kn_tw/bible/other/bowweapon.md

23 lines
2.7 KiB
Markdown

# ಬಿಲ್ಲು ಮತ್ತು ಬಾಣ, ಬಿಲ್ಲುಗಳು ಮತ್ತು ಬಾಣಗಳು
## ಪದದ ಅರ್ಥವಿವರಣೆ:
ಈ ವಿಧವಾದ ಸಾಧನೆಯನ್ನು ತಂತಿ ಬಿಲ್ಲಿನಿಂದ ಪ್ರಯೋಗಿಸುವ ಬಾಣಗಳನ್ನು ಒಳಗೊಂಡಿರುತ್ತದೆ. ಸತ್ಯವೇದ ಕಾಲದಲ್ಲಿ ಇದನ್ನು ಶತ್ರುಗಳ ವಿರುದ್ಧ ಹೋರಾಡುವುದಕ್ಕೆ, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
* ಬಿಲ್ಲು ಎನ್ನುವ ಸಾಧನವನ್ನು ಲೋಹ, ಎಲುಬು, ಕಟ್ಟಿಗೆ ಅಥವಾ ಜಿಂಕೆಯ ಕವಲ್ಗೊಂಬಿನಂಥಹ ಇತರ ಗಟ್ಟಿಯಾದ ವಸ್ತುವಿನಿಂದ ತಯಾರಿಸುತ್ತಾರೆ. ಇದು ಬಾಗಿದ ಆಕಾರವನ್ನು ಹೊಂದಿರುತ್ತದೆ ಮತ್ತು ಇದನ್ನು ತಂತಿ, ಹುರಿ, ಅಥವಾ ಬಳ್ಳಿ ಎನ್ನುವದರಲ್ಲಿ ಯಾವುದಾದರೊಂದಿಗೆ ತುಂಬಾ ಬಿಗಿಯಾಗಿ ಕಟ್ಟಿರುತ್ತಾರೆ.
* ಒಂದು ಬಾಣವು ತೀಕ್ಷಣವಾಗಿದ್ದು ತೆಳುವಾಗಿ ಈಟಿಯ ಕೊನೆಯ ಭಾಗದಂಥೆ ಬಾಣಕ್ಕೆ ಒಂದು ಕಡೆಗೆ ಇಟ್ಟಿರುತ್ತಾರೆ. ಪುರಾತನ ಕಾಲದಲ್ಲಿ ಬಾಣಗಳನ್ನು ಕಟ್ಟಿಗೆ, ಎಲುಬು, ಕಲ್ಲು, ಅಥವಾ ಲೋಹಗಳಿಂದ ತಂಬಾ ವಿಚಿತ್ರವಾಗಿ ಮಾಡುತ್ತಿದ್ದರು.
* ಬಿಲ್ಲುಗಳು ಮತ್ತು ಬಾಣಗಳು ಸಹಜವಾಗಿ ಬೇಟೆಗಾರರಿಂದ ಮತ್ತು ಯೋಧರಿಂದ ಉಪಯೋಗಿಸಲ್ಪಡುತ್ತಿದ್ದವು.
* “ಬಾಣ” ಎನ್ನುವ ಪದವು ಕೆಲವೊಂದುಬಾರಿ ಶತ್ರುವಿನ ಧಾಳಿ ಅಥವಾ ದೈವಿಕ ತೀರ್ಪನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅಲಂಕಾರ ರೂಪದಲ್ಲಿ ಉಪಯೋಗಿಸಿರುತ್ತಾರೆ.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.21:14-16](rc://*/tn/help/gen/21/14)
* [ಹಬ.03:9-10](rc://*/tn/help/hab/03/09)
* [ಯೋಬ.29:20-22](rc://*/tn/help/job/29/20)
* [ಪ್ರಲಾಪ.02:3-4](rc://*/tn/help/lam/02/03)
* [ಕೀರ್ತನೆ.058:6-8](rc://*/tn/help/psa/058/006)
## ಪದ ಡೇಟಾ:
* Strong's: H2671, H7198, G5115