kn_tw/bible/other/defile.md

34 lines
4.4 KiB
Markdown

# ಮೈಲಿಗೆ, ಮೈಲಿಗೆ ಮಾಡುತ್ತದೆ, ಅಶುದ್ಧ, ಮೈಲಿಗೆ ಮಾಡು, ಅಪವಿತ್ರಗೊಳಿಸು, ಅಪವಿತ್ರಗೊಳಿಸಲ್ಪಟ್ಟಿದ್ದಾರೆ
## ಪದದ ಅರ್ಥವಿವರಣೆ:
“ಮೈಲಿಗೆ” ಮತ್ತು “ಮೈಲಿಗೆ ಮಾಡು” ಎನ್ನುವ ಪದಗಳು ಕೊಳಕಾಗಿರುವವುಗಳನ್ನು ಅಥವಾ ಮಾಲಿನ್ಯವಾಗಿರುವವುಗಳನ್ನು ಸೂಚಿಸುತ್ತದೆ. ಎನಾದರೊಂದು ಭೌತಿಕವಾಗಿ, ನೈತಿಕವಾಗಿ ಅಥವಾ ಆಧ್ಯಾತ್ಮಿಕವಾಗಿ ಕೆಟ್ಟುಹೋಗಬಹುದು ಅಥವಾ ಮೈಲಿಗೆ ಆಗಬಹುದು.
* ದೇವರು “ಅಶುದ್ಧ” ಮತ್ತು “ಅಪವಿತ್ರ” ಎಂದು ಪ್ರಕಟಿಸಿದವುಗಳನ್ನು ತಿನ್ನುವುದರಿಂದ ಅಥವಾ ಮುಟ್ಟುವದರಿಂದ ತಮ್ಮನ್ನು ಮೈಲಿಗೆ ಮಾಡಿಕೊಳ್ಳಬಾರದೆಂದು ದೇವರು ಇಸ್ರಾಯೇಲ್ಯರನ್ನು ಎಚ್ಚರಿಸಿದನು.
* ಮೃತ ದೇಹಗಳು ಮತ್ತು ಅಂಟು ರೋಗಗಳು ಎನ್ನುವ ಕೆಲವೊಂದು ವಿಷಯಗಳನ್ನು ದೇವರು ಅಶುದ್ಧ ವೆಂದು ತೀರ್ಮಾನ ಮಾಡಿದ್ದಾರೆ ಮತ್ತು ಅವುಗಳನ್ನು ಮುಟ್ಟಿದ ಮನುಷ್ಯರು ಮೈಲಿಗೆಯಾಗುತ್ತಾರೆ.
* ಲೈಂಗಿಕವಾದ ಪಾಪಗಳನ್ನು ಮಾಡಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು. ಇವೆಲ್ಲವು ಅವರನ್ನು ಮೈಲಿಗೆ ಮಾಡಿ, ಅವರನ್ನು ದೇವರು ಅಂಗೀಕಾರ ಮಾಡದ ಹಾಗೆ ಮಾಡುತ್ತವೆ.
* ಕೆಲವೊಂದು ದೈಹಿಕ ಪ್ರಕ್ರಿಯೆಗಳು ಕೂಡ ಇರುತ್ತವೆ, ಇವು ಒಬ್ಬ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮೈಲಿಗೆ ಮಾಡುತ್ತವೆ. ಆ ವ್ಯಕ್ತಿ ತಿರುಗಿ ಆತ್ಮಿಕವಾಗಿ ಪವಿತ್ರನಾಗುವವರೆಗೂ ಮೈಲಿಗೆಯಾಗಿರುತ್ತಾನೆ.
* ಹೊಸ ಒಡಂಬಡಿಕೆಯಲ್ಲಿ ಪಾಪದ ಆಲೋಚನೆಗಳು ಮತ್ತು ಕ್ರಿಯೆಗಳು ಒಬ್ಬ ಮನುಷ್ಯನನ್ನು ಕೆಡಿಸುತ್ತವೆಯೆಂದು ಯೇಸು ಹೇಳಿದ್ದಾರೆ.
## ಅನುವಾದ ಸಲಹೆಗಳು:
* “ಮೈಲಿಗೆ ಮಾಡು” ಎನ್ನುವ ಪದವನ್ನು “ಅಶುದ್ಧ ವಾಗುವುದಕ್ಕೆ ಕಾರಣವಾಗು” ಅಥವಾ “ಅನೀತಿವಂತನಾಗುವುದಕ್ಕೆ ಕಾರಣವಾಗು” ಅಥವಾ “ಆತ್ಮಿಕವಾಗಿ ಸ್ವೀಕರಿಸಲ್ಪಡದಂತೆ ಮಾಡು” ಎಂದೂ ಅನುವಾದ ಮಾಡಬಹುದು.
* “ಅಪವಿತ್ರಗೊಳಿಸಲ್ಪಡು” ಎನ್ನುವ ಪದಕ್ಕೆ “ಅಶುದ್ಧವಾಗು” ಅಥವಾ “ನೈತಿಕವಾಗಿ (ದೇವರಿಗೆ) ಸ್ವೀಕರಿಸಲ್ಪಡದಂತೆ ಮಾಡು” ಅಥವಾ “ಆತ್ಮಿಕವಾಗಿ ಸ್ವೀಕರಿಸಲ್ಪಡದಂತೆ ಮಾರ್ಪಡುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಶುದ್ಧ](../kt/clean.md), [ಶುದ್ಧ](../kt/clean.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಅರಸ.23:8-9](rc://*/tn/help/2ki/23/08)
* [ವಿಮೋ.20:24-26](rc://*/tn/help/exo/20/24)
* [ಆದಿ.34:27-29](rc://*/tn/help/gen/34/27)
* [ಆದಿ.49:3-4](rc://*/tn/help/gen/49/03)
* [ಯೆಶಯಾ.43:27-28](rc://*/tn/help/isa/43/27)
* [ಯಾಜಕ.11:43-45](rc://*/tn/help/lev/11/43)
* [ಮಾರ್ಕ.07:14-16](rc://*/tn/help/mrk/07/14)
* [ಮತ್ತಾಯ.15:10-11](rc://*/tn/help/mat/15/10)
## ಪದ ಡೇಟಾ:
* Strong's: H1351, H1352, H1602, H2490, H2491, H2610, H2930, H2931, H2933, H2936, H5953, G733, G2839, G2840, G3392, G3435, G4696, G5351