kn_tw/bible/other/bold.md

23 lines
3.2 KiB
Markdown

# ಧೈರ್ಯ, ಧೈರ್ಯವಾಗಿ, ಧೈರ್ಯಶಾಲಿ
## ಪದದ ಅರ್ಥವಿವರಣೆ:
ಈ ಪದವು ಕಷ್ಟ ಮ್ಮತ್ತು ಅಪಾಯಕರ ಸಂದರ್ಭದಲ್ಲಿಯೂ ಸರಿಯಾದದ್ದನ್ನು ಮಾಡುವುದಕ್ಕೆ ಮತ್ತು ಸತ್ಯವನ್ನೇ ಮಾತಾಡುವುದಕ್ಕೆ ಧೈರ್ಯವನ್ನು ಮತ್ತು ಆತ್ಮವಿಶ್ವಾಸವನ್ನು ಹೊಂದಿರುವದನ್ನು ಸೂಚಿಸುತ್ತದೆ.
* “ಧೈರ್ಯವುಳ್ಳ” ಒಬ್ಬ ವ್ಯಕ್ತಿ ಸರಿಯಾದದ್ದನ್ನು, ಒಳ್ಳೆಯದನ್ನು ಮಾಡುವುದಕ್ಕೆ ಮತ್ತು ಹೇಳುವುದಕ್ಕೆ ಭಯಪಡುವುದಿಲ್ಲ, ದುಷ್ಕ್ರುತ್ಯಕ್ಕೆ ಒಳಗಾದ ಜನರನ್ನು ರಕ್ಷಿಸುವುದಕ್ಕೆ ಹಿಂಜರಿಯುವುದಿಲ್ಲ. ಈ ಪದವನ್ನು “ಪರಾಕ್ರಮ” ಅಥವಾ “ಭಯವಿಲ್ಲದವನು” ಎಂದೂ ಅನುವಾದ ಮಾಡಬಹುದು.
* ಹೊಸ ಒಡಂಬಡಿಕೆಯಲ್ಲಿ ಶಿಷ್ಯರು ಸೆರೆಮನೆಗೆ ಹಾಕುವ ಅಥವಾ ಕೊಲ್ಲುವ ಅಪಾಯದ ಹೊರತಾಗಿಯೂ ಬಹಿರಂಗ ಪ್ರದೇಶಗಳಲ್ಲಿ ಕ್ರಿಸ್ತನ ಬಗ್ಗೆ "ಧೈರ್ಯದಿಂದ" ಬೋಧಿಸುವುದನ್ನು ಮುಂದುವರಿಸಿದನು. ಇದನ್ನು “ಆತ್ಮವಿಶ್ವಾಸದಿಂದ” ಅಥವಾ “ಬಲವಾದ ಧೈರ್ಯದಿಂದ” ಅಥವಾ “ಪರಾಕ್ರಮದಿಂದ” ಎಂದು ಅನುವಾದ ಮಾಡಬಹುದು.
* ಶಿಲುಬೆಯ ಮೇಲೆ ಕ್ರಿಸ್ತನು ಮರಣವನ್ನು ಸೋಲಿಸಿದ ಸುವಾರ್ತೆಯನ್ನು ಮಾತನಾಡುವುದರಲ್ಲಿ ಈ ಆದಿ ಶಿಷ್ಯರ “ಧೈರ್ಯವು” ಇಸ್ರಾಯೇಲ್ ದೇಶದಲ್ಲೆಲ್ಲಾ ಮತ್ತು ಇತರ ಸುತ್ತಮುತ್ತಲಿರುವ ದೇಶದಲ್ಲೆಲ್ಲಾ ಸುವಾರ್ತೆಯು ಹರಡುವಂತೆ ಮಾಡಿತು ಮತ್ತು ಕೊನೆಗೆ, ಭೂಮಿಯ ಕಟ್ಟಕಡೆಯವರೆಗೆ ಈ ಸುವಾರ್ತೆಯು ತಲುಪುವಂತೆ ಮಾಡಿತು. “ಸಾಹಸ” ಎನ್ನುವ ಪದವನ್ನು “ನಿಶ್ಚಯತೆಯಿಂದಿರುವ ಧೈರ್ಯ” ಎಂಬುದಾಗಿಯೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಿಶ್ಚಯತೆ](../other/confidence.md), [ಸುವಾರ್ತೆ](../kt/goodnews.md), [ವಿಮೋಚನೆ](../kt/redeem.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಯೋಹಾನ.02:28](rc://*/tn/help/1jn/02/28)
* [1 ಥೆಸ್ಸ.02:1-2](rc://*/tn/help/1th/02/01)
* [2 ಕೊರಿಂಥ.03:12-13](rc://*/tn/help/2co/03/12)
* [ಅಪೊ.ಕೃತ್ಯ.04:13](rc://*/tn/help/act/04/13)
## ಪದ ಡೇಟಾ:
* Strong's: H982, H5797, G662, G2292, G3618, G3954, G3955, G5111, G5112