kn_tw/bible/other/captive.md

34 lines
5.7 KiB
Markdown

# ಸೆರೆ ಸಿಕ್ಕುವುದು, ಬಂಧಿತರು, ಬಂಧಿಸುವುದು, ಸೆರೆ ಸಿಕ್ಕಿದ್ದಾರೆ, ಸೆರೆಯಲ್ಲಿ
## ಪದದ ಅರ್ಥವಿವರಣೆ:
“ಸೆರೆ ಸಿಕ್ಕುವುದು” ಮತ್ತು "ಬಂಧಿತರು” ಎನ್ನುವ ಪದಗಳು ಜನರನ್ನು ಹಿಡಿದುಕೊಂಡು ಹೋಗುವುದನ್ನು ಮತ್ತು ಅವರು ನಿವಾಸ ಮಾಡುವುದಕ್ಕೆ ಇಷ್ಟಪಡದ ಸ್ಥಳದಲ್ಲಿ ಅಂದರೆ ವಿದೇಶದಲ್ಲಿ ನಿವಾಸ ಮಾಡುವಂತೆ ಬಲವಂತಿಕೆ ಮಾಡುವುದನ್ನು ಸೂಚಿಸುತ್ತದೆ.
* ಯೂದಾ ರಾಜ್ಯದಿಂದ ಬಂದಿರುವ ಇಸ್ರಾಯೇಲ್ಯರು ಸುಮಾರು ಎಪ್ಪತ್ತು ವರ್ಷಗಳ ಕಾಲ ಬಾಬೆಲೋನಿಯದಲ್ಲಿ ಸೆರೆಯಲ್ಲಿದ್ದರು.
* ಯಾವ ದೇಶವು ಸೆರೆಗೊಯ್ಯಲ್ಪಟ್ಟಿರುತ್ತದೋ, ಆ ದೇಶಕ್ಕಾಗಿ ಅಥವಾ ಆ ಜನರಿಗಾಗಿ ಬಂಧಿತರಾಗಿರುವ ಜನರು ಕೆಲಸ ಮಾಡಬೇಕಾಗಿರುತ್ತದೆ.
* ದಾನಿಯೇಲ ಮತ್ತು ನೆಹೆಮೀಯನು ಬಾಬೆಲೋನಿಯ ಅರಸನಾಗಿ ಕೆಲಸ ಮಾಡಿದ ಬಂಧಿತರಾಗಿದ್ದರು (ಅಥವಾ ಸೆರೆಗೊಯ್ಯಲ್ಪಟ್ಟವರಾಗಿದ್ದರು).
* “ಸೆರೆ ಹಿಡಿಯುವುದು” ಎನ್ನುವ ಮಾತಿನ ಭಾವವ್ಯಕ್ತೀಕರಣ ಏನಂದರೆ ಒಬ್ಬರನ್ನು ಹಿಡಿದುಕೊಂಡು ಹೋಗುವುದರ ಕುರಿತಾಗಿ ಇನ್ನೊಂದು ರೀತಿಯಲ್ಲಿ ಮಾತನಾಡುವ ವಿಧಾನವಾಗಿರುತ್ತದೆ.
* “ನಿಮ್ಮನ್ನು ಸೆರೆ ಹಿಡಿದುಕೊಂಡು ಹೋಗುತ್ತೇವೆ” ಎನ್ನುವ ಭಾವವ್ಯಕ್ತೀಕರಣವನ್ನು “ಬಂಧಿತರಾಗಿ ಜೀವಿಸುವುದಕ್ಕೆ ನಿಮ್ಮನ್ನು ಬಲವಂತಿಕೆ ಮಾಡುತ್ತೇವೆ” ಅಥವಾ “ನಿಮ್ಮ ಖೈದಿಗಳನ್ನಾಗಿ ಇನ್ನೊಂದು ದೇಶಕ್ಕೆ ಸೆರೆ ಹಿಡಿದುಕೊಂಡು ಹೋಗುತ್ತೇವೆ” ಎಂದೂ ಅನುವಾದ ಮಾಡಬಹುದು.
* ಅಲಂಕಾರ ಭಾವನೆಯಲ್ಲಿ, ಪ್ರತಿಯೊಂದು ಆಲೋಚನೆಯನ್ನು “ಸೆರೆಹಿಡಿದು”, ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡಬೇಕು ಎಂದು ಅಪೊಸ್ತಲನಾದ ಪೌಲನು ಕ್ರೈಸ್ತರಿಗೆ ಹೇಳಿದ್ದಾನೆ.
