kn_tw/bible/other/fornication.md

35 lines
4.7 KiB
Markdown

# ಲೈಂಗಿಕ ಅನೈತಿಕತೆ, ಅನೈತಿಕತೆ, ಅನೈತಿಕ, ಜಾರತ್ವ
## ಪದದ ಅರ್ಥವಿವರಣೆ:
“ಲೈಂಗಿಕ ಅನೈತಿಕತೆ” ಎನ್ನುವ ಪದವು ಒಬ್ಬ ಸ್ತ್ರೀ ಪುರುಷನು ವಿವಾಹ ಮಾಡಿಕೊಳ್ಳದೆ ಅಥವಾ ವಿವಾಹ ಮಾಡಿಕೊಂಡೂ ಹೊರಗಡೆ ಬೇರೆಯವರೊಂದಿಗೆ ಲೈಂಗಿಕ ಸಂಬಂಧಗಳನ್ನಿಟ್ಟುಕೊಳ್ಳುವುದನ್ನು ಸೂಚಿಸುತ್ತದೆ. ಇದು ದೇವರ ಪ್ರಣಾಳಿಕೆಗೆ ವಿರುದ್ಧವಾಗಿರುತ್ತದೆ. ಹಳೇ ಆಂಗ್ಲ ಸತ್ಯವೇದಗಳಲ್ಲಿ ಇದನ್ನು “ಸಂಭೋಗ” ಎಂದು ಕರೆಯುತ್ತಾರೆ.
* ದೇವರಿಗೆ ವಿರುದ್ಧವಾಗಿರುವ ಯಾವುದೇ ರೀತಿಯ ಲೈಂಗಿಕ ಕ್ರಿಯೆಯನ್ನು ಇದು ಸೂಚಿಸುತ್ತದೆ, ಅಷ್ಟೇಅಲ್ಲದೆ ಇದರಲ್ಲಿ ಸ್ವಲಿಂಗ ಸಂಪರ್ಕ ಕ್ರಿಯೆಗಳು ಮತ್ತು ಅಶ್ಲೀಲತೆಯು ಒಳಗೊಂಡಿರುತ್ತದೆ.
* ಒಂದು ವಿಧವಾದ ಲೈಂಗಿಕ ಅನೈತಿಕತೆ ಎನ್ನುವುದು ವ್ಯಭಿಚಾರ, ಇದು ಪ್ರತ್ಯೇಕವಾಗಿ ವಿವಾಹ ಮಾಡಿಕೊಂಡ ವ್ಯಕ್ತಿಗೆ ಮತ್ತು ಬೇರೆಯವರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಮಧ್ಯೆದಲ್ಲಿ ನಡೆಯುವ ಲೈಂಗಿಕ ಕಾರ್ಯ.
* ಇನ್ನೊಂದು ರೀತಿಯ ಲೈಂಗಿಕ ಅನೈತಿಕತೆ ಎನ್ನವುದು “ಸೂಳೆಗಾರಿಕೆ”, ಇದು ಬೇರೆಯವರಿಗೆ ಹಣ ಕೊಟ್ಟು ಮಾಡುವ ಲೈಂಗಿಕ ಕಾರ್ಯ.
* ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದಾಗ, ಅವರು ದೇವರಿಗೆ ತೋರಿಸಿದ ವಿಶ್ವಾಸದ್ರೋಹವನ್ನು ಸೂಚಿಸುವುದಕ್ಕೂ ಈ ಪದವನ್ನು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದ್ದಾರೆ.
## ಅನುವಾದ ಸಲಹೆಗಳು:
* “ಲೈಂಗಿಕ ಅನೈತಿಕತೆ” ಎನ್ನುವ ಪದವನ್ನು “ಅನೈತಿಕತೆ” ಎಂದೂ ಅನುವಾದ ಮಾಡಬಹುದು, ಈ ಪದದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಷ್ಟು ಕಾಲ ಇದನ್ನು ಉಪಯೋಗಿಸಬಹುದು.
* ಈ ಪದಕ್ಕೆ ಉಪಯೋಗಿಸುವ ಬೇರೊಂದು ಪದಗಳಲ್ಲಿ “ತಪ್ಪಾಗಿ ಮಾಡುವ ಲೈಂಗಿಕ ಕ್ರಿಯೆಗಳು” ಅಥವಾ “ವಿವಾಹದ ಹೊರಗೆ ಮಾಡುವ ಲೈಂಗಿಕ ಕಾರ್ಯಗಳು” ಎಂದೂ ಸೇರಿಸಬಹುದು.
* ಈ ಪದವನ್ನು “ವ್ಯಭಿಚಾರ” ಎನ್ನುವ ಪದಕ್ಕೆ ಬೇರೆಯಾಗಿ ಅನುವಾದ ಮಾಡಬೇಕಾಗುತ್ತದೆ.
* ದೇವರಿಗೆ ತೋರಿಸುವ ವಿಶ್ವಾಸ ದ್ರೋಹಕ್ಕೂ ಮತ್ತು ಲೈಂಗಿಕ ಸಂಬಂಧಗಳಲ್ಲಿ ವಿಶ್ವಾಸ ದ್ರೋಹಕ್ಕೂ ಮಧ್ಯೆ ಸತ್ಯವೇದದಲ್ಲಿ ಸಾಮಾನ್ಯ ಹೋಲಿಕೆ ಇರುವುದರಿಂದ ಅನುವಾದಿಸಿದ ಈ ಪದವನ್ನು ಅಲಂಕಾರಿಕ ಭಾಷೆಯ ಪದವನ್ನಾಗಿ ಉಪಯೋಗಿಸುವಾಗ ಸಾಧ್ಯವಾದರೆ ಅಕ್ಷರಾರ್ಥ ಪದವನ್ನೇ ಇರಿಸಬೇಕು.
(ಈ ಪದಗಳನ್ನು ಸಹ ನೋಡಿರಿ : [ವ್ಯಭಿಚಾರ](../kt/adultery.md), [ಸುಳ್ಳು ದೇವರು](../kt/falsegod.md), [ಸೂಳೆಗಾರಿಕೆ](../other/prostitute.md), [ವಿಶ್ವಾಸ](../kt/faithful.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಅಪೊ.ಕೃತ್ಯ.15:20](rc://*/tn/help/act/15/20)
* [ಅಪೊ.ಕೃತ್ಯ.21:25-26](rc://*/tn/help/act/21/25)
* [ಕೊಲೊಸ್ಸೆ.03:5-8](rc://*/tn/help/col/03/05)
* [ಎಫೆಸ.05:03](rc://*/tn/help/eph/05/03)
* [ಆದಿ.38:24-26](rc://*/tn/help/gen/38/24)
* [ಹೋಶೆಯ.04:13-14](rc://*/tn/help/hos/04/14)
* [ಮತ್ತಾಯ.05:31-32](rc://*/tn/help/mat/05/31)
* [ಮತ್ತಾಯ.19:7-9](rc://*/tn/help/mat/19/07)
## ಪದ ಡೇಟಾ:
* Strong's: H2181, H8457, G1608, G4202, G4203