kn_tw/bible/other/dream.md

35 lines
5.8 KiB
Markdown

# ಕನಸು
## ಪದದ ಅರ್ಥವಿವರಣೆ:
ಕನಸು ಎನ್ನುವುದು ಜನರು ನಿದ್ದೆ ಮಾಡುತ್ತಿರುವಾಗ ತಮ್ಮ ಮನಸ್ಸುಗಳಲ್ಲಿ ನೋಡುವ ಅಥವಾ ಅನುಭವಿಸುವ ವಿಷಯಗಳು ಎಂದರ್ಥ.
* ಕನಸುಗಳು ಅನೇಕಬಾರಿ ಅವು ನಿಜವಾಗಿ ನಡೆಯುತ್ತಿವೆ ಎನ್ನುವಂತಿರುತ್ತವೆ, ಆದರೆ ಅವು ನಿಜವಾದ ಸಂಘಟನೆಗಳಲ್ಲ.
* ಕೆಲವೊಂದುಬಾರಿ ದೇವರೇ ಏನಾದರೊಂದು ವಿಷಯದ ಕುರಿತಾಗಿ ಜನರಿಗೆ ಕನಸುಗಳು ಕಾಣುವಂತೆ ಕೊಡುತ್ತಾನೆ, ಇದರಿಂದ ಅವರು ಅವುಗಳಿಂದ ಕಲಿತುಕೊಳ್ಳುತ್ತಾರೆ. ಆತನು ಅವರಿಗೆ ಬರುವ ಕನಸುಗಳ ಮೂಲಕ ಜನರೊಂದಿಗೆ ನೇರವಾಗಿ ಮಾತನಾಡುತ್ತಾನೆ.
* ಸತ್ಯವೇದದಲ್ಲಿ, ದೇವರು ಜನರಿಗೆ ಒಂದು ಸಂದೇಶವನ್ನು ಕೊಡುವುದಕ್ಕೆ ಅವರಿಗೆ ವಿಶೇಷವಾದ ಕನಸುಗಳನ್ನು ಕೊಟ್ಟಿದ್ದಾನೆ, ಅನೇಕಬಾರಿ ಭವಿಷ್ಯತ್ತಿನಲ್ಲಿ ನಡೆಯುವ ವಿಷಯಗಳ ಕುರಿತಾಗಿ ಕನಸುಗಳನ್ನು ಕೊಟ್ಟಿರುತ್ತಾನೆ.
* ಕನಸಿಗೂ ದರ್ಶನಕ್ಕೂ ತುಂಬಾ ವ್ಯತ್ಯಾಸವಿರುತ್ತದೆ, ಅವುಗಳಿಗೆ ಬೇರೆ ಬೇರೆ ಅರ್ಥಗಳಿರುತ್ತವೆ. ಒಬ್ಬ ವ್ಯಕ್ತಿ ನಿದ್ದೆ ಮಾಡುತ್ತಿರುವಾಗ ಕನಸುಗಳು ಬರುತ್ತವೆ, ಆದರೆ ದರ್ಶನಗಳು ಸಹಜವಾಗಿ ಒಬ್ಬ ವ್ಯಕ್ತಿ ಎದ್ದಿರುವಾಗಲೇ ಬರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ದರ್ಶನ](../other/vision.md))
## ಸತ್ಯವೇದದ ವಾಕ್ಯಗಳು:
* [ಅಪೊ.ಕೃತ್ಯ 2:16-17](rc://*/tn/help/act/02/16)
* [ದಾನಿ 1:17-18](rc://*/tn/help/dan/01/17)
* [ದಾನಿ 2:1](rc://*/tn/help/dan/02/01)
* [ಆದಿ 37:6](rc://*/tn/help/gen/37/06)
* [ಆದಿ 40:4-5](rc://*/tn/help/gen/40/04)
* [ಮತ್ತಾಯ 2:13](rc://*/tn/help/mat/02/13)
* [ಮತ್ತಾಯ 2:19-21](rc://*/tn/help/mat/02/19)
## ಸತ್ಯವೇದದ ಕಥೆಗಳಿಂದ ಉದಾಹರಣೆಗಳು:
* __[8:2](rc://*/tn/help/obs/08/02)__ ಯೋಸೇಫನನ್ನು ತನ್ನ ತಂದೆ ಹೆಚ್ಚಾಗಿ ಪ್ರೀತಿಸಿರುವದರಿಂದ ಯೋಸೇಫನ ಅಣ್ಣಂದಿಯರು ಅವನನ್ನು ದ್ವೇಷಿಸಿದರು ಮತ್ತು ಯೋಸೇಫನು __ ಕನಸುಗಳನ್ನು __ ಕಂಡಿದ್ದರಿಂದಲೇ, ಅವನು ಅವರನ್ನು ಆಳುವ ವ್ಯಕ್ತಿಯಾದನು.
