಾನಿಕನಾದ ಯೋಹಾನ.
  • ಸಿಹಿಯಾಗಿರುವ ಅಥವಾ ತುಂಬಾ ಸಂತೋಷಕರವಾಗಿರುವ ಯಾವುದಾದರೊಂದನ್ನು ವಿವರಿಸುವುದಕ್ಕೆ ಆಲಂಕಾರಿಕವಾಗಿ ಈ ಪದವು ಉಪಯೋಗಿಸಲ್ಪಟ್ಟಿರುತ್ತದೆ. ಉದಾಹರಣೆಗೆ, ದೇವರ ವಾಕ್ಯಗಳು ಮತ್ತು ಆತನ ಗುಣಲಕ್ಷಣಗಳು “ಜೇನಿಗಿಂತ ಸಿಹಿಯಾದದ್ದವು” ಎಂದು ಹೇಳಲ್ಪಟ್ಟಿವೆ. (ಇವುಗಳನ್ನೂ ನೋಡಿರಿ: ಒಂದೇರೀತಿಯ, ರೂಪಕಾಲಂಕಾರ)
  • ಕೆಲವೊಂದು ಸಾರಿ ಒಬ್ಬ ವ್ಯಕ್ತಿಯ ಮಾತುಗಳು ಜೇನಿನಂತೆ ತುಂಬಾ ಸಿಹಿಯಾಗಿರುತ್ತವೆಯೆಂದು ವಿವರಿಸುತ್ತಾರೆ, ಆದರೆ ಆ ಮಾತುಗಳ ಫಲಿತಾಂಶವು ಮೋಸ ಮಾಡುವುದು ಮತ್ತು ಇತರರಿಗೆ ಹಾನಿ ಮಾಡುವುದು ಆಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಯೋಹಾನ (ಸ್ನಾನಿಕನು), ಯೋನಾತಾನ, ಫಿಲಿಷ್ಟಿಯರು, ಸಂಸೋನ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ದತ್ತಾಂಶ:

  • Strong's: H1706, H3293, H3295, H5317, H6688, G2781, G3192, G3193