kn_tw/bible/other/foreigner.md

3.1 KiB

ಪರದೇಶಿ, ಪರದೇಶಿಗಳು, ಅನ್ಯಲೋಕದ, ವಿದೇಶಿ, ವಿದೇಶೀಯ, ವಿದೇಶಿಯರು

ಪದದ ಅರ್ಥವಿವರಣೆ

“ವಿದೇಶಿ” ಎನ್ನುವ ಪದವು ತನ್ನ ಸ್ವಂತ ದೇಶವಾಗದ ಬೇರೆ ದೇಶದಲ್ಲಿ ನಿವಾಸ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ. “ವಿದೇಶಿ” ಎನ್ನುವ ಪದವು ಪರದೇಶಿ ಎನ್ನುವ ಪದಕ್ಕೆ ಮತ್ತೊಂದು ಪದವಾಗಿರುತ್ತದೆ.

  • ಹಳೆ ಒಡಂಬಡಿಕೆಯಲ್ಲಿ, ಅವರೊಂದಿಗೆ ನಿವಾಸ ಮಾಡದೇ ಬೇರೆ ಜನರ ಗುಂಪಿನಿಂದ ಬಂದ ವ್ಯಕ್ತಿಯನ್ನು ಸೂಚಿಸಲು ಈ ಪದವನ್ನು ವಿಶೇಷವಾಗಿ ಉಪಯೋಗಿಸುತ್ತಿದ್ದರು.
  • ಒಂದು ಪ್ರದೇಶದ ಜನರಿಗಿಂತ ಬೇರೆ ಭಾಷೆ ಮತ್ತು ಸಂಪ್ರದಾಯಗಳನ್ನು ಹೊಂದಿರುವ ವ್ಯಕ್ತಿಯನ್ನು ವಿದೇಶೀಯನೆಂದು ಕರೆಯುತ್ತಾರೆ.
  • ಉದಾಹರಣೆಗೆ, ನೊವೊಮಿ ಮತ್ತು ಅವಳ ಕುಟುಂಬದವರು ಮೋವಾಬ್ ದೇಶಕ್ಕೆ ಹೋದಾಗ, ಅವರಲ್ಲಿ ಪರದೇಶಿಗಳಾಗಿದ್ದರು. ನೊವೊಮಿ ಮತ್ತು ಅವಳ ಸೊಸೆಯಾದ ರೂತಳು ಇಸ್ರಾಯೇಲ್ ದೇಶಕ್ಕೆ ಹಿಂತಿರುಗಿ ಬಂದಾಗ, ರೂತಳು “ಪರದೇಶಿ”ಯಾಗಿದ್ದಳು ಯಾಕಂದರೆ ಅವಳು ಇಸ್ರಾಯೇಲ್ ದೇಶದವಳು ಆಗಿರಲಿಲ್ಲ.
  • ಎಫೆಸದವರು ಕ್ರಿಸ್ತನನ್ನು ಅರಿಯದ ಮುನ್ನ ಅವರು ದೇವರ ಒಡಂಬಡಿಕೆಗೆ “ವಿದೇಶಿಯರು” ಆಗಿದ್ದರೆಂದು ಅಪೊಸ್ತಲನಾದ ಪೌಲನು ಹೇಳಿದನು.
  • ಕೆಲವೊಮ್ಮೆ “ವಿದೇಶಿಯರು” ಎನ್ನುವ ಪದವನ್ನು “ಅಪರಿಚಿತನು” ಎಂದು ಅನುವಾದ ಮಾಡಬಹುದು, ಆದರೆ ಗೊತ್ತಿಲ್ಲದವನ ಕುರಿತು ಅಥವಾ ಪರಿಚಯವಿಲ್ಲದ ವ್ಯಕ್ತಿ ಕುರಿತು ಮಾತ್ರವೇ ಈ ಪದವನ್ನು ಉಪಯೋಗಿಸಬೇಕು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H312, H628, H776, H1471, H1481, H1616, H2114, H3363, H3937, H4033, H5236, H5237, H5361, H6154, H8453, G241, G245, G526, G915, G1854, G3581, G3927, G3941