kn_tw/bible/other/fig.md

2.7 KiB

ಅಂಜೂರದ ಹಣ್ಣು, ಅಂಜೂರದ ಹಣ್ಣುಗಳು

ಪದದ ಅರ್ಥವಿವರಣೆ

ಅಂಜೂರದ ಹಣ್ಣು ಎಂದರೆ ಮರಗಳ ಮೇಲೆ ಬೆಳೆಯುವ ಸಣ್ಣ ಸಿಹಿ ಮತ್ತು ಮೃಧುವಾದ ಹಣ್ಣು. ಈ ಹಣ್ಣು ಹಣ್ಣಾದಾಗ ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ ಅದರಲ್ಲಿ ಕಂದು, ಹಳದಿ ಅಥವಾ ನೇರಳೆ ಬಣ್ಣಗಳು ಇರಬಹುದು.

  • ಅಂಜೂರದ ಮರಗಳು 6 ಮೀಟರ್ ಗಳ ಎತ್ತರ ಬೆಳೆಯಬಹುದು ಮತ್ತು ಅದರ ದೊಡ್ಡ ಎಲೆಗಳು ತಂಪಾದ ನೆರಳುಕೊಡುತ್ತದೆ. ಈ ಹಣ್ಣು ಸುಮಾರು 3-5 ಸೆಂಟಿಮೀಟರ್ ಉದ್ದವಿರುತ್ತದೆ.
  • ಆದಾಮ ಮತ್ತು ಹವ್ವಳು ಪಾಪ ಮಾಡಿದ ಮೇಲೆ ಈ ಅಂಜೂರದ ಎಲೆಗಳನ್ನು ಒಲಿದು ಉಟ್ಟುಕೊಂಡರು.
  • ಅಂಜೂರದ ಹಣ್ಣನ್ನು ಕಚ್ಚಿ ತಿನ್ನಬಹುದು, ಬೇಯಿಸಿ ತಿನ್ನಬಹುದು ಅಥವಾ ಒಣಗಿಸಿ ತಿನ್ನಬಹುದು. ಜನರು ಅದನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಕೇಕ್ ಗಳಾಗಿ ಒತ್ತಿ ಅವುಗಳನ್ನು ಬೇಕಾದಾಗ ತಿನ್ನಲು ಎತ್ತಿಡುತ್ತಾರೆ.
  • ಸತ್ಯವೇದದ ಕಾಲದಲ್ಲಿ, ಅಂಜೂರದ ಹಣ್ಣುಗಳು ಆಹಾರ ಮತ್ತು ಆದಾಯಕ್ಕೆ ಮೂಲ ವಸ್ತುವಾಗಿತ್ತು.
  • ಸತ್ಯವೇದದಲ್ಲಿ ಫಲಭರಿತ ಅಂಜೂರದ ಮರವನ್ನು ಸಮೃದ್ಧಿಯ ಸಂಕೇತವಾಗಿ ಉಲ್ಲೇಖಿಸಲ್ಪಟ್ಟಿದೆ..
  • ಆತ್ಮಿಯ ಸತ್ಯಗಳನ್ನು ತನ್ನ ಶಿಷ್ಯರಿಗೆ ಬೋಧಿಸಲು ಯೇಸು ಹಲವಾರು ಬಾರಿ ಅಂಜೂರದ ಮರಗಳ ದೃಷ್ಟಾಂತವನ್ನು ಹೇಳಿದನು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1061, H1690, H6291, H8384, G3653, G4808, G4810