* __[8:6](rc://*/tn/help/obs/08/06)__ ಐಗುಪ್ತರೆಲ್ಲರೂ ತಮ್ಮ ಅರಸನು ಎಂದು ಕರೆಯುವ ಫರೋಹನಿಗೆ ಒಂದು ರಾತ್ರಿ ಎರಡು __ ಕನಸು __ ಬಂದಿದ್ದವು, ಅವು ಅವನನ್ನು ತುಂಬಾ ಕಳವಳಕ್ಕೆ ಗುರಿ ಮಾಡಿದ್ದವು. ತನ್ನ ಬಳಿಯಿರುವ ಯಾವ ಸಲಹೆಗಾರನು ಕೂಡ ಆ __ ಕನಸುಗಳಿಗೆ __ ಅರ್ಥಗಳನ್ನು ಹೇಳಲಿಲ್ಲ.
* __[8:7](rc://*/tn/help/obs/08/07)__ ಆ ಕನಸುಗಳಿಗೆ ಅರ್ಥವಿವರಣೆ ಹೇಳುವ ಸಾಮರ್ಥ್ಯವನ್ನು ದೇವರು ಯೋಸೇಫನಿಗೆ ಕೊಟ್ಟಿದ್ದನು, ಅದರಿಂದ ಫರೋಹನನ್ನು ಸೆರೆಮನೆಯಿಂದ ಯೋಸೇಫನನ್ನು ಕರೆಕಳುಹಿಸಿದನು. ಯೋಸೇಫನು ಅವನಿಗೆ __ ಕನಸುಗಳನ್ನು __ ವ್ಯಾಖ್ಯಾನಿಸಿ ಹೇಳಿದನು, ಅದೇನೆಂದರೆ, “ದೇವರು ಏಳು ವರ್ಷಗಳ ಕಾಲ ಸಮೃದ್ಧಿಯಾದ ಬೆಳೆಗಳನ್ನು ಕೊಡುತ್ತಾನೆ, ಅದಾದನಂತರ ಏಳು ವರ್ಷಗಳ ಕಾಲ ಬರಗಾಲ ಬರುತ್ತದೆ” ಎಂದು ಹೇಳಿದನು.
* __[16:11](rc://*/tn/help/obs/16/11)__ ಅದೇ ರಾತ್ರಿಯಲ್ಲಿ, ಗಿದ್ಯೋನನು ಪಾಳೆಯದೊಳಗೆ ಹೋದನು ಮತ್ತು ಮಿದ್ಯಾನರ ಸೈನಿಕನು ತನಗೆ ಬಂದಿರುವ __ ಕನಸನ್ನು __ ತನ್ನ ಸ್ನೇಹಿತನಿಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡನು. “ಗಿದ್ಯೋನನ ಸೈನ್ಯವು ಮಿದ್ಯಾನರ ಸೈನ್ಯವನ್ನು ಸೋಲಿಸುತ್ತದೆಯೆಂದು ಈ __ ಕನಿಸಿಗೆ __ ಅರ್ಥವಲ್ಲವೊ!” ಎಂದು ಆ ಮನುಷ್ಯನ ಸ್ನೇಹಿತ ಹೇಳುತ್ತಾನೆ.
* __[23:1](rc://*/tn/help/obs/23/01)__ ಅವನು (ಯೋಸೇಫ) ಆಕೆಗೆ (ಮರಿಯಳಿಗೆ) ಅವಮಾನ ತರುವುದು ಇಷ್ಟವಿರಲಿಲ್ಲ, ಆದ್ದರಿಂದ ಅವನು ಆಕೆಗೆ ಸದ್ದಿಲ್ಲದೆ ವಿಚ್ಛೇದನ ಪತ್ರವನ್ನು ಕೊಡಬೇಕೆಂದಿದ್ದನು. ಅವನು ಅದನ್ನು ಮಾಡುವುದಕ್ಕೆ ಮುಂಚಿತವಾಗಿ, ದೂತನು ಬಂದು ಅವನೊಂದಿಗೆ __ ಕನಸಿನಲ್ಲಿ __ ಮಾತನಾಡಿದನು.
## ಪದ ಡೇಟಾ:
* Strong's: H1957, H2472, H2492, H2493, G17970, G17980, G36770