kn_tw/bible/other/beast.md

30 lines
3.6 KiB
Markdown

# ಮೃಗ
## ಸತ್ಯಾಂಶಗಳು:
ಸತ್ಯವೇದದಲ್ಲಿ, “ಪಶು” ಎನ್ನುವ ಪದವನ್ನು “ಮೃಗ” ಎನ್ನುವ ಪದದ ಮತ್ತೊಂದು ರೀತಿಯಾದ ಹೇಳಿಕೆಯಾಗಿದೆ.
* ಕಾಡಿನಲ್ಲಿ ಅಥವಾ ಹೊಲದಲ್ಲಿ ಸ್ವಾತಂತ್ರವಾಗಿ ಜೀವಿಸುವ ಮೃಗವನ್ನು ಮತ್ತು ಮನುಷ್ಯರಿಂದ ತರಬೇತಿ ಹೊಂದದಿರುವ ಮೃಗವನ್ನು
ಕಾಡು ಪ್ರಾಣಿ ಎನ್ನುತ್ತಾರೆ.
* ಸಾದು ಮೃಗ ಎನ್ನುವ ಪಶು ಜನರ ಜೊತೆಯಲ್ಲಿ ಜೀವಿಸುತ್ತದೆ ಮತ್ತು ಆಹಾರಕ್ಕಾಗಿ ಅಥವಾ ಹೊಲ ಉಳುಮೆ ಆ ರೀತಿಯಾದ ಕೆಲಸ ಕಾರ್ಯಗಳನ್ನು ಮಾಡಲು ಇಟ್ಟುಕೊಳ್ಳುತ್ತಾರೆ. ಈ ರೀತಿಯದ ಪಶುವನ್ನು ಸಂಭೋದಿಸಲು “ಪಶುಸಂಪತ್ತು” ಅಥವಾ “ಜಾನುವಾರು” ಎಂದು ಕರೆಯುತ್ತಾರೆ.
* ಹಳೆಯ ಒಡಂಬಡಿಕೆಯಲ್ಲಿ ದಾನಿಯೇಲನ ಗ್ರಂಥ ಮತ್ತು ಹೊಸ ಒಡಂಬಡಿಕೆಯಲ್ಲಿ ಪ್ರಕಟನೆ ಗ್ರಂಥದಲ್ಲಿ ದೇವರನ್ನು ಎದುರಿಸುವ ದುಷ್ಟ ಶಕ್ತಿಗಳನ್ನು ಮತ್ತು ಅಧಿಕಾರಗಳನ್ನು ಸೂಚಿಸಲು ಮೃಗವನ್ನು ಹೋಲಿಸಿದ ದರ್ಶನಗಳನ್ನು ಕುರಿತಾಗಿ ಬರೆಯಲ್ಪಟ್ಟಿದೆ. (ಇದನ್ನು ನೋಡಿರಿ: [ರೂಪಕಾಲಂಕಾರ](rc://*/ta/man/translate/figs-metaphor))
* ಈ ಪ್ರಕಾರವಾದ ಪಶುಗಳು ಹಲವಾರು ತಲೆಗಳು ಮತ್ತು ಅನೇಕ ಕೊಂಬುಗಳನ್ನು ಹೊಂದಿರುವಂತೆ ಅನೇಕವಾದ ವಿಚಿತ್ರ ವೈಶಿಷ್ಟ್ಯಗಳನ್ನು ಹೊಂದಿದ್ದವು. ಅವು ಅನೇಕಬಾರಿ ಅಧಿಕಾರ ಮತ್ತು ಶಕ್ತಿ ಹೊಂದಿರುತ್ತವೆ, ಅವು ರಾಜ್ಯಗಳನ್ನು, ದೇಶಗಳನ್ನು ಅಥವಾ ರಾಜಕೀಯ ಅಧಿಕಾರಗಳನ್ನು ಸೂಚಿಸಬಹುದು.
* “ಪ್ರಾಣಿ” ಅಥವಾ “ಸೃಷ್ಟಿಸಲ್ಪಟ್ಟ ವಸ್ತು” ಅಥವಾ “ಪಶು” ಅಥವಾ “ಕಾಡು ಪ್ರಾಣಿ,” ಎಂದು ಅನೇಕ ವಿಧಗಳಾಗಿ ಸಂದರ್ಭಕ್ಕೆ ತಕ್ಕಹಾಗೆ ಅನುವಾದಿಸಬಹುದು.
(ಈ ಪದಗಳನ್ನು ಸಹ ನೋಡಿರಿ : [ಅಧಿಕಾರ](../kt/authority.md), [ದಾನಿಯೇಲ್](../names/daniel.md), [ಜಾನುವಾರು](../other/livestock.md), [ಪ್ರಜೆ](../other/nation.md), [ಅಧಿಕಾರ](../kt/power.md), [ಪ್ರತ್ಯಕ್ಷ](../kt/reveal.md), [ಬೆಲ್ಜೆಬೂಲ](../names/beelzebul.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಕೊರಿಂಥ.15:32](rc://*/tn/help/1co/15/32)
* [1 ಸಮು.17:44](rc://*/tn/help/1sa/17/44)
* [2 ಪೂರ್ವ.25:18](rc://*/tn/help/2ch/25/18)
* [ಯೆರೆ.16:1-4](rc://*/tn/help/jer/16/01)
* [ಗಲಾತ್ಯ.07:21](rc://*/tn/help/lev/07/21)
* [ಆದಿ.049:12-13](rc://*/tn/help/psa/049/012)
## ಪದ ಡೇಟಾ:
* Strong's: H338, H929, H1165, H2123, H2416, H2423, H2874, H3753, H4806, H7409, G2226, G2341, G2342, G2934, G4968, G5074