kn_tw/bible/other/age.md

2.7 KiB

ವಯಸ್ಸು, ವೃದ್ದ

ಪದದ ಅರ್ಥ ವಿವರಣೆ:

“ವಯಸ್ಸು” ಎನ್ನುವ ಪದವು ಒಬ್ಬ ವ್ಯಕ್ತಿ ಎಷ್ಟು ವರ್ಷಕಾಲ ಜೀವಿಸಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ. ಇದನ್ನು ಸಹಜವಾಗಿ ಒಂದು ಕಾಲಾವದಿಯನ್ನು ಸೂಚಿಸುವುದಕ್ಕೆ ಕೂಡ ಉಪಯೋಗಿಸುತ್ತಾರೆ.

  • ಒಂದು ವಿಸ್ತಾರವಾದ ಕಾಲಾವಧಿಯನ್ನು ಹೇಳುವುದಕ್ಕೆ ಕೂಡ ಇತರ ಪದಗಳನ್ನು ಉಪಯೋಗಿಸುತ್ತಾರೆ, ಅವು ಯಾವುವೆಂದರೆ, “ಯುಗ” ಮತ್ತು “ಋತು”.
  • ದುಷ್ಟತನ, ಪಾಪ ಮತ್ತು ಅವಿಧೇಯತೆಯೆಲ್ಲವುಗಳು ತುಂಬಿದ ಈ ಪ್ರಸ್ತುತ ಭೂಮಿಯನ್ನು “ಈ ಯುಗ” ಎಂದು ಯೇಸು ಸೂಚಿಸಿದ್ದಾರೆ.
  • ಹೊಸ ಯುಗ ಮತ್ತು ಹೊಸ ಭೂಮಿಯ ಮೇಲೆ ನೀತಿಯು ಆಳುವ ಭವಿಷ್ಯದ ಯುಗ ಇರುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ತಕ್ಕಂತೆ, “ವಯಸ್ಸು” ಎನ್ನುವ ಪದವನ್ನು “ಯುಗ” ಅಥವಾ “ಕಳೆದ ವರ್ಷಗಳ ಸಂಖ್ಯೆ” ಅಥವಾ “ಕಾಲಾವಧಿ” ಅಥವಾ “ಸಮಯ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಅತೀ ವೃದ್ಧ ಕಾಲ” ಎನ್ನುವ ಪದವನ್ನು “ನಡೆದ ಅನೇಕ ವರ್ಷಗಳು” ಅಥವಾ “ಆತನು ವೃದ್ಧ ವಯಸ್ಸಿನಲ್ಲಿರುವಾಗ” ಅಥವಾ “ಆತನು ಬದುಕಿದ ತುಂಬಾ ಹೆಚ್ಚಿನ ಕಾಲ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಈ ಪ್ರಸ್ತುತ ದುಷ್ಟ ಕಾಲ” ಎನ್ನುವ ಮಾತು “ಜನರೆಲ್ಲರು ಅತೀ ದುಷ್ಟರಾಗಿ ನಡೆದುಕೊಳ್ಳುವ ಈ ಪ್ರಸ್ತುತ ಸಮಯದಲ್ಲಿ ಅಥವಾ ಕಾಲದಲ್ಲಿ” ಎನ್ನುವ ಅರ್ಥವನ್ನು ಕೊಡುತ್ತದೆ.

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: G165, G1074