kn_tw/bible/other/curtain.md

29 lines
3.4 KiB
Markdown

# ಪರದೆ, ಪರದೆಗಳು
## ಪದದ ಅರ್ಥವಿವರಣೆ
ಸತ್ಯವೇದದಲ್ಲಿ, “ಪರದೆ” ಎನ್ನುವ ಪದವು ಗುಡಾರವನ್ನು ಮಾಡಲು ಮತ್ತು ದೇವಾಲಯವನ್ನು ನಿರ್ಮಿಸಲು ಉಪಯೋಗಿಸಿದ ಒಂದು ದಪ್ಪವಾದ, ಭಾರವಾದ ವಸ್ತುವನ್ನು ಸೂಚಿಸುತ್ತದೆ.
* ಗುಡಾರದ ಮೇಲಿನ ಭಾಗ ಹಾಗೂ ಸುತ್ತಲಿರುವ ಭಾಗವನ್ನು ನಿರ್ಮಿಸಲು ನಾಲ್ಕು ಪದರ ಪರದೆಗಳನ್ನು ಉಪಯೋಗಿಸಿದರು. ಈ ಪರೆದಗಳು ಬಟ್ಟೆ ಅಥವಾ ಪ್ರಾಣಿಗಳ ಚರ್ಮದಿಂದ ಮಾಡಲ್ಪಟ್ಟಿದ್ದವು.
* ಗುಡಾರದ ಅಂಗಳ ಸುತ್ತು ಇರುವ ಗೋಡೆಯನ್ನು ನಿರ್ಮಿಸಲು ಬಟ್ಟೆಯ ಪರದೆಗಳನ್ನು ಉಪಯೋಗಿಸಿದರು. ಈ ಪರದೆಗಳು ಅಗಸೆ ಗಿಡದಿಂದ ಮಾಡಲ್ಪಟ್ಟ “ನಾರು” ಎಂಬ ಒಂದು ವಿಧವಾದ ಬಟ್ಟೆಯಿಂದ ಮಾಡಲ್ಪಟ್ಟಿದ್ದವು.
* ಗುಡಾರದಲ್ಲಿ ಮತ್ತು ದೇವಾಲಯದಲ್ಲಿ ಈ ಎರಡು ಪ್ರಾಂತಗಳಲ್ಲಿ, ಪರಿಶುದ್ಧ ಸ್ಥಳವನ್ನು ಅತಿಪರಿಶುದ್ದ ಸ್ಥಳದಿಂದ ಬೇರ್ಪಡೆಸಲು ಒಂದು ದಪ್ಪವಾದ ಬಟ್ಟೆಯ ಪರದೆಯನ್ನು ತೂಗುಹಾಕ್ಕಿದ್ದರು. ಯೇಸು ಮರಣಿಸಿದಾಗ ಈ ಪರದೆಯು ಎರಡು ಭಾಗಗಳಾಗಿ ಅಧ್ಭುತವಾದ ರೀತಿಯಲ್ಲಿ ಹರಿದುಹೋಯಿತು.
## ಅನುವಾದ ಸಲಹೆಗಳು:
* ಅಧುನಿಕ ಪ್ರಪಂಚದಲ್ಲಿ ಉಪಯೋಗಿಸುತ್ತಿರುವ ಪರದೆಗಳು ಸತ್ಯವೇದ ಕಾಲದ ಪರದೆಗಳಿಗೆ ವಿಭಿನ್ನವಾಗಿರುವ ಕಾರಣ, ಪರದೆಗಳನ್ನು ವಿವರಿಸಲು ಸೂಕ್ತ ಪದಗಳನ್ನು ಉಪಯೋಗಿಸಿ ಅದರ ಅರ್ಥವನ್ನು ಸ್ಪಷ್ಟಪಡಿಸಬೇಕು.
* ಸಂಧರ್ಭಾನುಸಾರವಾಗಿ, “ಪರದೆಯ ಹೊದಿಕೆ” ಅಥವಾ “ಹೊದಿಕೆ” ಅಥವಾ “ದಪ್ಪವಾದ ಬಟ್ಟೆ” ಅಥವಾ “ಪ್ರಾಣಿಗಳ ಚರ್ಮದ ಹೊದಿಕೆ” ಅಥವಾ “ತೂಗುಹಕಲ್ಪಟ್ಟಿರುವ ಬಟ್ಟೆಯ ತುಂಡು” ಎಂದು ಅನೇಕ ವಿಧವಾಗಿ ಈ ಪದವನ್ನು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪರಿಶುದ್ಧ ಸ್ಥಳ](../kt/holyplace.md), [ಗುಡಾರ](../kt/tabernacle.md), [ದೇವಾಲಯ](../kt/temple.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಇಬ್ರಿ.10:19-22](rc://*/tn/help/heb/10/19)
* [ಯಾಜ.04:16-17](rc://*/tn/help/lev/04/16)
* [ಲೂಕ.23:44-45](rc://*/tn/help/luk/23/44)
* [ಮತ್ತಾಯ.27:51-53](rc://*/tn/help/mat/27/51)
* [ಅರಣ್ಯ.04:5-6](rc://*/tn/help/num/04/05)
## ಪದ ಡೇಟಾ:
* Strong's: H1852, H3407, H4539, H6532, H7050, G2665