kn_tw/bible/other/astray.md

31 lines
4.1 KiB
Markdown

# ದಾರಿತಪ್ಪುವುದು, ದಾರಿ ತಪ್ಪಿಹೋಗುವುದು, ದಾರಿ ತಪ್ಪಿಹೋದ, ದಾರಿ ತಪ್ಪುವಂತೆ ನಡೆಸು, ತಪ್ಪಿಸಿಕೊಳ್ಳು,
## ಪದದ ಅರ್ಥವಿವರಣೆ:
“ದಾರಿತಪ್ಪುವುದು” ಮತ್ತು “ದಾರಿ ತಪ್ಪಿಹೋಗುವುದು” ಎನ್ನುವ ಪದಗಳಿಗೆ ದೇವರ ಚಿತ್ತಕ್ಕೆ ಅವಿಧೇಯರಾಗುವುದು ಎಂದರ್ಥ. “ತಪ್ಪಿಹೋದ” ಜನರು ತಾವು ದೇವರಿಗೆ ಅವಿಧೇಯತೆಯನ್ನು ತೋರಿಸುವುದಕ್ಕೆ ಇತರ ಜನರನ್ನು ಅಥವಾ ಇತರ ಪರಿಸ್ಥಿತಿಗಳನ್ನು ಅನುಮತಿಸಿಕೊಂಡಿರುತ್ತಾರೆ.
* “ದಾರಿತಪ್ಪುವುದು” ಎನ್ನುವ ಪದವು ಸ್ಪಷ್ಟವಾಗಿ ಒಂದು ಮಾರ್ಗವನ್ನು ಅಥವಾ ಒಂದು ಸುರಕ್ಷಿತವಾದ ಸ್ಥಳವನ್ನು ಬಿಟ್ಟು ತಪ್ಪಾದ ಮತ್ತು ಅತೀ ಅಪಾಯಕರವಾದ ಮಾರ್ಗಕ್ಕೆ ಹೋಗುವ ದೃಶ್ಯವನ್ನು ನಮಗೆ ಕೊಡುತ್ತಿದೆ.
* ತನ್ನ ಕುರುಬನ ಹಸಿರು ಹುಲ್ಲುಗಾವಲನ್ನು ಬಿಟ್ಟು ತಪ್ಪಿಹೋದ ಕುರಿಯನ್ನು “ದಾರಿ ತಪ್ಪಿಹೋಗಿದೆ” ಎಂದು ಕರೆಯುತ್ತಾರೆ. ದೇವರು ಪಾಪ ಸ್ವಭಾವದಿಂದ ಇರುವ ಜನರನ್ನು “ತಪ್ಪಿಹೋಗಿರುವ” ಮತ್ತು ತನ್ನ ಕುರುಬನನ್ನು ಬಿಟ್ಟು ಹೋಗಿರುವ ಕುರಿಗೆ ಹೋಲಿಸುತ್ತಿದ್ದಾರೆ.
## ಅನುವಾದ ಸಲಹೆಗಳು:
* “ದಾರಿ ತಪ್ಪಿಹೋಗುವುದು” ಎನ್ನುವ ಮಾತನ್ನು “ದೇವರಿಂದ ದೂರ ಆಗುವುದು” ಅಥವಾ “ದೇವರ ಚಿತ್ತದಿಂದ ದೂರಾಗಿ ಕೆಟ್ಟ ಮಾರ್ಗವನ್ನು ಹಿಡಿಯುವುದು “ ಅಥವಾ “ದೇವರಿಗೆ ವಿಧೇಯತೆ ತೋರಿಸುವುದನ್ನು ನಿಲ್ಲಿಸು” ಅಥವಾ “ದೇವರಿಂದ ದೂರಾಗುವ ಮಾರ್ಗದಲ್ಲಿ ಜೀವಿಸು” ಎಂದೂ ಅನುವಾದ ಮಾಡಬಹುದು.
* “ದಾರಿ ತಪ್ಪಿಹೋಗುವಂತೆ ಒಬ್ಬರನ್ನು ನಡೆಸುವುದು” ಎನ್ನುವ ಮಾತನ್ನು “ಯಾರಾದರೊಬ್ಬರು ದೇವರಿಗೆ ಅವಿಧೇಯತೆಯನ್ನು ತೋರಿಸುವುದಕ್ಕೆ ಕಾರಣವಾಗು” ಅಥವಾ “ಇನ್ನೊಬ್ಬರು ದೇವರಿಗೆ ವಿಧೇಯತೆಯನ್ನು ತೋರಿಸುವುದನ್ನು ನಿಲ್ಲಿಸುವುದಕ್ಕೆ ಪ್ರಭಾವಗೊಳಿಸು” ಅಥವಾ “ಕೆಟ್ಟ ಮಾರ್ಗದಲ್ಲಿ ಹೋಗುತ್ತಿರುವ ನಿಮ್ಮನ್ನು ಅನುಸರಿಸುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅವಿಧೇಯತೆ](../other/disobey.md), [ಕುರುಬ](../other/shepherd.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಯೋಹಾನ.03:07](rc://*/tn/help/1jn/03/07)
* [2 ತಿಮೊಥೆ.03:10-13](rc://*/tn/help/2ti/03/13)
* [ವಿಮೋ.23:4-5](rc://*/tn/help/exo/23/04)
* [ಯೆಹೆ.48:10-12](rc://*/tn/help/ezk/48/10)
* [ಮತ್ತಾಯ.18:13](rc://*/tn/help/mat/18/13)
* [ಮತ್ತಾಯ.24:05](rc://*/tn/help/mat/24/05)
* [ಕೀರ್ತನೆ.058:03](rc://*/tn/help/psa/058/003)
* [ಕೀರ್ತನೆ.119:110](rc://*/tn/help/psa/119/110)
## ಪದ ಡೇಟಾ:
* Strong's: H5080, H7683, H7686, H8582, G4105, G5351