44 lines
7.4 KiB
Markdown
44 lines
7.4 KiB
Markdown
# ಧೈರ್ಯ, ಧೈರ್ಯಮಯ, ಪ್ರೋತ್ಸಾಹ, ಪ್ರೋತ್ಸಾಹಿಸು, ನಿರುತ್ಸಾಹ, ನಿರುತ್ಸಾಹಗೊಳಿಸು
|
|
|
|
## ಸತ್ಯಾಂಶಗಳು:
|
|
|
|
“ಧೈರ್ಯ” ಎನ್ನುವ ಪದವು ತುಂಬಾ ಕಷ್ಟಕರವಾದ, ಅಪಾಯಕರವಾದ ಅಥವಾ ಭಯಾನಕವಾದ ಕಾರ್ಯವನ್ನು ಮಾಡುವುದನ್ನು ಮತ್ತು ಅದನ್ನು ಧೈರ್ಯದಿಂದ ಎದುರುಗೊಳ್ಳುವುದನ್ನು ಸೂಚಿಸುತ್ತದೆ.
|
|
|
|
* “ಧೈರ್ಯಮಯ” ಎನ್ನುವ ಪದವು ಒಬ್ಬ ಭಯಪಡುವ ಸಮಯದಲ್ಲಿ ಅಥವಾ ಮಾಡುವ ಕೆಲಸವನ್ನು ಬಿಟ್ಟುಬಿಡುವ ಸಮಯದಲ್ಲಿ ಸರಿಯಾದ ಕಾರ್ಯವನ್ನು ಮಾಡುತ್ತಾ, ತನ್ನ ಧೈರ್ಯವನ್ನು ಪ್ರದರ್ಶಿಸುವ ವ್ಯಕ್ತಿಯನ್ನು ತೋರಿಸುತ್ತದೆ.
|
|
* ಒಬ್ಬ ವ್ಯಕ್ತಿ ತನ್ನ ಬಲ ಮತ್ತು ಅವಿರತ ಯತ್ನದೊಂದಿಗೆ ಮಾನಸಿಕವಾದ ಅಥವಾ ಭೌತಿಕವಾದ ನೋವನ್ನು ಹೊಂದುತ್ತಿರುವಾಗ ತನ್ನೊಳಗಿರುವ ಧೈರ್ಯವನ್ನು ತೋರಿಸುತ್ತಾನೆ.
|
|
* “ಧೈರ್ಯವನ್ನು ಹೊಂದು” ಎನ್ನುವ ಮಾತಿಗೆ “ಹೆದರಬೇಡ” ಅಥವಾ “ಎಲ್ಲಾ ಕಾರ್ಯಗಳು ಚೆನ್ನಾಗಿ ನಡೆಯುತ್ತವೆಯೆಂದು ಖಚಿತವಾಗಿರುವುದು” ಎಂದರ್ಥ.
|
|
* ಯೆಹೋಶುವ ಕಾನಾನ್ ಎನ್ನುವ ಭಯಾನಕವಾದ ಭೂಮಿಗೆ ಹೋಗುವುದಕ್ಕೆ ಸಿದ್ಧಗೊಳಿಸುತ್ತಿರುವಾಗ, “ಬಲದಿಂದಿರು ಮತ್ತು ಧೈರ್ಯದಿಂದಿರು” ಎಂದು ಮೋಶೆ ಯೆಹೋಶುವನಿಗೆ ಎಚ್ಚರಿಕೆ ನೀಡಿದನು.
|
|
* “ಧೈರ್ಯಮಯ” ಎನ್ನುವ ಪದವನ್ನು “ಧೈರ್ಯಶಾಲಿ” ಅಥವಾ “ಹೆದರಿಕೆಯಿಲ್ಲದೇ” ಅಥವಾ “ದಿಟ್ಟ” ಎನ್ನುವ ಪರ್ಯಾಯ ಪದಗಳಿಂದಲೂ ಹೇಳಬಹುದು.
