kn_tw/bible/other/flood.md

33 lines
4.7 KiB
Markdown

# ಪ್ರಳಯ, ಪ್ರಳಯಗಳು, ಪ್ರಳಯ ಬಂದಿದೆ, ಪ್ರಳಯವಾಗುತ್ತಿದೆ, ಪ್ರಳಯದ ನಿರು
## ಪದದ ಅರ್ಥವಿವರಣೆ:
“ಪ್ರಳಯ” ಎನ್ನುವ ಪದವು ಅಕ್ಷರಾರ್ಥವಾಗಿ ಭೂಮಿಯಲ್ಲೆಲ್ಲಾ ಸಂಪೂರ್ಣವಾಗಿ ಹರಡಿರುವ ಅತೀ ಹೆಚ್ಚಾದ ನೀರನ್ನು ಸೂಚಿಸುತ್ತದೆ.
* ಈ ಪದವನ್ನು ಎನಾದರೊಂದರ ಕುರಿತಾಗಿ ತಡೆಯಲಾರದ ಸ್ಥಿತಿಯನ್ನು ಸೂಚಿಸುತ್ತದೆ, ವಿಶೇಷವಾಗಿ ಏನಾದರೂ ಆಕಸ್ಮಿಕವಾಗಿ ನಡೆಯುವುದನ್ನು ಸೂಚಿಸುತ್ತದೆ.
* ನೋಹನ ಸಮಯದಲ್ಲಿ ಜನರೆಲ್ಲರೂ ದುಷ್ಟರಾದರು, ಇದರಿಂದ ದೇವರು ಭೂಮಿಯಲ್ಲೆಲ್ಲಾ ಮತ್ತು ಪರ್ವತಗಳನ್ನು ಮುಚ್ಚಿ ಹೋಗುವಷ್ಟು ನೀರು ಬರುವಂತೆ ಮಾಡಿದರು. ನೋಹನೊಂದಿಗೆ ನಾವೆಯಲ್ಲಿರದ ಪ್ರತಿಯೊಬ್ಬರು ಆ ನೀರಿನೊಳಗೆ ಮುಳುಗಿ ಸತ್ತರು. ಬೇರೆ ಪ್ರಳಯಗಳು ಕೇವಲ ಒಂದು ಚಿಕ್ಕ ಪ್ರಾಂತ್ಯವನ್ನು ಮಾತ್ರ ಮುಚ್ಚುತ್ತವೆ.
* ಈ ಪದಕ್ಕೆ ಕ್ರಿಯೆಯು ಇದೆ, “ನದಿಯ ನೀರಿನಿಂದ ಭೂಮಿಯೆಲ್ಲಾ ಪ್ರವಾಹಕ್ಕೆ ಒಳಗಾಯಿತು” ಎಂದು ಗಮನಿಸಬಹುದು.
## ಅನುವಾದ ಸಲಹೆಗಳು:
* “ಪ್ರಳಯ” ಎನ್ನುವ ಈ ಪದವನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತಡೆಯಲಾರದ ನೀರು” ಅಥವಾ “ಹೆಚ್ಚಿನ ಪ್ರಮಾಣದಲ್ಲಿರುವ ನೀರು” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.
* “ಪ್ರಳಯದಂತೆ” ಎನ್ನುವ ಅಲಂಕಾರಿಕ ಹೋಲಿಕೆಗೆ ಬಂದಾಗ ಆ ಪದವನ್ನು ಹಾಗೆಯೇ ಇರಿಸಿರಿ, ಅಥವಾ ನದಿಯಂತೆ ಪ್ರವಾಹ ಎನ್ನುವ ಅಂಶವನ್ನು ಸೂಚಿಸುವ ಪದಗಳನ್ನು ಆ ಪದಕ್ಕೆ ಬದಲಾಗಿ ಉಪಯೋಗಿಸಬಹುದು.
* “ಪ್ರಳಯದ ನೀರಿನಂತೆ” ಎನ್ನುವ ಮಾತಿಗೆ ಅಂದರೆ ಈ ಮಾತಿನಲ್ಲಿ ನೀರು ಎನ್ನುವ ಪದವನ್ನು ಉಪಯೋಗಿಸಿದ ಮಾತಿಗಾಗಿ, “ಪ್ರಳಯ” ಎನ್ನುವ ಪದವನ್ನು “ಪ್ರಬಲವಾಗಿರುವ” ಅಥವಾ “ತಡೆಯಲಾರದ” ಎಂದೂ ಅನುವಾದ ಮಾಡಬಹುದು.
* “ನನ್ನ ಮೇಲೆ ಪ್ರಳಯದ ಹಾಗೆ ಹೊಡೆದುಕೊಂಡು ಹೋಗಬೇಡ” ಎಂದು ಈ ಪದವನ್ನು ರೂಪಕಲಂಕಾರ ಪದವನ್ನಾಗಿಯೂ ಉಪಯೋಗಿಸಬಹುದು, ಇದಕ್ಕೆ “ಈ ತಡೆಯಲಾರದ ವಿಪತ್ತು ನನಗೆ ಸಂಭವಿಸುವಂತೆ ಮಾಡಬೇಡ” ಅಥವಾ “ವಿಪತ್ತುಗಳಿಂದ ನನ್ನನ್ನು ನಾಶಗೊಳಿಸಬೇಡ” ಅಥವಾ “ನಿನ್ನ ಕೋಪದಿಂದ ನನ್ನನ್ನು ಕೆಡಿಸಬೇಡ” ಎಂದರ್ಥ. (ನೋಡಿರಿ: [ರೂಪಕಲಂಕಾರ](rc://*/ta/man/translate/figs-metaphor))
* “ನನ್ನ ಮಂಚವು ಕಣ್ಣೀರಿನಿಂದ ತೇಲಾಡುಟ್ಟಿದೆ” ಎನ್ನುವ ಅಲಂಕಾರಿಕ ಮಾತನ್ನು “ಪ್ರಳಯದಂತೆ ನನ್ನ ಕಣ್ಣೀರಿನಿಂದ ನನ್ನ ಮಂಚವು ತೇಲುತ್ತಿದೆ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಾವೆ](../kt/ark.md), [ನೋಹ](../names/noah.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ದಾನಿ.11:10](rc://*/tn/help/dan/11/10)
* [ಆದಿ.07:6-7](rc://*/tn/help/gen/07/06)
* [ಲೂಕ.06:46-48](rc://*/tn/help/luk/06/46)
* [ಮತ್ತಾಯ.07:24-25](rc://*/tn/help/mat/07/24)
* [ಮತ್ತಾಯ.07:26-27](rc://*/tn/help/mat/07/26)
* [ಮತ್ತಾಯ.24:37-39](rc://*/tn/help/mat/24/37)
## ಪದ ಡೇಟಾ:
* Strong's: H216, H2229, H2230, H2975, H3999, H5104, H5140, H5158, H5674, H6556, H7641, H7857, H7858, H8241, G2627, G4132, G4215, G4216