kn_tw/bible/other/disperse.md

24 lines
3.1 KiB
Markdown

# ಚದುರು, ಚದರಿಕೆ
## ಪದದ ಅರ್ಥವಿವರಣೆ:
“ಚದುರು” ಮತ್ತು “ಚದರಿಕೆ” ಎನ್ನುವ ಪದಗಳು ಜನರು ಚದುರುವಿಕೆಯನ್ನು ಅಥವಾ ವಸ್ತುಗಳು ವಿವಿಧವಾದ ದಿಕ್ಕುಗಳಲ್ಲಿ ಚದರಿಹೋಗುವುದನ್ನು ಸೂಚಿಸುತ್ತವೆ.
* ಹಳೇ ಒಡಂಬಡಿಕೆಯಲ್ಲಿ ಜನರನ್ನು “ಚದರಿಸುವುದರ” ಕುರಿತಾಗಿ ದೇವರು ಮಾತನಾಡಿದ್ದಾರೆ, ಇದರಿಂದ ಒಬ್ಬರಿಗೊಬ್ಬರು ದೂರವಿರಲು ವಿವಿಧ ಸ್ಥಳಗಲ್ಲಿ ಜೀವಿಸುವಂತೆ ಮತ್ತು ಪ್ರತ್ಯೇಕವಾಗಿರುವಂತೆ ಕಾರಣವಾಯಿತು. ಅವರು ಮಾಡಿದ ಪಾಪಗಳಿಗಾಗಿ ಅವರನ್ನು ಶಿಕ್ಷಿಸುವುದಕ್ಕೆ ಆತನು ಈ ರೀತಿ ಮಾಡಿದ್ದಾನೆ. ಬಹುಶಃ ಅವರು ಚದುರಿ ಹೋಗುವುದರಿಂದ ಅವರು ಪಶ್ಚಾತ್ತಾಪ ಹೊಂದಿ, ದೇವರನ್ನು ತಿರುಗಿ ಆರಾಧನೆ ಮಾಡಿದರು.
* “ಚದುರುವಿಕೆ” ಎನ್ನುವ ಪದವನ್ನು ಹೊಸ ಒಡಂಬಡಿಕೆಯಲ್ಲಿ ಶ್ರಮೆಗಳನ್ನು ತಪ್ಪಿಸಿಕೊಳ್ಳುವುದಕ್ಕೆ ಅನೇಕ ವಿವಿಧ ಸ್ಥಳಗಳಿಗೆ ವರ್ಗಾವಣೆಯಾಗಲು ಮತ್ತು ಅವರ ಮನೆಗಳನ್ನು ಬಿಟ್ಟುಹೋಗಲು ಸಿದ್ಧವಾಗಿರುವ ಕ್ರೈಸ್ತರಿಗೆ ಸೂಚಿಸಲ್ಪಟ್ಟಿರುತ್ತದೆ.
* “ಚದುರುವಿಕೆ” ಎನ್ನುವ ಮಾತನ್ನು “ವಿವಿಧ ಸ್ಥಳಗಳಲ್ಲಿ ವಿಶ್ವಾಸಿಗಳು” ಅಥವಾ “ವಿವಿಧವಾದ ದೇಶಗಳಲ್ಲಿ ಜೀವಿಸುವುದಕ್ಕೆ ಹೋಗಿರುವ ಜನರು” ಎಂದೂ ಅನುವಾದ ಮಾಡಬಹುದು.
* “ಚದುರು” ಎನ್ನುವ ಪದವನ್ನು “ಅನೇಕ ವಿವಿಧವಾದ ಸ್ಥಳಗಳಿಗೆ ಕಳುಹಿಸು” ಅಥವಾ “ವಿದೇಶಿಗಳಿಗೆ ಚೆದರಿ ಹೋಗು” ಅಥವಾ “ಬದುಕುವುದಕ್ಕೆ ವಿವಿಧ ದೇಶಗಳಿಗೆ ಹೋಗುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಂಬು](../kt/believe.md), [ಹಿಂಸೆ](../other/persecute.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೇತ್ರ.01:1-2](rc://*/tn/help/1pe/01/01)
* [ಯೆಹೆ.12:14-16](rc://*/tn/help/ezk/12/14)
* [ಯೆಹೆ.30:22-24](rc://*/tn/help/ezk/30/22)
* [ಕೀರ್ತನೆ.018:13-14](rc://*/tn/help/psa/018/013)
## ಪದ ಡೇಟಾ:
* Strong's: H2219, H4127, H5310, H6327, H6340, H6504, H8600, G1287, G1290, G4650