|
|
* ಸಂದರ್ಭಾನುಸಾರವಾಗಿ “ಧೈರ್ಯವನ್ನು ಹೊಂದು” ಎನ್ನುವ ಪದವನ್ನು “ಮಾನಸಿಕವಾಗಿ ಬಲದಿಂದಿರು” ಅಥವಾ “ನಿಶ್ಚಯತೆಯಿಂದಿರು” ಅಥವಾ “ಸ್ಥಿರವಾಗಿ ನಿಲ್ಲು” ಎಂದೂ ಅನುವಾದ ಮಾಡಬಹುದು.
|
|
* “ಧೈರ್ಯದಿಂದ ಮಾತನಾಡು” ಎನ್ನುವ ಮಾತಿಗೆ “ನಿರ್ಭಯದಿಂದ ಮಾತನಾಡು” ಅಥವಾ “ಹೆದರದೆ ಮಾತನಾಡು” ಅಥವಾ “ನಿಶ್ಚಯತೆಯಿಂದ ಮಾತನಾಡು” ಎಂದೂ ಹೇಳಬಹುದು ಅಥವಾ ಅನುವಾದ ಮಾಡಬಹುದು.
|
|
|
|
“ಪ್ರೋತ್ಸಾಹಿಸು” ಅಥವಾ “ಪ್ರೋತ್ಸಾಹ” ಎನ್ನುವ ಪದಗಳು ಒಬ್ಬರಿಗೆ ಆದರಣೆಯನ್ನುಂಟು ಮಾಡಲು, ನಿರೀಕ್ಷೆ ಕೊಡಲು, ನಿಶ್ಚಯತೆ ಮತ್ತು ಧೈರ್ಯವನ್ನುಂಟು ಮಾಡಲು ಹೇಳುವ ಮಾತುಗಳು ಅಥವಾ ಕಾರ್ಯಗಳನ್ನು ಸೂಚಿಸುತ್ತದೆ.
|
|
|
|
* “ಎಚ್ಚರಿಕೆ” ಎನ್ನುವ ಪರ್ಯಾಯ ಪದವು ಕೂಡ ಯಾರಾದರೊಬ್ಬರು ತಪ್ಪಾದ ಕಾರ್ಯವನ್ನು ಮಾಡುತ್ತಿದ್ದರೆ, ಅದನ್ನು ಮಾಡಬೇಡಿ ಎಂದು ಹೇಳುವುದು ಮತ್ತು ತಪ್ಪಾದ ಕಾರ್ಯಗಳಿಗೆ ಬದಲಾಗಿ ಸರಿಯಾದ ಮತ್ತು ಒಳ್ಳೇಯ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಗೊಳಿಸುವುದು ಎಂದೆನ್ನುವ ಅರ್ಥವನ್ನು ಹೊಂದಿರುತ್ತದೆ.
|
|
* ಅಪೊಸ್ತಲನಾದ ಪೌಲನು ಮತ್ತು ಇತರ ಹೊಸ ಒಡಂಬಡಿಕೆಯ ರಚನಾಕಾರರು ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳಬೇಕೆಂದು ಮತ್ತು ಸೇವೆ ಮಾಡಿಕೊಳ್ಳಬೇಕೆಂದು ಕ್ರೈಸ್ತರಿಗೆ ಬೋಧನೆ ಮಾಡಿದರು.
