kn_tw/bible/other/bread.md

32 lines
4.9 KiB
Markdown

# ರೊಟ್ಟಿ
## ಪದದ ಅರ್ಥವಿವರಣೆ:
ಹಿಟ್ಟಿಗೆ ನೀರು ಮತ್ತು ಎಣ್ಣೆ ಬೆರಸಿ, ನಾದಿದ ಹಿಟ್ಟಾಗಿ ಮಾಡಿಕೊಂಡು, ಅದನ್ನು ವೃತ್ತಾಕಾರದಲ್ಲಿ ಮಾಡಿ, ಅದನ್ನು ಬೇಯಿಸಿ ರೊಟ್ಟಿಯನ್ನು ಮಾಡಲಾಗುತ್ತದೆ.
* ಆಂಗ್ಲದಲ್ಲಿ “ಲೋಫ್” ಎನ್ನುವ ಪದಕ್ಕೆ “ವೃತ್ತಾಕಾರದ ರೊಟ್ಟಿ” ಎಂದರ್ಥ.
* ರೊಟ್ಟಿಯ ನಾದಿದ ಹಿಟ್ಟನ್ನು ಸಹಜವಾಗಿ ಮೇಲಕ್ಕೆ ಉಬ್ಬಲು ಹುಳಿಯನ್ನು ಉಪಯೋಗಿಸುತ್ತಾರೆ.
* ರೊಟ್ಟಿಯನ್ನು ಹುಳಿಯಿಲ್ಲದಂತೆ ಕೂಡ ಮಾಡಬಹುದು, ಇದರಿಂದ ಅದು ಮೇಲಕ್ಕೆ ಉಬ್ಬುವುದಿಲ್ಲ. ಸತ್ಯವೇದದಲ್ಲಿ ಇದನ್ನು “ಹುಳಿಯಿಲ್ಲದ ರೊಟ್ಟಿ” ಎಂದು ಕರೆಯಲಾಗಿದೆ ಮತ್ತು ಇದು ಯೆಹೂದ್ಯರ ಪಸ್ಕ ಭೋಜನಕ್ಕಾಗಿ ಉಪಯೋಗಿಸುತ್ತಿದ್ದರು.
* ಸತ್ಯವೇದದ ಕಾಲಗಳಲ್ಲಿ ಅನೇಕಮಂದಿ ಜನರಿಗೆ ರೊಟ್ಟಿಯೇ ಮುಖ್ಯ ಆಹಾರವಾಗಿತ್ತು, ಈ ಪದವನ್ನು ಸತ್ಯವೇದದಲ್ಲಿ ಊಟವನ್ನು ಸೂಚಿಸುವಂತೆ ತುಂಬಾ ಸಹಜವಾಗಿ ಉಪಯೋಗಿಸುತ್ತಿದ್ದರು. (ಇದನ್ನು ನೋಡಿರಿ: [ಲಾಕ್ಷಣಿಕ ಪ್ರಯೋಗ](rc://*/ta/man/translate/figs-synecdoche))
* “ಸಮುಖದ ರೊಟ್ಟಿ” ಎನ್ನುವ ಮಾತು ದೇವರಿಗೆ ನೈವೇದ್ಯವಾಗಿ ಅರ್ಪಿಸುವುದಕ್ಕೆ ದೇವಾಲಯ ಭವನದಲ್ಲಿ ಅಥವಾ ಗುಡಾರದಲ್ಲಿ ಬಂಗಾರದ ಮೇಜಿನ ಮೇಲೆ ಇಟ್ಟಿರುವ ಹನ್ನೆರಡು ರೊಟ್ಟಿಗಳನ್ನು ಸೂಚಿಸುತ್ತದೆ. ಈ ರೊಟ್ಟಿಗಳು ಇಸ್ರಾಯೇಲ್ಯರ ಹನ್ನೆರಡು ಕುಲಗಳನ್ನು ಪ್ರತಿನಿಧಿಸುತ್ತವೆ ಮತ್ತು ಇವುಗಳನ್ನು ಕೇವಲ ಯಾಜಕರು ಮಾತ್ರವೇ ತಿನ್ನಬೇಕು. ಈ ಪದವನ್ನು “ದೇವರು ಅವರ ಮಧ್ಯೆದಲ್ಲಿ ನಿವಾಸ ಮಾಡುತ್ತಿದ್ದಾರೆಂದು ರೊಟ್ಟಿ ತೋರಿಸುತ್ತದೆ” ಎಂದೂ ಅನುವಾದ ಮಾಡಬೇಕು.
* “ಪರಲೋಕದಿಂದ ಬಂದ ರೊಟ್ಟಿ” ಎನ್ನುವ ಅಲಂಕಾರ ರೂಪದ ಮಾತು ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆದಾಡುತ್ತಿರುವಾಗ ಅವರಿಗಾಗಿ ದೇವರು ಕೊಟ್ಟ ಒಂದು ವಿಶೇಷವಾದ ಬಿಳಿ ಆಹಾರವಾದ “ಮನ್ನ”ವನ್ನು ಸೂಚಿಸುತ್ತದೆ.
* “ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ” ಎಂದು ಮತ್ತು “ನಾನೇ ಜೀವದ ರೊಟ್ಟಿ” ಎಂದು ಯೇಸು ಕೂಡ ಹೇಳಿದ್ದರು.
* ಯೇಸುವಿನ ಮರಣಕ್ಕೆ ಮುಂಚಿತವಾಗಿ ಯೇಸು ಮತ್ತು ತನ್ನ ಶಿಷ್ಯರು ಪಸ್ಕ ಭೋಜನವನ್ನು ತಿನ್ನುತ್ತಿರುವಾಗ, ಶಿಲುಬೆಯಲ್ಲಿ ಜಜ್ಜಲ್ಪಡುವ ತನ್ನ ದೇಹಕ್ಕೆ ಆ ಹುಳಿಯಿಲ್ಲದಿರುವ ಪಸ್ಕ ರೊಟ್ಟಿಯನ್ನು ಹೋಲಿಸಿ ಹೇಳಿದ್ದರು.
* “ರೊಟ್ಟಿ” ಎನ್ನುವ ಪದವನ್ನು ಸಹಜವಾಗಿ ಅನೇಕಬಾರಿ “ಆಹಾರ” ಎಂದು ಅನುವಾದ ಮಾಡಲಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಪಸ್ಕ](../kt/passover.md), [ಗುಡಾರ](../kt/tabernacle.md), [ದೇವಾಲಯ](../kt/temple.md), [ಹುಳಿಯಿಲ್ಲದ ರೊಟ್ಟಿ](../kt/unleavenedbread.md), [ಹುಳಿ](../other/yeast.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.02:46-47](rc://*/tn/help/act/02/46)
* ಅಪೊ.ಕೃತ್ಯ.27:33-35
* [ವಿಮೋ.16:13-15](rc://*/tn/help/act/27/33)
* [ಲೂಕ.09:12-14](rc://*/tn/help/exo/16/13)
* [ಮಾರ್ಕ.06:37-38](rc://*/tn/help/luk/09/12)
* [ಮತ್ತಾಯ.04:1-4](rc://*/tn/help/mrk/06/37)
* [ಮತ್ತಾಯ.11:18-19](rc://*/tn/help/mat/04/01)
## ಪದ ಡೇಟಾ:
* Strong's: H2557, H3899, H4635, H4682, G106, G740, G4286