kn_tw/bible/other/clothed.md

4.4 KiB
Raw Permalink Blame History

ಬಟ್ಟೆ, ತೊಡಿಸಲ್ಪಟ್ಟಿದೆ, ಬಟ್ಟೆಗಳು, ಉಡುಪುಗಳು, ಬಟ್ಟೆಗಳಿಲ್ಲದ, ವಸ್ತ್ರಗಳು

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಅಲಂಕಾರಿಕ ಭಾಷೆಯನ್ನೂ ಉಪಯೋಗಿಸಿದಾಗ, “ಇವುಗಳೊಂದಿಗೆ ತೊಡಿಸಲ್ಪಟ್ಟಿದೆ” ಎನ್ನುವ ಮಾತಿಗೆ ಯಾವುದಾದರೊಂದಿಗೆ ಸಜ್ಜುಗೊಳಿಸಲಾಗಿದೆ ಅಥವಾ ಅನುಗ್ರಹಿಸಲ್ಪಟ್ಟಿದೆ ಎಂದರ್ಥ. “ ಯಾವುದಾದರೊಂದಿಗೆ “ತೊಡಿಸಿ” ಕೊಳ್ಳುವುದು ಎಂದರೆ ಒಂದು ಸರಿಯಾದ ಗುಣಲಕ್ಷಣದ ಬೆಲೆಯನ್ನು ಹೊಂದಿಕೊಳ್ಳುವುದಕ್ಕೆ ಎದುರುನೋಡುವುದು.

  • ನಿಮ್ಮ ದೇಹಕ್ಕೆ ಬಹಿರಂಗವಾಗಿ ಉಡುಪುಗಳನ್ನು ಧರಿಸಿಕೊಳ್ಳುವುದೆನ್ನುವುದು ಎಲ್ಲರಿಗೆ ಕಾಣಿಸಿಕೊಳ್ಳುವ ವಿಧಾನದಲ್ಲೇ, ನೀವು ಒಂದು ನಿರ್ಧಿಷ್ಟವಾದ ಗುಣಲಕ್ಷಣದೊಂದಿಗೆ “ತೊಡಿಸಲ್ಪಟ್ಟಾಗ”, ಇತರರು ಅದನ್ನು ಸುಲಭವಾಗಿ ನೋಡುತ್ತಾರೆ. “ದಯೆಯೊಂದಿಗೆ ನಿಮ್ಮನ್ನು ನೀವೇ ತೊಡಿಸಿಕೊಳ್ಳುವುದು” ಎನ್ನುವ ಮಾತಿಗೆ ಎಲ್ಲರೂ ಅತೀ ಸುಲಭವಾಗಿ ನಿಮ್ಮನ್ನು ನೋಡುವಂತೆ ದಯೆಯಿಂದ ನಿಮ್ಮ ಕ್ರಿಯೆಗಳು ಪರಿವರ್ತನೆಯಾಗಬೇಕು ಎಂದರ್ಥ.
  • “ಮೇಲಣದಿಂದ ಬರುವ ಶಕ್ತಿಯೊಂದಿಗೆ ತೊಡಿಸಲ್ಪಡಿರಿ” ಎನ್ನುವ ಮಾತಿಗೆ ಶಕ್ತಿಯನ್ನು ಹೊಂದುವುದಕ್ಕೆ ನಿಮಗೆ ಕೊಡಲ್ಪಟ್ಟಿದೆ ಎಂದರ್ಥ.
  • ಈ ಪದವು ಋಣಾತ್ಮಕವಾದ ಅನುಭವಗಳನ್ನು ವ್ಯಕ್ತಪಡಿಸುವುದಕ್ಕೂ ಉಪಯೋಗಿಸಲ್ಪಟ್ಟಿದೆ, ಉದಾಹರಣೆಗೆ,“ನಾಚಿಕೆಯಿಂದ ತೊಡಿಸಲ್ಪಟ್ಟಿದ್ದೀಯಾ” ಅಥವಾ “ಭಯಾನಕದೊಂದಿಗೆ ತೊಡಿಸಲ್ಪಟ್ಟಿದ್ದೀ”.

ಅನುವಾದ ಸಲಹೆಗಳು:

  • ಸಾಧ್ಯವಾದರೆ, “ಯಾವುದಾದರೊಂದಿಗೆ ತೊಡಿಸಿಕೋ” ಎಂದು ಅಕ್ಷರಾರ್ಥ ಶಬ್ದಾಲಂಕಾರವನ್ನು ಹೊಂದಿರುವುದು ಒಳ್ಳೇಯದು. ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ “ಧರಿಸು” ಎಂದೂ ಅನುವಾದ ಮಾಡಬಹುದು, ವಸ್ತ್ರಗಳನ್ನು ಧರಿಸು ಎನ್ನುವ ಮಾತಿನ ಸಂದರ್ಭಕ್ಕೆ ಇದನ್ನು ಉಪಯೋಗಿಸಬಹುದು.
  • ಅದು ಒಂದುವೇಳೆ ಸರಿಯಾದ ಅರ್ಥವನ್ನು ಕೊಡದಿದ್ದರೆ, “ಯಾವುದಾದದೊಂದಿಗೆ” ತೊಡಿಸಲ್ಪಡು” ಎನ್ನುವದನ್ನು “ತೋರಿಸು” ಅಥವಾ “ಸ್ವರೂಪ ಪಡೆ” ಅಥವಾ “ತುಂಬಿಸಲ್ಪಡು” ಅಥವಾ “ಗುಣವನ್ನು ಹೊಂದು” ಎಂದೂ ಇನ್ನೊಂದು ರೀತಿಯಲ್ಲಿ ಅನುವಾದ ಮಾಡಬಹುದು.
  • “ನಿಮ್ಮನ್ನು ನೀವೇ ತೊಡಿಸಿಕೊಳ್ಳಿರಿ” ಎನ್ನುವ ಪದಕ್ಕೆ “ನಿಮ್ಮನ್ನು ನೀವು ಮುಚ್ಚಿಕೊಳ್ಳಿರಿ” ಅಥವಾ “ಕಾಣಿಸುವ ರೀತಿಯಲ್ಲಿ ನಡೆದುಕೊಳ್ಳಿರಿ” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H899, H3680, H3736, H3830, H3847, H3848, H4055, H4374, H5497, H8008, H8071, H8516, G294, G1463, G1562, G1737, G1742, G1746, G1902, G2066, G2224, G2439, G2440, G4016, G4749, G5509