kn_tw/bible/other/afflict.md

35 lines
4.8 KiB
Markdown

# ತೊಂದರೆ, ಪೀಡಿತ, ದುಃಖ, ನೋವು, ಸಂಕಷ್ಟಗಳು
## ಪದದ ಅರ್ಥ ವಿವರಣೆ:
“ತೊಂದರೆ” ಎನ್ನುವ ಪದಕ್ಕೆ ಒಬ್ಬರಿಗೆ ತೊಂದರೆ ಕೊಡುವುದು ಅಥವಾ ಅವರಿಗೆ ದುಃಖವನ್ನುಂಟು ಮಾಡುವುದು ಎಂದರ್ಥ. “ದುಃಖ” ಎನ್ನುವುದು ಒಂದು ರೋಗ, ಭಾವೋದ್ವೇಗದ ದುಃಖ, ಅಥವಾ ಇವರಿಂದ ಉಂಟಾಗುವ ಇತರ ದುರಂತ.
* ದೇವರು ತನ್ನ ಜನರನ್ನು ರೋಗಗಳಿಂದ ನೋಯಿಸಿದನು ಅಥವಾ ಅವರೆಲ್ಲರು ಆತನ ಬಳಿಗೆ ಹಿಂದಿರುಗಿ ಬರಲು ಮತ್ತು ಅವರ ಪಾಪಗಳನ್ನು ಒಪ್ಪಿಕೊಳ್ಳಲು ಅವರಿಗೆ ಇತರ ಎಲ್ಲಾ ಸಂಕಷ್ಟಗಳನ್ನು ಕೊಟ್ಟಿದ್ದನು.
* ಐಗುಪ್ತ ಅರಸನು ದೇವರಿಗೆ ಅವಿಧೇಯತೆಯನ್ನು ತೋರಿಸಿದ್ದರಿಂದ ದೇವರು ಐಗುಪ್ತ ಜನರಿಗೆ ತೊಂದರೆಯನ್ನುಂಟು ಮಾಡಿದನು ಅಥವಾ ಮಾರಿರೋಗಗಳು ಬರುವಂತೆ ಮಾಡಿದನು.
* “ತೊಂದರೆಯಲ್ಲಿರುವುದು” ಎಂದರೆ ಒಂದು ವಿಧವಾದ ಬಾಧೆಯನ್ನು ಅನುಭವಿಸುವುದು ಎಂದರ್ಥ, ಅದು ರೋಗ, ಹಿಂಸೆ, ಅಥವಾ ಭಾವೋದ್ವೇಗದ ದುಃಖವಾಗಿರಬಹುದು.
## ಅನುವಾದ ಸಲಹೆಗಳು:
* ಇನ್ನೊಬ್ಬರಿಗೆ ತೊಂದರೆ ಕೊಡುವುದೆನ್ನುವುದನ್ನು “ಇನ್ನೊಬ್ಬರು ತೊಂದರೆಗಳನ್ನು ಅನುಭವಿಸುವಂತೆ ಮಾಡುವುದು” ಅಥವಾ “ಇನ್ನೊಬ್ಬರು ಹಿಂಸೆಯನ್ನು ಹೊಂದುವಂತೆ ಮಾಡುವುದು” ಅಥವಾ “ತೊಂದರೆಯಾಗುವಂತೆ ಮಾಡುವುದು” ಎಂದು ಅನುವಾದ ಮಾಡಬಹುದು.
* “ತೊಂದರೆ” ಎನ್ನುವ ಪದವನ್ನು ಕೆಲವೊಂದು ಸಂದರ್ಭಗಳಲ್ಲಿ “ನಡೆಯುವಂತೆ ಮಾಡುವುದು” ಅಥವಾ “ಬರುವಂತೆ ಮಾಡುವುದು” ಅಥವಾ “ಹಿಂಸೆಯನ್ನು ತರುವುದು” ಎಂದು ಅನುವಾದ ಮಾಡಬಹುದು.
* “ಕುಷ್ಠ ರೋಗದಿಂದ ಇನ್ನೊಬ್ಬರಿಗೆ ತೊಂದರೆಯನ್ನು ಕೊಡು” ಎನ್ನುವ ಮಾತನ್ನು “ಕುಷ್ಠ ರೋಗದಿಂದ ನರಳುವಂತೆ ಇನ್ನೊಬ್ಬರಿಗೆ ತೊಂದರೆ ಕೊಡು” ಎಂದು ಅನುವಾದ ಮಾಡಬಹುದು.
* ಜನರನ್ನು ಅಥವಾ ಪ್ರಾಣಿಗಳನ್ನು “ತೊಂದರೆಗೊಳಿಸುವುದಕ್ಕೆ” ಒಂದು ಮಾರಿರೋಗವನ್ನು ಅಥವಾ ವಿಪತ್ತನ್ನು ಕಳುಹಿಸಿದಾಗ, ಇದನ್ನು “ಹಿಂಸೆ ಹೊಂದುವಂತೆ ಮಾಡು” ಎಂದು ಅನುವಾದ ಮಾಡಬಹುದು.
* ಸಂದರ್ಭ ಅನುಸಾರವಾಗಿ, “ತೊಂದರೆ” ಎನ್ನುವ ಪದವನ್ನು “ವಿಪತ್ತು” ಅಥವಾ “ರೋಗ” ಅಥವಾ “ಹಿಂಸೆ” ಅಥವಾ “ಮಹಾ ಯಾತನೆ” ಎಂಬುದಾಗಿಯೂ ಅನುವಾದ ಮಾಡಬಹುದು.
* “ಇನ್ನೊಂದರಿಂದ ಪೀಡಿಸಲ್ಪಡುವದು” ಎನ್ನುವ ಮಾತನ್ನು “ಇನ್ನೊಂದರಿಂದ ಹಿಂಸಿಸಲ್ಪಡುವುದು” ಅಥವಾ “ರೋಗವನ್ನು ಅನುಭವಿಸುವುದು” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಕುಷ್ಟು ರೋಗ](../other/leprosy.md), [ಮಾರಿ ರೋಗ](../other/plague.md), [ಶ್ರಮೆ](../other/suffer.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಥೆಸ್ಸ.01:6-8](rc://*/tn/help/2th/01/06)
* [ಆಮೋಸ.05:12-13](rc://*/tn/help/amo/05/12)
* [ಕೊಲೊಸ್ಸ.01:24-27](rc://*/tn/help/col/01/24)
* [ವಿಮೋ.22:22-24](rc://*/tn/help/exo/22/22)
* [ಆದಿ.12:17-20](rc://*/tn/help/gen/12/17)
* [ಆದಿ.15:12-13](rc://*/tn/help/gen/15/12)
* [ಆದಿ.29:31-32](rc://*/tn/help/gen/29/31)
## ಪದ ಡೇಟಾ:
* Strong's: H205, H1790, H3013, H3905, H3906, H4157, H4523, H6031, H6039, H6040, H6041, H6862, H6869, H6887, H7451, H7489, H7667, G2346, G2347, G2552, G2553, G2561, G3804, G4777, G4778, G5003