kn_tw/bible/other/firstborn.md

34 lines
4.5 KiB
Markdown

# ಚೊಚ್ಚಲು
## ಪದದ ಅರ್ಥವಿವರಣೆ:
“ಚೊಚ್ಚಲು” ಎನ್ನುವ ಪದವು ಜನರಿಗೆ ಅಥವಾ ಪ್ರಾಣಿಗಳಿಗೆ ಹುಟ್ಟಿದ ಮೊಟ್ಟ ಮೊದಲ ಸಂತತಿಯನ್ನು ಸೂಚಿಸುತ್ತದೆ.
* ಸತ್ಯವೇದದಲ್ಲಿ “ಚೊಚ್ಚಲು” ಎನ್ನುವ ಪದವು ಸಹಜವಾಗಿ ಮೊಟ್ಟ ಮೊದಲು ಹುಟ್ಟಿದ ಗಂಡು ಮಗುವನ್ನು ಸೂಚಿಸುತ್ತದೆ.
* ಸತ್ಯವೇದದ ಕಾಲಗಳಲ್ಲಿ ಚೊಚ್ಚಲು ಮಗನಿಗೆ ಒಂದು ವಿಶೇಷವಾದ ಪ್ರಾಮುಖ್ಯತೆಯನ್ನು ಕೊಟ್ಟಿರುತ್ತಾರೆ ಮತ್ತು ಇತರ ಗಂಡು ಮಕ್ಕಳಿಗಿಂತ ತನ್ನ ಕುಟುಂಬಕ್ಕೆ ಎರಡುಪಟ್ಟು ಕೊಟ್ಟಿರುತ್ತಾರೆ.
* ಅನೇಕಬಾರಿ ದೇವರಿಗೆ ಸರ್ವಾಂಗ ಹೋಮ ಮಾಡುವುದು ಪ್ರಾಣಿಗಳ ಹುಟ್ಟಿದ ಪ್ರಥಮ ಗರ್ಭಫಲವಾದ ಗಂಡು ಪ್ರಾಣಿಯನ್ನು ಕೊಡುತ್ತಿದ್ದರು.
* ಈ ಆಲೋಚನೆಯನ್ನು ಅಲಂಕಾರಿಕ ಭಾಷೆಯಲ್ಲಿಯೂ ಉಪಯೋಗಿಸುತ್ತಾರೆ. ಉದಾಹರಣೆಗೆ, ಇಸ್ರಾಯೇಲ್ ದೇಶವನ್ನು ದೇವರ ಮೊದಲ ಸಂತಾನದ ಗಂಡು ಮಗ ಎಂದು ಕರೆಯುತ್ತಾರೆ, ಯಾಕಂದರೆ ದೇವರು ಇಸ್ರಾಯೇಲ್ ದೇಶಕ್ಕೆ ಇತರ ದೇಶಗಳ ಮೇಲೆ ವಿಶೇಷವಾದ ಸವಲತ್ತುಗಳನ್ನು ಕೊಟ್ಟಿದ್ದರು.
* ದೇವರ ಮಗ ಆಗಿರುವ ಯೇಸು ದೇವರ ಮೊದಲ ಸಂತಾನವೆಂದು ಕರೆಯಲ್ಪಟ್ಟಿದ್ದನು, ಯಾಕಂದರೆ ಆತನಿಗೆ ಪ್ರತಿಯೊಬ್ಬರ ಮೇಲೆ ಅಧಿಕಾರವು ಮತ್ತು ಎಲ್ಲರಿಗಿಂತ ಹೆಚ್ಚಾದ ಪ್ರಾಮುಖ್ಯತೆಯು ಕೊಡಲ್ಪಟ್ಟಿತ್ತು.
## ಅನುವಾದ ಸಲಹೆಗಳು:
* ವಾಕ್ಯಭಾಗದಲ್ಲಿ “ಚೊಚ್ಚಲು” ಎಂದು ಮಾತ್ರವೇ ಕಂಡಾಗ, ಇದನ್ನು “ಚೊಚ್ಚಲ ಪುರುಷ” ಅಥವಾ “ಚೊಚ್ಚಲ ಮಗ” ಎಂದೂ ಅನುವಾದ ಮಾಡಬಹುದು, ಯಾಕಂದರೆ ಆ ಅರ್ಥವೇ ಬರುತ್ತದೆ. (ನೋಡಿರಿ: [ಊಹಿಸಿಕೊಂಡ ಜ್ಞಾನ ಮತ್ತು ಸೂಚ್ಯ ಸಮಾಚಾರ](rc://*/ta/man/translate/figs-explicit))
* ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನಗಳಲ್ಲಿ “ಮೊಟ್ಟ ಮೊದಲು ಹುಟ್ಟಿದ ಗಂಡು ಮಗ” ಅಥವಾ “ಹಿರಿಯ ಮಗ” ಅಥವಾ “ಒಬ್ಬನೇ ಮಗ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಯೇಸುವಿಗೆ ಅಲಂಕಾರಿಕವಾಗಿ ಉಪಯೋಗಿಸಿದಾಗ, “ಎಲ್ಲಾವುದರ ಮೇಲೆ ಅಧಿಕಾರವನ್ನು ಪಡೆದ ಮಗ” ಅಥವಾ “ಗೌರವಿಸಲ್ಪಟ್ಟ ಮೊಟ್ಟ ಮೊದಲನೇ ಮಗ” ಎಂದು ಅರ್ಥ ಬರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
* ಎಚ್ಚರಿಕೆ : ಈ ಪದವನ್ನು ಯೇಸುವಿಗೆ ಸೂಚಿಸುವ ಪದವನ್ನು ಅನುವಾದ ಮಾಡುವಾಗ, ಆತನು ಸೃಷ್ಟಿಸಲ್ಪಟ್ಟಿದ್ದಾನೆನೆನ್ನುವ ಅರ್ಥವು ಬರದಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ಸ್ವಾಸ್ಥ್ಯ](../kt/inherit.md), [ಬಲಿ](../other/sacrifice.md), [ಮಗ](../kt/son.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಕೊಲೊಸ್ಸೆ.01:15-17](rc://*/tn/help/col/01/15)
* [ಆದಿ.04:3-5](rc://*/tn/help/gen/04/03)
* [ಆದಿ.29:26-27](rc://*/tn/help/gen/29/26)
* [ಆದಿ.43:32-34](rc://*/tn/help/gen/43/32)
* [ಲೂಕ.02:6-7](rc://*/tn/help/luk/02/06)
* [ಪ್ರಕ.01:4-6](rc://*/tn/help/rev/01/04)
## ಪದ ಡೇಟಾ:
* Strong's: H1060, H1062, H1067, H1069, G4416, G5207