* ಪಾಪ ಮಾಡುವದರಿಂದ ಯಾವರೀತಿ ಒಬ್ಬ ವ್ಯಕ್ತಿ “ಸೆರೆಗೊಯ್ಯಲ್ಪಡುತ್ತಾನೋ” ಎನ್ನುವುದರ ಕುರಿತಾಗಿಯೂ ಆತನು ಮಾತನಾಡಿದ್ದಾನೆ. ಇದಕ್ಕೆ ಅವನು ಪಾಪದಿಂದ “ನಿಯಂತ್ರಿಸಲ್ಪಡುತ್ತಿದ್ದಾನೆ” ಎಂದರ್ಥ.
## ಅನುವಾದ ಸಲಹೆಗಳು
* ಸಂದರ್ಭಕ್ಕೆ ತಕ್ಕಂತೆ, “ಸೆರೆ ಹಿಡಿ” ಎನ್ನುವ ಮಾತನ್ನು, “ಸ್ವತಂತ್ರದಿಂದಿರುವುದಕ್ಕೆ ಅನುಮತಿಸಬೇಡಿ” ಅಥವಾ “ಸೆರೆಯಲ್ಲಿ ಹಾಕಿರಿ” ಅಥವಾ “ವಿದೇಶದಲ್ಲಿ ಜೀವಿಸುವುದಕ್ಕೆ ಬಲವಂತಿಕೆ ಮಾಡಿರಿ” ಎಂದೂ ಅನುವಾದ ಮಾಡಬಹುದು.
* “ಸೆರೆ ಹಿಡಿದಿದ್ದೇವೆ” ಅಥವಾ “ಸೆರೆ ತೆಗೆದುಕೊಂಡಿದ್ದೇವೆ” ಎನ್ನುವ ಭಾವವನ್ನು ಕೊಡುವ ಮಾತುಗಳನ್ನು “ಬಂಧಿಸಿದ್ದೇವೆ” ಅಥವಾ “ಸೆರೆಗೆ ಹಾಕಿದ್ದೇವೆ” ಅಥವಾ “ವಿದೇಶಿ ಭೂಮಿಗೆ ಹೋಗುವುದಕ್ಕೆ ಬಲವಂತಿಕೆ ಮಾಡಿದ್ದೇವೆ” ಎಂದೂ ಅನುವಾದ ಮಾಡಬಹುದು.
* “ಬಂಧಿತರು” ಎನ್ನುವ ಪದವನ್ನು “ಸೆರೆಗೆ ಸಿಕ್ಕಿದ ಜನರು” ಅಥವಾ “ಬಾನಿಸರಾದ ಜನರು” ಎಂದೂ ಅನುವಾದ ಮಾಡಬಹುದು.
* ಸಂದರ್ಭಾನುಸಾರವಾಗಿ “ಸೆರೆ ಸಿಕ್ಕಿದ್ದಾರೆ” ಎನ್ನುವ ಪದವನ್ನು “ಸೆರೆವಾಸ” ಅಥವಾ “ಹೊರ ಹಾಕಲ್ಪಡುವುದು” ಅಥವಾ “ವಿದೇಶದಲ್ಲಿ ಜೀವಿಸುವುದಕ್ಕೆ ಬಲವಂತಿಕೆ ಮಾಡುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಬಾಬೆಲೋನ](../names/babylon.md), [ಹೊರದೂಡು](../other/exile.md), [ಸೆರೆ](../other/prison.md), [ಮುಟ್ಟುಗೋಲು](../other/seize.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೂರ್ವ.10:5-6](rc://*/tn/help/2co/10/05)
* [ಯೆಶಯಾ.20:3-4](rc://*/tn/help/isa/20/03)
* [ಯೆರೆ.43:1-3](rc://*/tn/help/jer/43/01)
* [ಲೂಕ.04:18-19](rc://*/tn/help/luk/04/18)
## ಪದ ಡೇಟಾ:
* Strong's: H1123, H1473, H1540, H1546, H1547, H2925, H6808, H7617, H7622, H7628, H7633, H7686, H7870, G161, G162, G163, G164, G2221