kn_tw/bible/other/contempt.md

23 lines
3.7 KiB
Markdown

# ತಿರಸ್ಕಾರ, ತಿರಸ್ಕಾರಾರ್ಹ ಅಥವಾ ಹೇಯ
## ಸತ್ಯಾಂಶಗಳು:
“ತಿರಸ್ಕಾರ” ಎನ್ನುವ ಪದವು ಒಬ್ಬರ ವಿಷಯದಲ್ಲಿ ಅಥವಾ ಯಾವುದಾದರೊಂದರ ವಿಷಯದಲ್ಲಿ ತೋರಿಸುವ ಅಗೌರವವನ್ನು ಮತ್ತು ಅವಮಾನವನ್ನು ಸೂಚಿಸುತ್ತದೆ. ಯಾವುದಾದರೊಂದನ್ನು ಅತೀ ಹೆಚ್ಚಾಗಿ ಅವಮಾನಕ್ಕೆ ಗುರಿಮಾಡಿದರೆ ಅದನ್ನು “ತಿರಸ್ಕಾರಾರ್ಹ” ಅಥವಾ ಹೇಯ ಎಂದು ಕರೆಯುತ್ತಾರೆ.
* ದೇವರ ವಿಷಯದಲ್ಲಿ ಮನುಷ್ಯನು ಅಥವಾ ನಡತೆ ತೋರಿಸುವ ಅಗೌರವವನ್ನು ಕೂಡ “ತಿರಸ್ಕಾರಾರ್ಹ” ಎಂದು ಕರೆಯುತ್ತಾರೆ ಮತ್ತು ಇದನ್ನು “ಅತೀ ಹೆಚ್ಚಾದ ಅಗೌರವ” ಅಥವಾ “ಸಂಪೂರ್ಣವಾಗಿ ಅವಮಾನಿಸು” ಅಥವಾ “ಅರ್ಹವಾದ ತಿರಸ್ಕಾರ” ಎಂದೂ ಅನುವಾದ ಮಾಡಬಹುದು.
* “ತಿರಸ್ಕಾರದಲ್ಲಿರಿಸುವುದು” ಎನ್ನುವದಕ್ಕೆ ಒಬ್ಬರಿಗೆ ಅತೀ ಕಡಿಮೆ ಬೆಲೆಯನ್ನು ಕೊಡುವುದು ಅಥವಾ ಒಬ್ಬರಿಗಿಂತ ಇನ್ನೊಬ್ಬರನ್ನು ಅತೀ ಕೀಳಾದ ವ್ಯಕ್ತಿಯೆಂದು ತೀರ್ಪು ಮಾಡುವುದು ಎಂದರ್ಥ.
* ಇಲ್ಲಿ ಕೊಡಲ್ಪಟ್ಟಿರುವ ಮಾತುಗಳು ಕೂಡ ಒಂದೇ ಅರ್ಥವನ್ನು ಹೊಂದಿರುತ್ತವೆ: “ತಿರಸ್ಕಾರ ಮಾಡು” ಅಥವಾ “ತಿರಸ್ಕಾರವನ್ನು ತೋರಿಸು” ಅಥವಾ “ಬೇರೊಂದು ವಿಷಯದಲ್ಲಿ ತಿರಸ್ಕಾರವನ್ನು ಹೊಂದಿರು” ಅಥವಾ “ತಿರಸ್ಕಾರದಿಂದ ನಡೆದುಕೋ”. ಈ ಎಲ್ಲಾ ಮಾತುಗಳ ಅರ್ಥವೇನೆಂದರೆ ಯಾರಾದರೊಬ್ಬರ ಅಥವಾ ಯಾವುದಾದರೊಂದರ ವಿಷಯದಲ್ಲಿ ಹೇಳುವುದರ ಮೂಲಕ ಮತ್ತು ಕ್ರಿಯೆಗಳನ್ನು ತೋರಿಸುವುದರ ಮೂಲಕ “ಬಲವಾಗಿ ಅಗೌರವಿಸುವುದು” ಅಥವಾ “ಬಲವಾಗಿ ಅವಮಾನ ಮಾಡುವುದು”..
* ಅರಸನಾದ ದಾವೀದನು ವ್ಯಭಿಚಾರ ಮಾಡಿದಾಗ ಮತ್ತು ನರಹತ್ಯೆ ಮಾಡಿದಾಗ, ದೇವರ ವಿಷಯದಲ್ಲಿ ದಾವೀದನು “ತಿರಸ್ಕಾರವನ್ನು ತೋರಿಸಿದನು” ಎಂದು ದೇವರು ಹೇಳಿದ್ದಾರೆ. ಈ ಕೆಟ್ಟ ಕೆಲಸವನ್ನು ಮಾಡುವುದರ ಮೂಲಕ ದಾವೀದನು ದೇವರನ್ನು ಅತೀ ಹೆಚ್ಚಾಗಿ ಅಗೌರವಿಸಿದನು ಮತ್ತು ಅತೀ ಹೆಚ್ಚಾಗಿ ಅವಮಾನಕ್ಕೆ ಗುರಿ ಮಾಡಿದನು ಎಂದರ್ಥ.
(ಈ ಪದಗಳನ್ನು ಸಹ ನೋಡಿರಿ : [ಅವಮಾನ](../other/dishonor.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ದಾನಿ.12:1-2](rc://*/tn/help/dan/12/01)
* [ಜ್ಞಾನೋ.15:5-6](rc://*/tn/help/pro/15/05)
* [ಕೀರ್ತನೆ.031:17-18](rc://*/tn/help/psa/031/017)
## ಪದ ಡೇಟಾ:
* Strong's: H936, H937, H959, H963, H1860, H7043, H7589, H5006, G1848