kn_tw/bible/other/heir.md

27 lines
3.2 KiB
Markdown

# ವಾರಸುದಾರ
## ಪದದ ಅರ್ಥವಿವರಣೆ:
ಒಬ್ಬ “ವಾರಸುದಾರ” ಎನ್ನುವ ಪದವು ಸತ್ತುಹೋಗಿರುವ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಿರುವ ಹಣವಾಗಲಿ ಅಥವಾ ಅಸ್ತಿಯನ್ನಾಗಲಿ ಕಾನೂನುಬದ್ಧವಾಗಿ ಪಡೆಯುವ ವ್ಯಕ್ತಿಯನ್ನು ಸೂಚಿಸುತ್ತದೆ.
* ಸತ್ಯವೇದ ಕಾಲಗಳಲ್ಲಿ ಮುಖ್ಯ ವಾರಸುದಾರನು ಮೊಟ್ಟ ಮೊದಲು ಹುಟ್ಟಿದ ಗಂಡು ಮಗನಾಗಿರುತ್ತಾನೆ, ಇವನೇ ತನ್ನ ತಂದೆಯ ಹಣವನ್ನು ಮತ್ತು ಆಸ್ತಿಯನ್ನು ಪಡೆದುಕೊಳ್ಳುತ್ತಾನೆ.
* ಆತ್ಮಿಯ ತಂದೆಯಾದ ದೇವರಿಂದ ಆತ್ಮಿಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಕ್ರೈಸ್ತನಾದ ಒಬ್ಬ ವ್ಯಕ್ತಿಯನ್ನು ಸೂಚಿಸುವುದಕ್ಕೆ ಸತ್ಯವೇದವೂ “ವಾರಸುದಾರ” ಎನ್ನುವ ಪದವನ್ನು ಅಲಂಕಾರಿಕ ಭಾವನೆಯಲ್ಲಿ ಉಪಯೋಗಿಸುತ್ತದೆ.
* ದೇವರ ಮಕ್ಕಳಾಗಿ ಕ್ರೈಸ್ತರು ಯೇಸು ಕ್ರಿಸ್ತನೊಂದಿಗೆ “ಜೊತೆ ವಾರಸುದಾರು” ಎಂದು ಹೇಳಲ್ಪಟ್ಟಿದ್ದಾರೆ. ಇದನ್ನು “ಸಹ-ವಾರಸುದಾರರು” ಅಥವಾ “ಜೊತೆ ವಾರಸುದಾರರು” ಅಥವಾ “ಎಲ್ಲರು ಸೇರಿ ವಾರಸುದಾರರು” ಎಂದೂ ಅನುವಾದ ಮಾಡಬಹುದು.
* “ವಾರಸುದಾರ” ಎನ್ನುವ ಪದವನ್ನು “ಪ್ರಯೋಜನಗಳನ್ನು ಹೊಂದುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು ಅಥವಾ ತಂದೆತಾಯಿಗಳು/ಇತರ ಬಂಧುಗಳು ಸತ್ತುಹೋದಾಗ ಇತರ ವಸ್ತುಗಳನ್ನು ಮತ್ತು ಆಸ್ತಿಪಾಸ್ತಿಗಳನ್ನು ಪಡೆದುಕೊಳ್ಳುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ ಯಾವುದೇ ಪದವನ್ನು ಇಟ್ಟು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಚೊಚ್ಚಲು ಮಗ](../other/firstborn.md), [ಸ್ವಾಸ್ತ್ಯ](../kt/inherit.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಗಲಾತ್ಯ.04:1-2](rc://*/tn/help/gal/04/01)
* [ಗಲಾತ್ಯ 04:07](rc://*/tn/help/gal/04/07)
* [ಆದಿ 15:01](rc://*/tn/help/gen/15/01)
* [ಆದಿ.21:10-11](rc://*/tn/help/gen/21/10)
* [ಲೂಕ.20:14](rc://*/tn/help/luk/20/14)
* [ಮಾರ್ಕ.12:07](rc://*/tn/help/mrk/12/07)
* [ಮತ್ತಾಯ.21:38-39](rc://*/tn/help/mat/21/38)
## ಪದ ಡೇಟಾ:
* Strong's: H1121, H3423, G2816, G2818, G2820, G4789