kn_tw/bible/other/burden.md

26 lines
3.4 KiB
Markdown

# ಹೊರೆ, ಹೊರೆಗಳು, ಭಾರವಾದ, ಪ್ರಯಾಸಕರವಾದ
## ಪದದ ಅರ್ಥವಿವರಣೆ:
ಹೊರೆ ಎನ್ನುವ ಪದಕ್ಕೆ ಭಾರವಾದದ್ದು ಎಂದರ್ಥ. ಈ ಪದವು ಅಕ್ಷರಾರ್ಥವಾಗಿ ಭಾರ ಹೊತ್ತಿಕೊಂಡು ಹೋಗುವ ಒಂದು ಪ್ರಾಣಿಯಂತೆ ಭೌತಿಕವಾದ ಭಾರವನ್ನು ಸೂಚಿಸುತ್ತದೆ. “ಹೊರೆ” ಎನ್ನುವ ಪದಕ್ಕೆ ಅನೇಕವಾದ ಸಾಂಕೇತಿಕ ಅರ್ಥಗಳಿವೆ:
* ಹೊರೆ ಎನ್ನುವುದು ಒಂದು ಕಠಿಣವಾದ ಕರ್ತವ್ಯವನ್ನು ಸೂಚಿಸುತ್ತದೆ ಅಥವಾ ಒಬ್ಬ ವ್ಯಕ್ತಿ ಮಾಡಬಹುದಾದ ತುಂಬಾ ಪ್ರಾಮುಖ್ಯವಾದ ಬಾಧ್ಯತೆಯನ್ನು ಸೂಚಿಸುತ್ತದೆ. ಅದಕ್ಕೆ ಆ ಹೊರೆಯನ್ನು ಹೊತ್ತಿಕೊಂಡು ಹೋಗುವ ವ್ಯಕ್ತಿಯನ್ನು ಕುರಿತು “ತಾಳಿಕೊಳ್ಳುತ್ತಿದ್ದಾನೆ” ಅಥವಾ “ಅತೀ ಹೆಚ್ಚಾದ ಭಾರವನ್ನು” “ಹೊತ್ತಿಕೊಂಡು ಹೋಗುತ್ತಿದ್ದಾನೆ” ಎಂದು ಹೇಳುತ್ತಾರೆ.
* ಒಬ್ಬ ಕ್ರೂರ ನಾಯಕನು ತಾನು ಆಳುತ್ತಿರುವ ಜನರ ಮೇಲೆ ಕಠಿಣವಾದ ಭಾರಗಳನ್ನು ಇಡಬಹುದು, ಉದಾಹರಣೆಗೆ ಬಹು ಹೆಚ್ಚಾದ ತೆರಿಗೆಗಳನ್ನು ಕಟ್ಟಬೇಕೆಂದು ಅವರನ್ನು ಬಲವಂತಿಕೆ ಮಾಡಬಹುದು.
* ಇನ್ನೊಬ್ಬರಿಗೆ ಭಾರವಾಗಿರಬಾರದೆಂದು ಬಯಸುವ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ತೊಂದರೆ ಕೊಡುವ ವ್ಯಕ್ತಿಯಾಗಿರಬಾರದು.
* ಒಬ್ಬ ವ್ಯಕ್ತಿಯ ಪಾಪದ ಅಪರಾಧವು ಅವನಿಗೆ ತುಂಬಾ ಹೊರೆಯಾಗಿರುತ್ತದೆ.
* “ಕರ್ತನ ಹೊರೆ” ಎನ್ನುವ ಪದವನ್ನು ಪ್ರವಾದಿ ತಪ್ಪದೇ ಜನರಿಗೆ ತಿಳಿಸುವ “ದೇವರಿಂದ ಸಂದೇಶ” ಎನ್ನುವದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲಾಗಿದೆ.
* “ಹೊರೆ” ಎನ್ನುವ ಪದವನ್ನು “ಬಾಧ್ಯತೆ” ಅಥವಾ “ಕರ್ತವ್ಯ” ಅಥವಾ “ಅತೀ ಹೆಚ್ಚಾದ ಭಾರ” ಅಥವಾ “ಸಂದೇಶ” ಎಂದು ಸಂದರ್ಭಕ್ಕೆ ತಕ್ಕಂತೆ ಅನುವಾದ ಮಾಡಿಕೊಳ್ಳಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಥೆಸ್ಸ.03:6-9](rc://*/tn/help/2th/03/06)
* [ಗಲಾತ್ಯ.06:1-2](rc://*/tn/help/gal/06/01)
* [ಗಲಾತ್ಯ.06:3-5](rc://*/tn/help/gal/06/03)
* [ಆದಿ.49:14-15](rc://*/tn/help/gen/49/14)
* [ಮತ್ತಾಯ.11:28-30](rc://*/tn/help/mat/11/28)
* [ಮತ್ತಾಯ.23:4-5](rc://*/tn/help/mat/23/04)
## ಪದ ಡೇಟಾ:
* Strong's: H92, H3053, H4614, H4853, H4858, H4864, H4942, H5445, H5447, H5448, H5449, H5450, H6006, G4, G916, G922, G1117, G2347, G2599, G2655, G5413