|
|
* “ನಿರುತ್ಸಾಹಗೊಳಿಸು” ಎನ್ನುವ ಪದವು ಜನರು ತಮ್ಮಲ್ಲಿ ಇಟ್ಟುಕೊಂಡಿರುವ ನಿರೀಕ್ಷೆ, ನಿಶ್ಚಯತೆ, ಮತ್ತು ಧೈರ್ಯ ಎನ್ನುವವುಗಳನ್ನು ಕಳೆದುಕೊಳ್ಳುವಂತೆ ಹೇಳುವ ಮಾತುಗಳನ್ನು ಮತ್ತು ಕ್ರಿಯೆಗಳನ್ನು ಸೂಚಿಸುತ್ತದೆ. ಇದರಿಂದ ಜನರು ಮಾಡಲೇ ಬೇಕಾದ ಕಾರ್ಯಗಳನ್ನು ಕಷ್ಟಪಟ್ಟು ಮಾಡುವುದಕ್ಕೆ ತಮ್ಮಲ್ಲಿರುವ ಆಸೆಯನ್ನು ಕಡಿಮೆ ಮಾಡುತ್ತವೆ.
|
|
|
|
## ಅನುವಾದ ಸಲಹೆಗಳು:
|
|
|
|
* ಸಂದರ್ಭಾನುಸಾರವಾಗಿ “ಪ್ರೋತ್ಸಾಹಗೊಳಿಸು” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಪ್ರೇರೇಪಿಸು” ಅಥವಾ “ಆದರಿಸು” ಅಥವಾ “ದಯೆಯುಳ್ಳ ಪದಗಳನ್ನು ಹೇಳು” ಅಥವಾ “ಸಹಾಯ ಮಾಡು ಮತ್ತು ಬೆಂಬಲ ಕೊಡು” ಎನ್ನುವ ಪದಗಳೂ ಒಳಗೊಂಡಿರುತ್ತವೆ.
|
|
* “ಪ್ರೋತ್ಸಾಹಗೊಳಿಸುವ ಮಾತುಗಳನ್ನು ಕೊಡು” ಎನ್ನುವ ಮಾತಿಗೆ “ಇತರ ಜನರು ಪ್ರೀತಿಸಲ್ಪದುತ್ತಿದ್ದಾರೆಂದು, ಅಂಗೀಕರಿಸಲ್ಪಡುತ್ತಿದ್ದಾರೆಂದು ಮತ್ತು ಬಲವನ್ನು ಹೊಂದುತ್ತಿದ್ದಾರೆಂದು ತಿಳಿಯುವಂತೆ ಮಾಡುವ ವಿಷಯಗಳನ್ನು ಹೇಳು” ಎಂದರ್ಥ.
|
|
|
|
(ಈ ಪದಗಳನ್ನು ಸಹ ನೋಡಿರಿ : [ನಿಶ್ಚಯತೆ](../other/confidence.md), [ಎಚ್ಚರಿಕೆ](../kt/exhort.md), [ಭಯ](../kt/fear.md), [ಬಲ](../other/strength.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಧರ್ಮೋ.01:37-38](rc://*/tn/help/deu/01/37)
|
|
* [2 ಅರಸ.18:19-21](rc://*/tn/help/2ki/18/19)
|
|
* [1 ಪೂರ್ವ.17:25](rc://*/tn/help/1ch/17/25)
|
|
* [ಮತ್ತಾಯ.09:20-22](rc://*/tn/help/mat/09/20)
|
|
* [1 ಕೊರಿಂಥ.14:1-4](rc://*/tn/help/1co/14/01)
|
|
* [2 ಕೊರಿಂಥ.07:13](rc://*/tn/help/2co/07/13)
|
|
* [ಅಪೊ.ಕೃತ್ಯ.05:12-13](rc://*/tn/help/act/05/12)
|
|
* [ಅಪೊ.ಕೃತ್ಯ.16:40](rc://*/tn/help/act/16/40)
|
|
* [ಇಬ್ರಿ.03:12-13](rc://*/tn/help/heb/03/12)
|
|
* [ಇಬ್ರಿ.13:5-6](rc://*/tn/help/heb/13/05)
|
|
|
|
## ಪದ ಡೇಟಾ:
|
|
|
|
* Strong's: H533, H553, H1368, H2388, H2388, H2428, H3820, H3824, H7307, G2114, G2115, G2174, G2292, G2293, G2294, G3870, G3874, G3954, G4389, G4837, G5111
|