kn_tw/bible/other/ambassador.md

26 lines
3.6 KiB
Markdown

# ರಾಯಭಾರಿ, ಪ್ರತಿನಿಧಿ
## ಪದದ ಅರ್ಥವಿವರಣೆ:
ರಾಯಭಾರಿ ಎನ್ನುವವರು ವಿದೇಶಿಗಳಿಗೆ ಸಂಬಂಧವನ್ನುಂಟು ಮಾಡುವುದರಲ್ಲಿ ತಮ್ಮ ದೇಶದ ಪಕ್ಷವಾಗಿ ಪ್ರತಿನಿಧಿ ವಹಿಸುವುದಕ್ಕೆ ಅಧಿಕಾರಿಗಳಾಗಿ ನಿಯಮಿಸಲ್ಪಟ್ಟವರು, ಈ ಪದವು ಅಲಂಕಾರ ರೂಪದಲ್ಲಿಯೂ ಉಪಯೋಗಿಸಲ್ಪಟ್ಟಿದೆ ಮತ್ತು ಇದನ್ನು ಅತೀ ಹೆಚ್ಚಾಗಿ ಸಾಧಾರಣವಾಗಿ “ಪ್ರತಿನಿಧಿ” ಎಂದೂ ಅನುವಾದ ಮಾಡುತ್ತಾರೆ.
* ರಾಯಭಾರಿ ಅಥವಾ ಪ್ರತಿನಿಧಿ ಎನ್ನುವವರು ತಮ್ಮನ್ನು ಕಳುಹಿಸಿದ ಪಭುತ್ವದಿಂದ ಅಥವಾ ಒಬ್ಬ ವ್ಯಕ್ತಿಯಿಂದ ಕೊಟ್ಟ ಸಂದೇಶವನ್ನು ಜನರಿಗೆ ತಿಳಿಸುತ್ತಾರೆ.
* “ಪ್ರತಿನಿಧಿ” ಅತೀ ಸಾಧಾರಣವಾದ ಪದವು ಒಬ್ಬ ವ್ಯಕ್ತಿ ಯಾರ ಪಕ್ಷವಾಗಿ ಪ್ರತಿನಿಧಿಯಾಗಿದ್ದಾರೋ, ಅವರ ಪಕ್ಷವಾಗಿ ಮಾತನಾಡುವುದಕ್ಕೆ ಮತ್ತು ನಡೆದುಕೊಳ್ಳುವುದಕ್ಕೆ ಅಧಿಕಾರ ಹೊಂದಿದವರನ್ನು ಸೂಚಿಸುತ್ತದೆ.
* ಕ್ರೈಸ್ತರೆಲ್ಲರೂ ಕ್ರಿಸ್ತನ “ರಾಯಭಾರಿಗಳು” ಅಥವಾ “ಪ್ರತಿನಿಧಿಗಳು” ಎಂದು ಅಪೊಸ್ತಲನಾದ ಪೌಲನು ತಿಳಿಸಿದ್ದಾನೆ. ಅವರು ಈ ಲೋಕದಲ್ಲಿ ಕ್ರಿಸ್ತನಿಗೆ ಪ್ರತಿನಿಧಿಗಳಾಗಿರುವುದರಿಂದ, ಅವರು ಇತರರಿಗೆ ಆತನ ಸಂದೇಶವನ್ನು ಹಂಚುವವರಾಗಿರುತ್ತಾರೆ.
* ಸಂದರ್ಭಕ್ಕೆ ತಕ್ಕಂತೆ, “ಅಧಿಕೃತ ಪ್ರತಿನಿಧಿ” ಅಥವಾ “ನೇಮಿಸಿಲ್ಪಟ್ಟ ದೂತ” ಅಥವಾ “ಆಯ್ಕೆಮಾಡಿಕೊಂಡ ಪ್ರತಿನಿಧಿ” ಅಥವಾ “ದೇವರಿಂದ ಆಯ್ಕೆ ಮಾಡಲ್ಪಟ್ಟ ಪ್ರತಿನಿಧಿ” ಎಂದೂ ಈ ಪದವನ್ನು ಅನುವಾದ ಮಾಡಬಹುದು.
* “ರಾಯಭಾರಿಗಳ ನಿಯೋಗ” ಎನ್ನುವ ಮಾತನ್ನು “ಕೆಲವೊಂದು ಅಧೀಕೃತ ಸಂದೇಶಕರು” ಅಥವಾ “ನೇಮಿಸಲ್ಪಟ್ಟ ಪ್ರತಿನಿಧಿಗಳ ಗುಂಪು” ಅಥವಾ “ಎಲ್ಲಾ ಜನರಿಗೋಸ್ಕರ ಮಾತನಾಡುವುದಕ್ಕೆ ಜನರ ಅಧೀಕೃತ ಪಕ್ಷ” ಎಂಬುದಾಗಿಯೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: /[ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ದೂತ ಅಥವಾ ಸಂದೇಶವಾಹಕ](../other/messenger.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಎಫೆಸ.06:20](rc://*/tn/help/eph/06/20)
* [ಲೂಕ.14:31-33](rc://*/tn/help/luk/14/31)
* [ಲೂಕ.19:13-15](rc://*/tn/help/luk/19/13)
## ಪದ ಡೇಟಾ:
* Strong's: H3887, H4135, H4136, H4397, H6735, H6737, G4243